ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಬಳಿ ನಿರ್ಮಾಣಗೊಂಡಿರುವ ವಿದ್ಯುತ್ ನೂತನ ಉಪ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು. 13/07/2021

ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ವಿವಿಧೆಡೆ ವಿದ್ಯುತ್ ಉಪ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲ್ಲೂಕಿನ ಕಂಪಲಾಪುರ ಬಳಿಯ ಜವನಿಕುಪ್ಪೆ ಗೇಟ್ ನಲ್ಲಿ ವಿದ್ಯುತ್ ಉಪ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ವಿದ್ಯುತ್ ಸಮರ್ಪಕವಾಗಿ ಸರಬರಾಜಾಗದ ಹಿನ್ನೆಲೆ ರೈತರು ಮತ್ತು ಸಾರ್ವಜನಿಕರು ದಿನಂಪ್ರತಿ ಹಲವು ಸಮಸ್ಯೆಗಳನ್ನು ಎದುರಿಸಿ ನನ್ನ ಬಳಿ ಮನವಿ ಸಲ್ಲಿಸುತ್ತಿದ್ದರೂ ಇದನ್ನು ಮನಗಂಡು ತಾಲ್ಲೂಕಿಗೆ ಅಗತ್ಯವಿರುವ ಉಪ ಕೇಂದ್ರಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಉಪ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ತರಲಾಗಿದೆ, ಈಗಾಗಲೇ ತಾಲ್ಲೂಕಿನ ಪಂಚವಳ್ಳಿ, ಹುಣಸವಾಡಿ, ಚಿಕ್ಕನೇರಳೆ, ಮುತ್ತೂರು, ಸೀಗೂರು ಭಾಗಗಳಲ್ಲಿ ವಿದ್ಯುತ್ ಉಪ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಇದರಿಂದ ಸ್ಥಳೀಯವಾಗಿ ರೈತರಿಗೆ ಕೃಷಿ ಚಟುವಟಿಕೆಗೆ ನೀರಾವರಿ ಸರಬರಾಜು ಮಾಡಲು ಹೆಚ್ಚು ಅನುಕೂಲವಾಗುತ್ತಿದೆ, ಜನಸಂಖ್ಯೆ ಹೆಚ್ಚಾದಂತ್ತೆ ಮೂಲಭೂತ ಸೌಲಭ್ಯಗಳು ಕೂಡ ಹೆಚ್ಚಾಗಬೇಕಾಗಿದೆ, ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಮಂಜೂರು ಮಾಡಿಸಲು ಸಾಕಷ್ಟು ಶ್ರಮಿಸುತ್ತಾರೆ ಆದರೆ ಈ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳಲು ಅಧಿಕಾರಿ ವರ್ಗಗಳ ಶ್ರಮ ಮುಖ್ಯವಾಗಿದೆ ಎಂದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕೊಡಗು ಜಿಲ್ಲೆಯ ಬೃಹತ್ ಕಾಮಗಾರಿ ವಿಭಾಗದ ಕಾರ್ಯ ನಿರ್ವಾಹಕಾಧಿಕಾರಿ ಮಾದೇಶ್ ಮಾತನಾಡಿ ನೂತನ ಉಪಕೇಂದ್ರವು ೬೬/೧೧ ಕೆ.ವಿಯ ಸಾಮರ್ಥ್ಯವನ್ನು ಹೊಂದಿದ್ದು ಇದರ ನಿರ್ಮಾಣಕ್ಕೆ ೫.೬೯ ಕೋಟಿ ವೆಚ್ಚ ತಗುಲಿದೆ, ೧೧ ಕೆ.ವಿ ಯಲ್ಲಿ ೪ ವಿದ್ಯುತ್ ಮಾರ್ಗಗಳನ್ನು ನಿರ್ಮಿಸಲಾಗಿದೆ, ಇದರಿಂದಾಗಿ ತಾಲ್ಲೂಕಿನ ಹಲವು ಪ್ರದೇಶ ಸೇರಿದಂತೆ ಹುಣಸೂರು ತಾಲ್ಲೂಕಿನ ಕೆಲ ಪ್ರದೇಶಗಳ ಸ್ಥಳೀಯರಿಗೆ ವಿದ್ಯುತ್ ಸರಬರಾಜಿನಲ್ಲಿ ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ವಿಭಾಗದ ಅಭಿಯಂತರ ಆನಂದ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರೆ ಹೇಮಮಾಲಿನಿ, ಸಹಾಯಕ ಅಭಿಯಂತರ ಶಾಂತಕುಮಾರ್, ತಾ.ಪಂ ಮಾಜಿ ಸದಸ್ಯ ಆರ್.ಎಸ್ ಮಹದೇವ್, ಕಂಪಲಾಪುರ ಪಿಎಸಿಸಿಎಸ್ ಅಧ್ಯಕ್ಷ ಕುಮಾರ್, ಗ್ರಾ.ಪಂ ಅಧ್ಯಕ್ಷೆ ರಾಣಿಕೃಷ್ಣೇಗೌಡ, ಉಪಾಧ್ಯಕ್ಷ ರಾಮಲಿಂಗ ಸದಸ್ಯರಾದ ಪ್ರತಿಭಾ, ನಾಗರಾಜು, ಲಕ್ಷ್ಮಣ್, ಜಯಣ್ಣ ,ಪಿಡಿಓ ಎಸ್.ಆರ್ ಪರಮೇಶ್, ಚಾಮುಂಡೇಶ್ವರಿ ಎಲೆಕ್ಟ್ರಿಕಲ್ಸ್ ನ ಗುತ್ತಿಗೆದಾರ ದೆuಟಿಜeಜಿiಟಿeಜಡ್ಡಕೆuಟಿಜeಜಿiಟಿeಜಪ್ಲು ಅಭಿಲಾಷ್ ಮತ್ತಿತ್ತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top