ಪಿರಿಯಾಪಟ್ಟಣ : ಕೊರೊನಾ ಸಂಕಷ್ಟದಲ್ಲಿ ಬಡವರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 04/06/2021

ಪಟ್ಟಣದ ಪುರಸಭಾ ಕಚೇರಿಯಲ್ಲಿ ವಾರ್ಡ್ನಂಬರ್ ೧೪ರಲ್ಲಿ ಬಡವರಿಗೆ ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎಂ.ವಿನೋದ್ ನೀಡುತ್ತಿರುವ ಪುಡ್ಕಿಟ್ ವಿತರಣೆ ಚಾಲನೆ ನೀಡಿ ಮಾತನಾಡಿದರು. ವಾರ್ಡ್ನ ಪುರಸಭಾ ಸದಸ್ಯರು ಮತ್ತು ಯುವಕರಿಗೆ ಬಡವರನ್ನು ಗುರುತಿಸಿ ಪುಡ್ಕಿಟ್ ವಿತರಣೆ ಮಾಡುವ ಮನೋಭಾವ ಮೂಡಿರುವುದು ಶ್ಲಾಘನೀಯ, ಅನೇಕರು ಕೋವಿಡ್ನಿಂದ ತೀವ್ರ ತೊಂದರೆಗೆ ಒಳಗಾಗಿದ್ಧಾರೆ ಅಂತಹ ಕುಟುಂಬಗಳನ್ನು ಗುರುತಿಸಿ ಅಂತಹವರಿಗೆ ಸಹಾಯಸ್ತಾ ಚಾಚಬೇಕು ಕಳೆದ ಬಾರಿಯಂತೆ ಈ ಬಾರಿಯೂ ನಾನೂ ಕೂಡ ಮುಂದಿನ ದಿನಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಕೊರೊನಾದಿಂದ ಬಾದಿತರಾದ ಸಣ್ಣಪುಟ್ಟ ಸಮುದಾಯಗಳಿಗೆ ಪುಡ್ಕಿಟ್ ವಿತರಣೆ ಮಾಡುತ್ತೇನೆ. ಇದರೊಂದಿಗೆ ಪ್ರತಿ ಗ್ರಾ.ಪಂ.ಗಳು ಮತ್ತು ಪುರಸಭೆವತಿಯಿಂದ ಬಡವರು, ಅಂಗವಿಕಲರನ್ನು ಗುರುತಿಸಿ ಪುಡ್ಕಿಟ್ ಖರೀದಿಸಿ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎಂ.ವಿನೋದ್ ಮಾತನಾಡಿ ವಾರ್ಡ್ನಂಬರ್ ೧೪ರಲ್ಲಿ ಬಡವರನ್ನು ಗುರುತಿಸಿ ೮೫೦ರೂಗಳ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಶಾಸಕ ಕೆ.ಮಹದೇವ್ ಸೂಚನೆಯಂತೆ ಬಡವರಿಗೆ ಆಹಾರ ಕಿಟ್ನೀಡಿದ್ದು ಮುಂದಿನ ದಿನಗಳಲ್ಲಿ ಔಷಧ ಕಿಟ್ನೀಡುವ ಗುರಿಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ಸಿಂಗ್, ಇಒ ಕೃಷ್ಣಕುಮಾರ್, ತಹಸೀಲ್ದಾರ್ ಕೆ.ಚಂದ್ರಮೌಳಿ, ಟಿಎಚ್ಒ ಡಾ.ಶರತ್ಬಾಬು, ಮುಖ್ಯಾಧಿಕಾರಿ ಪ್ರಸನ್ನಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಮುಖೇಶ್ಕುಮಾರ್, ಯುವ ಮುಖಂಡರಾದ ಮಹದೇವ್, ಮಹೇಂದ್ರಕುಮಾರ್, ನಾಗಾನಂದ, ವಿನಯ್, ಸಿದ್ದೇಶ್, ಎಲ್ಲಾ ಪುರಸಭಾ ಸದಸ್ಯರು, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top