ಪಿರಿಯಾಪಟ್ಟಣ: ಪಿಎಸಿಸಿಎಸ್ ಗಳಲ್ಲಿ ರಾಜಕಾರಣ ಮಾಡದೆ ಪಕ್ಷಭೇದ ಮರೆತು ರೈತರ ಹಿತ ಕಾಪಾಡಬೇಕು – MLA K.Mahadev 04/07/2021

ಶಾಸಕ ಕೆ ಮಹದೇವ್ ರವರ ಅಧ್ಯಕ್ಷತೆಯಲ್ಲಿ, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರು, ಹಾಗೂ ಎಂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಜಿ ಡಿ ಹರೀಶ್ ಗೌಡ ಮತ್ತು ಮೈಸೂರು ಮೈಮುಲ್ ಅಧ್ಯಕ್ಷರಾದ ಪಿಎಂ ಪ್ರಸನ್ನ ರವರು ಪಿರಿಯಾಪಟ್ಟಣ ಕಸಬಾ ವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ 92 ಲಕ್ಷ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ದೊಡ್ಡಬೇಲಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಮಳಿಗೆಗಳ ಕಟ್ಟಡದ ಅಂದಾಜು 1 ಕೋಟಿ 70 ಲಕ್ಷ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು ತಾಲ್ಲೂಕಿನ ಕೆಲವೊಂದು ಪಿಎಸಿಸಿಎಸ್ ಗಳಲ್ಲಿ ಸಾಲ ಮಂಜೂರಾತಿ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಹಾಗೂ ಅಧಿಕಾರ ದುರುಪಯೋಗವಾಗುತ್ತಿದ್ದು ಅಂಥವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿ ರೈತರ ಹಿತದೃಷ್ಟಿಯಿಂದ ಪಿಎಸಿಸಿಎಸ್ ಗಳಿಗೆ ದೊರೆಯುವ ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ನಂತರ ಮಾತನಾಡಿದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರು, ಹಾಗೂ ಎಂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಜಿ ಡಿ ಹರೀಶ್ ಗೌಡ ರವರು ಪಿಎಸಿಸಿಎಸ್ ಗಳ ಆದಾಯ ಹೆಚ್ಚು ಮಾಡಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ನಬಾರ್ಡ್ ಹಾಗೂ ಎಂಡಿಸಿಸಿ ಬ್ಯಾಂಕ್ ವತಿಯಿಂದ ಎಲ್ಲಾ ಪಿಎಸಿಸಿಎಸ್ ಗಳಿಗೆ ವಾರ್ಷಿಕ ಶೇ.1 ಬಡ್ಡಿ ದರದಲ್ಲಿ 2 ಕೋಟಿ ಸಾಲ ವಿತರಿಸುತ್ತಿದ್ದು ಮೈಸೂರು ಚಾಮರಾಜನಗರ ಜಿಲ್ಲೆಯ ಒಟ್ಟು 275 ಪಿಎಸಿಸಿಎಸ್ ಗಳಲ್ಲಿ ಕಸಬಾ ಪಿಎಸಿಸಿಎಸ್ ಹೆಚ್ಚು ಆದಾಯದ ಮೂಲ ಹೊಂದಿರುವುದು ಶ್ಲಾಘನೀಯ, ರೈತರ ಅನುಕೂಲಕ್ಕಾಗಿ ಸರ್ಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ವಿತರಿಸುವುದಾಗಿ ತಿಳಿಸಿದರು.

ಪಿಎಸಿಸಿಎಸ್ ಅಧ್ಯಕ್ಷ ವಿ.ಆರ್ ವೆಂಕಟೇಶ್ ಮಾತನಾಡಿ ಆಡಳಿತ ಮಂಡಳಿ ಹಾಗು ಷೇರುದಾರರ ಸಹಕಾರದ ಜೊತೆಗೆ ಶಾಸಕ ಕೆ.ಮಹದೇವ್ ರವರ ಸಹಕಾರದಿಂದ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಕಟ್ಟಡ ನಿರ್ಮಾಣಕ್ಕೆ ಎಂಡಿಸಿಸಿ ಬ್ಯಾಂಕ್ ವತಿಯಿಂದ ಸಹಕಾರ ಕೋರಿದರು.

ದೊಡ್ಡಬೇಲಾಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಾನ್ಯ ಶಾಸಕರು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಶ್ರೀ ಕೆ ಮಹದೇವ್ ರವರು , ಮಾನ್ಯ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರು, ಬೆಂಗಳೂರು ಹಾಗೂ ಎಂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರು ಮೈಸೂರು ಶ್ರೀ ಜಿ ಡಿ ಹರೀಶ್ ರವರು ಮತ್ತು ಮೈಮುಲ್ ಅಧ್ಯಕ್ಷರು ಮೈಸೂರು ಜಿಲ್ಲೆ ಪಿಎಂ ಪ್ರಸನ್ನ ರವರು ಭೇಟಿ ನೀಡಿದ ಸಂದರ್ಭ

ಈ ಸಂದರ್ಭ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿ.ಎನ್ ರವಿ, ಮಂಜೇಗೌಡ, ಮೇಲ್ವಿಚಾರಕರಾದ ಜಗದೀಶ್, ಶಿವಕುಮಾರ್, ನಿಂಗರಾಜ್, ವ್ಯವಸ್ಥಾಪಕ ಲೋಹಿತ್, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಸಂಘದ ಉಪಾಧ್ಯಕ್ಷೆ ಗೀತಾ, ನಿರ್ದೇಶಕರಾದ ರಮೇಶ್, ಸತೀಶ್ ಕುಮಾರ್, ಕರಿನಾಯ್ಕ, ಸಣ್ಣಪ್ಪ, ಕುಮಾರ್, ಪ್ರಭುಕುಮಾರ್, ಪಾರ್ವತಿ, ನಟರಾಜ್, ಶಿವಣ್ಣ, ಸೈಯದ್ ಸಿರಾಜ್, ಸಿಇಒ ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿ ವರ್ಗ, ಗ್ರಾ.ಪಂ ಸದಸ್ಯ ಲೋಕೇಶ್, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್ ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top