ಪಿರಿಯಾಪಟ್ಟಣ: ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಶಾಸಕ ಕೆ.ಮಹದೇವ್ ರವರು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು. 04/06/2021

ಪಟ್ಟಣದ ತಾ.ಪಂ ಕಚೇರಿಯಲ್ಲಿ ತಾಲ್ಲೂಕಿನ ಸೆಸ್ಕ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು, ಸಾರ್ವಜನಿಕವಾಗಿ ರೈತರ ಪರವಾಗಿ ಕೆಲಸ ಮಾಡಲು ಇರುವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಸಾರ್ವಜನಿಕರು ಶಾಸಕನಾದ ನನ್ನನ್ನು ಪ್ರಶ್ನಿಸುತ್ತಾರೆ, ಕಾನೂನಿಗೆ ವಿರುದ್ಧವಾಗಿ ರೈತರಿಗೆ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ ಆದರೆ ರೈತರಿಗೆ ಸಹಾಯ ಮಾಡುವ ಮನಸ್ಸು ನಿಮಗೆ ಬರಬೇಕು, ರೈತರ ಜಮೀನುಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕೊಡಲು ಒಂದು ಲಕ್ಷಕ್ಕೂ ಅಧಿಕ ಹಣ ಕೇಳುತ್ತಾರೆ ಎಂದು ಹಲವು ರೈತರು ದೂರುತ್ತಿದ್ದಾರೆ  ಎಂದು ಅಸಮಾಧಾನ ವ್ಯಕ್ತಪಡಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸಿದರು.
ಸೆಸ್ಕ್ ಇಲಾಖೆ ಇಇ ಚಂದ್ರಶೇಖರ್ ಮಾತನಾಡಿ  ರೈತರ ಕೃಷಿ ಚಟುವಟಿಕೆಗೆ ಅಗತ್ಯ ವಿದ್ಯುತ್ ಸರಬರಾಜಿಗೆ ಬೇಕಾಗುವ ಹಣದ ಎಸ್ಟಿಮೇಟ್ ಕಾಪಿಯನ್ನು ಮೊದಲು ಪಡೆದುಕೊಳ್ಳಬೇಕು, ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ ಗುತ್ತಿಗೆದಾರರೇ ನೇರ ಸಾಮಗ್ರಿಗಳನ್ನು ಕೊಂಡು ನಿರ್ವಹಿಸುವುದರಿಂದ ಅವರು ಹೆಚ್ಚು ಹಣ ಕೇಳಿದರೆ ಇಲಾಖೆಗೆ ದೂರು ನೀಡಿ ಎಂದರು. 
ಸಭೆಯಲ್ಲಿ ತಾಪಂ ಇಒ ಕೃಷ್ಣಕುಮಾರ್, ಸೆಸ್ಕ್ ಎಇಇ ಗಳಾದ ಅನಿಲ್, ಕುಮಾರ್ ಸೇರಿದಂತೆ 10 ಉಪವಿಭಾಗಗಳ ಜೆಇ ಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top