
ಪಿರಿಯಾಪಟ್ಟಣ ತಾಲೂಕು ಆಡಳಿತಕ್ಕೆ ಜೆ.ಡಿ.ಎಸ್ ರಾಜ್ಯ ಸಮೀತಿ ಸದಸ್ಯರಾದ ನಜ್ಮಾ ನಜೀರ್ ಚಿಕ್ಕನೇರಳೆರವರು ತಮ್ಮ ಸಂಸ್ಥೆ ವ್ಯಾಗ್ಮೈನ್ ಎಂಟರ್ಪ್ರೈಸಸ್ ವತಿಯಿಂದ ಮೂರು ಲಕ್ಷ ಮೌಲ್ಯದ PPE ಕಿಟ್ ಗಳನ್ನು ಜನಪ್ರಿಯ ಶಾಸಕರಾದ ಕೆ.ಮಹದೇವ್ ರವರ ಮೂಲಕ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಮಾನ್ಯ ಶಾಸಕರು ಮೂರು ಲಕ್ಷ ಮೌಲ್ಯದ PPE ಕಿಟ್ ನೀಡಿದ ನಜ್ಮಾ ನಜೀರ್ ಮತ್ತು ವಾಗ್ಮೈನ್ ಎಂಟರ್ಪ್ರೈಸಸ್ ನ ಎಲ್ಲರಿಗು ತಾಲೂಕಿನ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ನಂತರ ಮಾತನಾಡಿದ ನಜ್ಮಾ ನಜೀರ್ ಶಾಸಕರ ಕಾರ್ಯ ವೈಖರಿ ನಮಗೆಲ್ಲ ಮಾದರಿಯಾಗಬೇಕಿದೆ,ಶಾಸಕರು ಮತ್ತು ತಾಲೂಕು ಆಡಳಿತದೊಟ್ಟಿಗೆ ನಾವೆಲ್ಲರು ಸಹಕರ ನೀಡಿ ತಾಲೂಕನ್ನು ಕೊರೋನಾ ಮುಕ್ತ ಮಾಡಬೇಕಿದೆ ಆ ನಿಟ್ಟಿನಲ್ಲಿ ಕೊರೋನಾ ವಾರಿಯರ್ಸ್ಗಳಿಗೆ ಅವಶ್ಯವಾಗಿ ಬೇಕಾಗಿದ್ದ PPE ಕಿಟ್ ಗಳನ್ನು ಇಂದು ನಾವು ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಕೃಷ್ಣಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, AEE ಮಂಜುನಾಥ್, ಜೆಡಿಎಸ್ ಮುಖಂಡರಾದ ಸೈಯದ್ ಇಲಿಯಾಜ್ ಹಾಗು ಮತ್ತಿತರರು ಹಾಜರಿದ್ದರು