
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು, ಕಾಯಕವೇ ಕೈಲಾಸ ಎಂಬ ಮಾತಲ್ಲಿ ಬಸವಣ್ಣನವರ ತತ್ವ ಸಿದ್ಧಾಂತ ಅವರ ವಚನ ಸಾಹಿತ್ಯಗಳು ಇಂದಿಗೂ ಅಮರವಾಗಿ ಉಳಿದಿವೆ, ದೇಶ ಹೊರದೇಶಗಳಲ್ಲೂ ಅವರ ಕೀರ್ತಿ ಉಜ್ವಲವಾಗಿ ಬೆಳೆಯುತ್ತಿದೆ ಅವರ ಪ್ರತಿಮೆಯನ್ನು ಹೊರದೇಶಗಳಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡುತ್ತಾರೆ, ಸಮಾಜದ ಕೀಳರಿಮೆ ಹಾಗೂ ಮೌಢ್ಯತೆಯನ್ನು ಹೋಗಲಾಡಿಸಲು ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ಮುಖ್ಯವಾಹಿನಿಗೆ ಬರಬೇಕು ಎಲ್ಲರೂ ಸರಿಸಮನಾಗಿ ಬಾಳಬೇಕು ಸಮಾಜದಲ್ಲಿ ಜಾತಿಪದ್ಧತಿ ಅಳಿಸಬೇಕು, ಎಲ್ಲರೂ ಒಂದೇ ಮಾನವ ಜಾತಿ ಒಂದೇ ಎಂಬುವುದು ಅವರ ವಚನ ಸಾಹಿತ್ಯದಲ್ಲಿ ತಿಳಿಸಿದವರು, ಗಾಂಧೀಜಿ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ತಂದುಕೊಟ್ಟವರು ಹಾಗೆ ಬಸವಣ್ಣನವರು ಸಮಾಜದ ಬದಲಾವಣೆಯನ್ನು ಬಯಸಿದ್ದರು, ಈ ಮೂರು ಜನ ದೇಶಕ್ಕೆ ಬಹುಮುಖ್ಯವಾಗಿ ಮೂರು ಕಣ್ಮಣಿಗಳು ಹಾಗೆ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭ ತಹಸಿಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ಸುಮಾರು 800 ವರ್ಷಗಳ ಹಿಂದೆ ಅಂದಿನ ಕಾಲದಿಂದ ಇಂದಿನವರೆಗೂ ದೇಶದಲ್ಲಿ ಜಾತಿ ಪದ್ಧತಿ ತಾಂಡವಾಡುತ್ತಿದೆ ಕ್ರಾಂತಿಕಾರಿ ಬಸವಣ್ಣನವರು ಪದ್ಯ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಅಂಟಿಕೊಂಡಿರುವ ಜಾತಿಪದ್ಧತಿಯನ್ನು ಹೋಗಲಾಡಿಸಲು ಹೋರಾಟ ಮಾಡಿದಂತಹ ಮಹಾನ್ ವ್ಯಕ್ತಿ, 12ನೇ ಶತಮಾನದಲ್ಲಿ ವಚನ ಸಾಹಿತಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತೊಡೆದು ಹಾಕುವಲ್ಲಿ ಬಸವಣ್ಣನವರ ಪಾತ್ರ ಬಹಳ ಮುಖ್ಯವಾದದ್ದು ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ಪಿ ಚಂದ್ರಶೇಖರಯ್ಯ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಬಿಇಓ ವೈ.ಕೆ ತಿಮ್ಮೇಗೌಡ ಕಾರ್ಯಕ್ರಮದ ಕುರಿತು ಮಾತಾಡಿದರು.
ಈ ಸಂದರ್ಭ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್, ಮೈಮುಲ್ ಜಿಲ್ಲಾ ನಿರ್ದೇಶಕ ರಾಜೇಂದ್ರ, ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ಶಿರಸ್ತೇದಾರ್ ವಿನೋದ್, ಸಿಡಿಪಿಒ ಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್ ಮುಖಂಡರಾದ ನಂಜುಂಡಸ್ವಾಮಿ, ಮುಖೇಶ್, ಕುಮಾರ್, ಗಿರೀಶ್, ಶಿವಕುಮಾರ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ವೀರಶೈವ ಲಿಂಗಾಯಿತ ಸಮಾಜದವರು ಹಾಜರಿದ್ದರು.