
ಪಿರಿಯಾಪಟ್ಟಣ: ಉಜ್ಜೀವನ್ ಬ್ಯಾಂಕ್ ಮೈಸೂರು ಶಾಖೆ ವತಿಯಿಂದ ತಾಲ್ಲೂಕಿನ ಕೊರೊನಾ ಸೋಂಕಿತರ ಆರೈಕೆಗಾಗಿ ರೂ.2.48 ಲಕ್ಷ ವೆಚ್ಚದ ಔಷಧಿ ಮಾತ್ರೆಗಳು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷಾ ಪರಿಕರಗಳನ್ನು ಶಾಸಕ ಕೆ.ಮಹದೇವ್ ಅವರ ನೇತೃತ್ವದಲ್ಲಿ ತಾ.ಪಂ ಆಡಳಿತ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ವೇಳೆ ಶಾಸಕ ಕೆ.ಮಹದೇವ್ ರವರು ಮಾತನಾಡಿ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರದ ಸವಲತ್ತುಗಳ ಜತೆಗೆ ವಿವಿಧ ಸಂಘ ಸಂಸ್ಥೆ ಹಾಗೂ ದಾನಿಗಳು ಸೇವಾ ಮನೋಭಾವದಿಂದ ನೆರವು ನೀಡುತ್ತಿರುವುದು ಶ್ಲಾಘನೀಯ, ತಾಲ್ಲೂಕಿನ ಕೊರೊನಾ ಸೋಂಕಿತರ ಆರೈಕೆಗಾಗಿ ತಾ.ಪಂ ಇಒ ಕೃಷ್ಣಕುಮಾರ್ ಅವರ ಮನವಿ ಮೇರೆಗೆ ಅವರ ಸ್ನೇಹಿತರಾದ ಉಜ್ಜೀವನ್ ಬ್ಯಾಂಕ್ ಅಧಿಕಾರಿಗಳು ರೂ.2.48 ಲಕ್ಷ ವೆಚ್ಚದ ಔಷಧಿ ಮಾತ್ರೆ ಹಾಗೂ ಕೊರೊನಾ ವಾರಿಯರ್ಸ್ ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ನೀಡಿರುವುದಕ್ಕೆ ಧನ್ಯವಾದ ತಿಳಿಸಿ ಉಜ್ಜೀವನ್ ಬ್ಯಾಂಕ್ ಸಾರ್ವಜನಿಕ ಸೇವೆಯಲ್ಲಿ ಮತ್ತಷ್ಟು ಪ್ರಜ್ವಲಗೊಳಿಸಲಿ ಎಂದು ಶುಭ ಕೋರಿದರು.
ಉಜ್ಜೀವನ್ ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ರವಿಕುಮಾರ್ , ಉಜ್ಜೀವನ್ ಬ್ಯಾಂಕ್ ನ ಬ್ರಾಂಚ್ ಮ್ಯಾನೇಜರ್ ಯೋಗಣ್ಣ, ರಾಜೇಶ್, ತಾಲ್ಲೂಕು ಪಂಚಾಯಿತಿ ಇ ಓ ಕೃಷ್ಣ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಶರತ್ ಬಾಬು ಹಾಗು ಮತ್ತಿತರರು ಹಾಜರಿದ್ದರು
