
ಈ ವೇಳೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ದಿನೇದಿನೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನು ಕಡಿವಾಣ ಹಾಕಲು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳ ಸಹಕಾರ ಅತ್ಯಗತ್ಯ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಳದ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಇಳಿಸುವ ಸಂಬಂಧ ಸಭೆ ಕರೆಯಲಾಗಿದೆ, ಸೋಂಕಿನ ಪ್ರಾರ್ಥಮಿಕ ಲಕ್ಷಣವುಳ್ಳ ಯಾವುದೇ ವ್ಯಕ್ತಿ ಚಿಕಿತ್ಸೆಗೆಂದು ಆಗಮಿಸಿದ ಸಂದರ್ಭ ಅವರಿಗೆ ಚಿಕಿತ್ಸೆ ನೀಡಿ ನಿಗಾ ವಹಿಸಿ 2 – 3 ದಿನಗಳ ನಂತರ ಅದೇ ಲಕ್ಷಣಗಳು ಮುಂದುವರಿದಲ್ಲಿ ಮೊದಲು ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿ ನಂತರ ಎಸ್ ಆರ್ ಎಫ್ ಐಡಿ ಕ್ರಿಯೇಟ್ ಮಾಡಲಾಗುವುದು ನಂತರ ಎಲ್ಲಿಯಾದರೂ ಚಿಕಿತ್ಸೆ ಪಡೆಯಬಹುದು, ಎಸ್ ಆರ್ ಎಫ್ ಐಡಿ ಕ್ರಿಯೇಟ್ ಮಾಡಿದರೆ ಮಾತ್ರ ರೆಮಿಡಿಸಿವರ್ ಇಂಜೆಕ್ಷನ್ ಕೊಡಲಾಗುವುದು, ಸೋಂಕಿನ ಲಕ್ಷಣ ಕಂಡುಬಂದಾಗ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಎರಡರಲ್ಲೂ ಸರ್ಕಾರ ಸೂಚಿಸಿದ ಹಾಗೆ ಒಂದೇ ರೀತಿಯ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಿದರೆ ಸೋಂಕಿನ ಹೆಚ್ಚಳ ತಡೆಗಟ್ಟಬಹುದು, ಖಾಸಗಿ ಆಸ್ಪತ್ರೆಗಳು ಬಯೋ ಮೆಡಿಕಲ್ ತ್ಯಾಜ್ಯ ಸೂಕ್ತ ವಿಲೇವಾರಿ ಮಾಡಬೇಕು, ಸಾರ್ವಜನಿಕರು ಸಹ ಭಯಪಡದೆ ವೈದ್ಯರು ಸೂಚಿಸಿದ ಔಷಧಿಗಳನ್ನು ಪಡೆಯುವಂತೆ ಹೇಳಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ನೆಗಡಿ ಕೆಮ್ಮು ಜ್ವರದ ಲಕ್ಷಣಗಳೆಂದರೆ ತಕ್ಷಣ ಚಿಕಿತ್ಸೆ ಪ್ರಾರಂಭಿಸಿ, ಯಾವುದೇ ಆಸ್ಪತ್ರೆಗಳಲ್ಲಿ ಸೋಂಕಿತ ವ್ಯಕ್ತಿಯು ಸಾವನ್ನಪ್ಪಿದ್ದರೆ ಅವರೇ ಹೊಣೆಗಾರರಾಗುತ್ತಾರೆ, ಸರ್ಕಾರ ಸೂಚಿಸಿದ ಮಾರ್ಗದಲ್ಲಿ ಚಿಕಿತ್ಸೆ ನೀಡಿ ತಮ್ಮಲ್ಲಿ ಸಾಧ್ಯವಾಗದಿದ್ದದರೆ ಸರ್ಕಾರಿ ಆಸ್ಪತ್ರೆಗೆ ಕಳಿಸಿ, ಪ್ರಾರಂಭಿಕ ಹಂತದಿಂದಲೂ ಪಂಚಸೂತ್ರ ಪಾಲಿಸಿದರೆ ಸೋಂಕು ತಡೆಗಟ್ಟಬಹುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಕೆ.ಚಂದ್ರಮೌಳಿ, ಸಾರ್ವಜನಿಕ ಆಸ್ಪತ್ರೆ ವೈದ್ಯರು, ತಾಲ್ಲೂಕಿನ ವಿವಿಧೆಡೆಯ ಖಾಸಗಿ ಕ್ಲಿನಿಕ್ ವೈದ್ಯರು ಹಾಗೂ ನೋಡಲ್ ಅಧಿಕಾರಿಗಳು ಹಾಜರಿದ್ದರು.