
ಪಿರಿಯಾಪಟ್ಟಣ: ಪಟ್ಟಣದ ಬಸ್ ನಿಲ್ದಾಣ ಬಳಿಯಲ್ಲಿ ಪುರಸಭೆ ವತಿಯಿಂದ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಕಟ್ಟಡಗಳನ್ನು ಶಾಸಕ ಕೆ.ಮಹದೇವ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು ಪುರಸಭೆ ವತಿಯಿಂದ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ಜನರ ತೆರಿಗೆ ಹಣವೇ ಪುರಸಭೆಗೆ ಆದಾಯ ಮೂಲವಾಗಿದ್ದು ಬಾಡಿಗೆ ಪಾವತಿಸದವರು ಎಷ್ಟೇ ಪ್ರಭಾವಿ ಆಗಿದ್ದರೂ ಸರಿ ಅವರ ವಿರುದ್ಧ ಮುಲಾಜಿಲ್ಲದೆ ಅಧಿಕಾರಿಗಳು ಹಾಗೂ ಆಡಳಿತ ವರ್ಗ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಪಟ್ಟಣದ ಜನರು ಸಹ ನಿಗದಿತ ಸಮಯಕ್ಕೆ ನೀರು ಹಾಗೂ ಕಂದಾಯ ತೆರಿಗೆ ಹಣ ಪಾವತಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು, ನೂತನ ವಾಣಿಜ್ಯ ಮಳಿಗೆ ಕಟ್ಟಡಗಳನ್ನು ಬಾಡಿಗೆಗೆ ಪಡೆಯುವವರಿಗೆ ಹೆಚ್ಚು ಹೊರೆ ಬಾರದ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಸುವಂತೆ ತಿಳಿಸಿದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ, ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್, ಸದಸ್ಯರಾದ ಪಿ.ಸಿ ಕೃಷ್ಣ, ನಿರಂಜನ್, ಪ್ರಕಾಶ್ ಸಿಂಗ್, ನಾಮನಿರ್ದೇಶಿತ ಸದಸ್ಯರಾದ ನಳಿನಿ, ಪ್ರಸಾದ್, ಶಿವರಾಮೇಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ಜೆ.ಇ ಸದಾಶಿವಪ್ಪ, ಆರೋಗ್ಯ ನಿರೀಕ್ಷಕರಾದ ಪ್ರದೀಪ್, ಆದರ್ಶ, ಮುಖಂಡರಾದ ಕುಮಾರ್, ಉಮೇಶ್, ಕುಮಾರಸ್ವಾಮಿ, ರವಿ, ವಿಜಯ್, ಸಿಬ್ಬಂದಿ ಮಂಜು ಮತ್ತಿತರರಿದ್ದರು.