ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಶಾಸಕ ಕೆ.ಮಹದೇವ್ ಅವರ ಮೂಲಕ ತಾಲ್ಲೂಕು ಆರೋಗ್ಯ ಇಲಾಖೆಗೆ 5 ಆಕ್ಸಿಜನ್ ಕಾನ್ಸನ್ ಟ್ರೇಟರ್ ಯಂತ್ರಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು, ಹತ್ತು ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ಇರುವುದರಿಂದ ಮಕ್ಕಳು ನಮ್ಮ ಆಸ್ತಿಯಾಗಿದ್ದು ಅವರನ್ನು ರಕ್ಷಿಸಲು ಹೋರಾಡೋಣ, ಹುಣಸೂರು ಮತ್ತು ಪಿರಿಯಾಪಟ್ಟಣದಲ್ಲಿ ಮಕ್ಕಳ ಆಸ್ಪತ್ರೆ ಇಲ್ಲದ ಕಾರಣ ಬೇರೆಡೆಯಿಂದ ಮಕ್ಕಳ ತಜ್ಞ ವೈದ್ಯರನ್ನು ಕರೆಸಿ ಸೋಂಕು ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು, ಲಸಿಕೆ ಪಡೆಯುವ ವಿಚಾರದಲ್ಲಿ ನಿರ್ಲಕ್ಷ್ಯವಹಿಸದೆ ಪ್ರತಿಯೊಬ್ಬರು ಕಡ್ಡಾಯ ಪಡೆದುಕೊಳ್ಳಬೇಕು, ಸೋಂಕಿನಿಂದ ಸಾವಿಗೀಡಾದ ಸಂದರ್ಭ ಲಸಿಕೆ ಪಡೆದಿದ್ದರೆ ಉಳಿಸಿಕೊಳ್ಳಬಹುದಿತ್ತೇನೋ ಎಂದು ಕುಟುಂಬದವರು ಮುಂದೆ ಪಶ್ಚಾತ್ತಾಪ ಪಡುವುದು ಬೇಡ, ಶಾಸಕ ಕೆ.ಮಹದೇವ್ ಅವರು ತಾಲ್ಲೂಕಿನಾದ್ಯಂತ ಸಂಚರಿಸಿ ಲಸಿಕೆ ಪಡೆಯುವುದು ಹಾಗೂ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವರ ಸಹಾಯಕ್ಕೆಂದು ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಅವರು ತಾಲ್ಲೂಕು ಆಡಳಿತಕ್ಕೆ 8ಲಕ್ಷ ಮೌಲ್ಯದ 5 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ನೀಡಿರುವುದಕ್ಕೆ ಧನ್ಯವಾದ ತಿಳಿಸಿದರು.
ಈ ಸಂದರ್ಭ ಜಿ.ಪಂ ಮಾಜಿ ಸದಸ್ಯ ಅಮಿತ್ ವಿ.ದೇವರಹಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ ಶ್ರೀನಿವಾಸ್, ವೈದ್ಯರಾದ ಡಾ.ಶಿವಪ್ರಕಾಶ್, ಡಾ.ಮಹದೇವ ಸ್ವಾಮಿ, ಡಾ.ಅನಿಲ್, ಡಾ.ವಿಕ್ರಂ, ಡಾ.ಸರವಣನ್, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಉಪಾಧ್ಯಕ್ಷ ನೇರಳಕುಪ್ಪೆ ನವೀನ್, ಉದ್ಯಮಿ ಸುರೇಶ್, ಹುಣಸೂರು ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಹರೀಶ್, ಮುಖಂಡರಾದ ಕರಿಗೌಡ, ರೇಣು, ಗುರುರಾಜ್, ನವೀನ್, ಹೃದಯ್ ಗೌಡ, ಆಸ್ಪತ್ರೆಯ ಫಾಮರ್ಸಿ ಅಧಿಕಾರಿಗಳಾದ ಶೇಷಗಿರಿ, ಮಂಜುನಾಥ್ ಸಿಂಗ್, ಕಚೇರಿ ಅಧೀಕ್ಷಕ ರವಿಕುಮಾರ್, ಪ್ರಥಮ ದರ್ಜೆ ಸಹಾಯಕ ಅಣ್ಣೇಗೌಡ ಮತ್ತು ಸಿಬ್ಬಂದಿ ಹಾಜರಿದ್ದರು.