ಮೈಕ್ಯಾಪ್ ಮತ್ತು ಫುಲ್ಲರ್ಟನ್ ಇಂಡಿಯಾ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕೊರೊನಾ ಸೋಂಕಿತರ ಆರೈಕೆಗಾಗಿ ರೂ.1.50 ಲಕ್ಷ ವೆಚ್ಚದ 5 ಆಕ್ಸಿಜನ್ ಕಾನ್ಸನ್ ಟ್ರೇಟರ್ ಯಂತ್ರಗಳನ್ನು MLA K.Mahadev ಅವರ ಮುಖಾಂತರ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಲಾಯಿತು. 21/06/2021

ಪಿರಿಯಾಪಟ್ಟಣ: ಮೈಕ್ಯಾಪ್ ಮತ್ತು ಫುಲ್ಲರ್ಟನ್ ಇಂಡಿಯಾ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕೊರೊನಾ ಸೋಂಕಿತರ ಆರೈಕೆಗಾಗಿ ರೂ.1.50 ಲಕ್ಷ ವೆಚ್ಚದ 5 ಆಕ್ಸಿಜನ್ ಕಾನ್ಸನ್ ಟ್ರೇಟರ್ ಯಂತ್ರಗಳನ್ನು ಶಾಸಕ ಕೆ.ಮಹದೇವ್ ಅವರ ಮುಖಾಂತರ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಲಾಯಿತು.

ಈ ವೇಳೆ ಶಾಸಕ ಕೆ.ಮಹದೇವ್ ರವರು ಮಾತನಾಡಿ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರದ ಸವಲತ್ತುಗಳ ಜತೆಗೆ ವಿವಿಧ ಸಂಘ ಸಂಸ್ಥೆ ಹಾಗೂ ದಾನಿಗಳು ಸೇವಾ ಮನೋಭಾವದಿಂದ ನೆರವು ನೀಡುತ್ತಿರುವುದು ಶ್ಲಾಘನೀಯ, ತಾಲ್ಲೂಕಿನ ಕೊರೊನಾ ಸೋಂಕಿತರ ಆರೈಕೆಗಾಗಿ ತಾ.ಪಂ ಇಒ ಕೃಷ್ಣಕುಮಾರ್ ಅವರ ಮನವಿ ಮೇರೆಗೆ ಅವರ ಸ್ನೇಹಿತರಾದ ಮೈಕ್ಯಾಪ್ ಹಾಗೂ ಫುಲ್ಲರ್ ಟನ್ ಇಂಡಿಯಾ ಅಧಿಕಾರಿಗಳು ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ನೀಡಿರುವುದಕ್ಕೆ  ಧನ್ಯವಾದ ತಿಳಿಸಿ ಇವುಗಳ ಸದ್ಬಳಕೆಯಾಗಲಿ ಎಂದರು.  

ತಾಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ತಾಲ್ಲೂಕಿನ ಕೊರೊನಾ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಮೈಕ್ಯಾಪ್ ಹಾಗೂ ಫುಲ್ಲರ್ ಟನ್  ಇಂಡಿಯಾ ದವರು ಆಕ್ಸಿಜನ್ ಕಾನ್ಸನ್ ಟ್ರೇಟರ್ ಯಂತ್ರಗಳನ್ನು ನೀಡಿದ್ದು  ಆರೋಗ್ಯ ಇಲಾಖೆ ಮುಖಾಂತರ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗುವುದು, ಸಾರ್ವಜನಿಕರು ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವಂತೆ ತಿಳಿಸಿದರು.

ಈ ಸಂದರ್ಭ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜೆ ಶ್ರೀನಿವಾಸ್, ಮೈರಾಡ ಕಾರ್ಯನಿರ್ವಾಹಕ ನಿರ್ದೇಶಕ ವಿಲಿಯಂ ಡಿಸೋಜ, ಕಾರ್ಯಕ್ರಮ ಸಮನ್ವಯಾಧಿಕಾರಿ ರಾಜಪ್ಪ, ಎಸ್ ಶಂಕರ್ ಹಾಗೂ ಮೈಕ್ಯಾಪ್ ಸಿಬ್ಬಂದಿವರ್ಗ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಮತ್ತಿತರರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top