
ಗೊರಹಳ್ಳಿ, ಚಪ್ಪರದಹಳ್ಳಿ ಹಾಗೂ ದೊಡ್ಡನೇರಳೆ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ, ಸರ್ಕಾರದಿಂದ ಕ್ಷೇತ್ರಕ್ಕೆ ಅನುದಾನಗಳು ಹಾಗೆ ಸುಮ್ಮನೆ ಬರುವುದಿಲ್ಲ, ತಾಲ್ಲೂಕಿನ ಅಭಿವೃದ್ಧಿ ವಿಚಾರವಾಗಿ ಮನಸಿಟ್ಟುಕೊಂಡು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಿದ್ದರ ಫಲವಾಗಿ ಹೆಚ್ಚು ಅನುದಾನ ದೊರೆಯುತ್ತಿದೆ, ಒಂದೇ ಬಾರಿಗೆ ತಾಲ್ಲೂಕಿನ ಎಲ್ಲೆಡೆ ಅಭಿವೃದ್ಧಿ ಸಾಧ್ಯವಿಲ್ಲ, ಈ ಹಿಂದಿನ ಜನಪ್ರತಿನಿಧಿಗಳನ್ನು ಅಭಿವೃದ್ಧಿ ವಿಚಾರವಾಗಿ ಪ್ರಶ್ನಿಸುವ ಮನೋಭಾವನೆಯನ್ನು ಸಾರ್ವಜನಿಕರು ಬೆಳೆಸಿಕೊಳ್ಳದ ಹಿನ್ನೆಲೆ ಅಭಿವೃದ್ಧಿ ಕುಂಠಿತವಾಗಿದೆ, ಚುನಾವಣಾ ಸಂದರ್ಭ ತಾಲ್ಲೂಕಿನ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಭಿವೃದ್ಧಿಯೇ ನನ್ನ ಮೂಲ ಗುರಿಯಾಗಿದೆ, ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ ದೀರ್ಘಕಾಲ ಬಾಳಿಕೆ ಬರುವಂತೆ ಎಚ್ಚರ ವಹಿಸುವಂತೆ ಸೂಚಿಸಿ ತಾಲ್ಲೂಕಿನ ಚನ್ನಕೇಶವಪುರದಿಂದ ಗೊರಳ್ಳಿ ಗ್ರಾಮದವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಜುಲೈ ತಿಂಗಳ ಕೊನೆಯೊಳಗೆ ತ್ವರಿತವಾಗಿ ಮುಗಿಸುವಂತೆ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿ ಸ್ಥಳೀಯ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಗ್ರಾ.ಪಂ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅನುದಾನದಲ್ಲಿ ಬಗೆಹರಿಸಿಕೊಡುವಂತೆ ತಿಳಿಸಿದರು.

ಈ ಸಂದರ್ಭ ತಹಶೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಕೃಷ್ಣಕುಮಾರ್, ಪಿಡಬ್ಲ್ಯುಡಿ ಎಇಇ ಜಯಂತ್, ಎಇ ಗಳಾದ ಕುಮಾರ್, ದಿನೇಶ್, ಜಿ.ಪಂ ಎಇಇ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಆರ್ ಡಬ್ಲ್ಯುಎಸ್ ಇಲಾಖೆ ಎಇಇ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಚೆಸ್ಕಾಂ ಎಇಇ ಕುಮಾರ್, ಪಶು ವೈದ್ಯಾಧಿಕಾರಿ ಡಾ.ಸಂದೇಶ್, ಚಪ್ಪರದಹಳ್ಳಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಮೀನಾಕ್ಷಿ, ಪಿಡಿಒ ಚಿದಾನಂದ್, ಚಿಕ್ಕನೇರಳೆ ಗ್ರಾ.ಪಂ ಅಧ್ಯಕ್ಷೆ ಮೈತ್ರಮ್ಮ ನಟರಾಜ್, ಉಪಾಧ್ಯಕ್ಷ ಯಶ್ರೀಫ್ ಪಾಷಾ, ಮಾಜಿ ಅಧ್ಯಕ್ಷ ಮೈಲಾರಪ್ಪ, ಪಿಡಿಒ ನಾರಾಯಣ್, ಕಂದಾಯಾಧಿಕಾರಿ ಪ್ರದೀಪ್, ತಾ.ಪಂ ಮಾಜಿ ಸದಸ್ಯ ಅತ್ತರ್ ಮತೀನ್, ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾನಜೀರ್ ಚಿಕ್ಕನೇರಳೆ, ಮುಖಂಡರಾದ ಪುಟ್ಟಸ್ವಾಮಿ, ನಾಗರಾಜ್, ಅಪ್ಪಾಜಿಗೌಡ, ಗುತ್ತಿಗೆದಾರ ಸಣ್ಣೇಗೌಡ, ಸ್ಥಳೀಯ ಗ್ರಾ.ಪಂ ಸದಸ್ಯರು, ಗ್ರಾಮದ ಮುಖಂಡರು, ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.