ಗ್ರಾಮೀಣ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಔಷಧಿ ಕಿಟ್ಅನ್ನು ನೀಡಲಾಗುತ್ತಿದ್ದು ಕೊರೊನಾ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಲಿದೆ ಎಂಬ ನಂಬಿಕೆ ಇದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 24/05/021

ಪಿರಿಯಾಪಟ್ಟಣ ಶಾಸಕರ ಕಚೇರಿಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗಾಗಿ ವೈಯುಕ್ತಿಕವಾಗಿ ೧೦ ಲಕ್ಷ ಮೌಲ್ಯದ ಔಷಧಿ ಕಿಟ್ನ್ನು ವಿತರಣೆ ಮಾಡಿ ಮಾತನಾಡಿದರು. ಕೊರೊನಾ ನಿಯಂತ್ರಣಕ್ಕೆ ಬಾರದಿರುವುದಕ್ಕೆ ಕಾರಣವನ್ನು ಯೋಚಿಸಿ ಕೇಲವ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಸಾಲದು ಇವರಿಂದ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪಂಚಸೂತ್ರಗಳನ್ನು ಅಳವಡಿಸಿ ಚಿಕಿತ್ಸೆ ಆರಂಭಿಸಬೇಕು ಇದಕ್ಕಾಗಿ ಗ್ರಾಮೀಣ ಪ್ರದೇಶದ ಎಲ್ಲಾ ಸೋಂಕಿತರ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳಿಗಾಗಿ ಅಧಿಕಾರಿಗಳು ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಅವರ ಸೂಚನೆಯಂತೆ ಮೈಮೂಲ್ ಅಧ್ಯಕ್ಷ ನನ್ನ ಪುತ್ರ ಪಿ.ಎಂ.ಪ್ರಸನ್ನಗೆ ತಿಳಿಸಿ ಅಗತ್ಯ ಪ್ರಾಥಮಿಕ ಔಷಧಗಳನ್ನು ಮತ್ತು ಮಾಸ್ಕ್,ಸ್ಯಾನಿಟೈಜರ್ಗಳನ್ನು ನೀಡಲಾಗುತ್ತಿದೆ. ಇದನ್ನು ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಂಡು ಪ್ರತಿ ಗ್ರಾಮದಲ್ಲಿಯೂ ಕೊರೊನಾ ಸೋಂಕು ನಿರ್ಮೂಲನೆಯಾಗುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.


ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಮಾತನಾಡಿ ಜಿಲ್ಲೆಯಲ್ಲಿ ಮೈಮೂಲ್ನಿಂದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪ್ರತಿನಿತ್ಯ ರೈತರಿಂದ ಹಾಲು ಸಂಗ್ರಹಿಸುವವರಿಗೆ ಕೋವಿಶೀಲ್ಡ್ ಲಸಿಕೆ ನೀಡುವಂತೆ ಮನವಿ ಮಾಡಲಾಗಿತ್ತು. ನೂರಾರು ಮಂದಿ ರೈತರೊಂದಿಗೆ ಪ್ರತಿನಿತ್ಯ ಸಂಪರ್ಕ ಏರ್ಪಡುವುದರಿಂದ ಇವರನ್ನು ವಾರಿಯ್ಸ್ ಗುಂಪಿಗೆ ಸೇರಿಸಿ ಲಸಿಕೆ ನೀಡುವಂತೆ ಮಾಡಿದ ಮನವಿಗೆ ಜಿಲ್ಲಾಡಳಿತ ಸ್ಪಂಧಿಸಿದ್ದು ೧೧೦೪ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತಿತರರಿಗೆ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿದ್ದು ಶೀಘ್ರದಲ್ಲೆ ಲಸಿಕೆ ಹಾಕಿಸಲಾಗುವುದು ಎಂದು ತಿಳಿಸಿದರು.


ತಾಲೂಕು ಪಂಚಾಯಿತಿ ಇಒ ಆರ್.ಕೃಷ್ಣಕುಮಾರ್ ಮಾತನಾಡಿ ಶಾಸಕರು ಮತ್ತು ಅವರ ಪುತ್ರ ನೀಡಿರುವ ಔಷಧಿಗಳನ್ನು ಪ್ರಾಥಮಿಕ ಹಂತದಲ್ಲಿ ಹೆಚ್ಚು ಸೋಂಕಿತರನ್ನು ಒಳಗೊಂಡಿರುವ ಗ್ರಾಮಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರುಗಳಿಗೆ ಹಸ್ತಾಂತರಿಸಲಾಗುತ್ತಿದ್ದು ಆಶಾ ಮತ್ತು ಅಂಗಡನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಟಾಸ್ಕ್ಪೋರ್ಸ್ ಸಿಬ್ಬಂದಿಗಳ ಮೂಲಕ ಇದ ವಿತರಣೆ ನಡೆಯಲಿದ್ದು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹಬ್ಬುವುದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಮಾಡಿರುವ ವಿಶೇಷ ಮೊದಲ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ಬಾಬು ಮಾತನಾಡಿ ಪ್ರಾಥಮಿಕ ಸೋಂಕಿಗೆ ಒಳಗಾದವರು ಶಾಸಕರು ನೀಡಿರುವ ಕಿಟ್ನಲ್ಲಿ ಔಷಧಿಗಳನ್ನು ಪಡೆದುಕೊಂಡು ೫ ದಿನಗಳ ಕಡ್ಡಾಯವಾಗಿ ಹೋಂಐಸೋಲೇಷ್ಗೆ ಒಳಗಾದರೆ ರೋಗ ಉಲ್ಬಣವಾಗುವುದನ್ನು ತಪ್ಪಿಸಬಹುದು, ಕೊರೊನಾದಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬಹುದು, ಮತ್ತು ರೋಗಿಯ ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಉಂಟಾಗದಂತೆ ಕಾಪಾಡಬಹುದಾಗಿದೆ ಎಂದು ತಿಳಿಸಿದರು.


ಸಮಾರಂಭದಲ್ಲಿ ತಹಸೀಲ್ದಾರ್ ಕೆ.ಚಂದ್ರಮೌಳಿ ಮತ್ತು ತಾ.ಪಂ.ನೂತನ ಆಡಳಿತಾಧಿಕಾರಿ ಡಾ.ಕೆ.ಸಿ.ಪ್ರಶಾಂತ್ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ಸಿಂಗ್, ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ, ಮಾಜಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಮುಖಂಡ ಮೋಹನ್ಕುಮಾರ್, ಸಿಂಧೂರ, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top