ಪಟ್ಟಣದ ಹರವೆ ಮಲ್ಲರಾಜ ಪಟ್ಟಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಕೆ.ಮಹದೇವ್ 26/07/2021

ಪಿರಿಯಾಪಟ್ಟಣ:ಅಧಿಕಾರದ ಅವಧಿಯಲ್ಲಿ ಉತ್ತಮ ಆಡಳಿತವನ್ನು ನೀಡಿದಲ್ಲಿ ಮಾತ್ರ ಇತರರಿಗೆ ಮಾದರಿಯಾಗಲು ಸಾಧ್ಯ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಹರವೆ ಮಲ್ಲರಾಜ ಪಟ್ಟಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಮಗ ಪಿ.ಎಂ.ಪ್ರಸನ್ನ ಮೈಮುಲ್ ನಿರ್ದೇಶಕನಾಗಿ ಆಯ್ಕೆಯಾದ ಸಂದರ್ಭದಿAದಲೂ ಕೂಡ ಜನ ಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದ್ದೆ ಅದರಂತ್ತೆ ತಾಲ್ಲೂಕಿನಾದ್ಯಂತ್ತ ಹಾಲು ಉತ್ಪಾದಕರ ಬಗ್ಗೆ ಶ್ರಮಿಸುತ್ತಿದ್ದಾನೆ.ಆದರೆ ಇಂದು ಮೈಮುಲ್ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕಾರ ನೀಡಿದ ಪ್ರತಿಯೊಬ್ಬರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಜೀವ ಇರುವವರೆಗೂ ಚಿರ ಋಣಿಯಾಗಿರುತ್ತೇನೆ.ಅಧಿಕಾರ ದೊರೆಯುವುದು ಸುಲಭದ ಮಾತಲ್ಲ ಅದನ್ನು ಪಡೆಯಲು ಬಹಳಷ್ಟು ಶ್ರಮಪಡಬೇಕು ದೊರೆತ ನಂತರ ಜನ ಸಾಮಾನ್ಯರಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು.ಮೈಮುಲ್ ನಧ್ಯಕ್ಷರಾಗಿ ಈ ಹಿಂದೆ ನಮ್ಮ ತಾಲ್ಲೂಕಿನ ಎಲ್.ಆನಂದ್ ಆಯ್ಕೆಯಾಗಿ ಇತಿಹಾಸವನ್ನು ನಿರ್ಮಿಸಿದ್ದಾರೆ.ಆದರಿಂದ್ದ ಕಛೇರಿಯಲ್ಲಿ ಅವರ ಭಾವಚಿತ್ರವನ್ನು ಹಾಕಬೇಕು ಎಂದರಲ್ಲದೆ ಇವರ ನಂತರ ನಮ್ಮ ಕುಟುಂಬಕ್ಕೆ ಈಗ ಅಧ್ಯಕ್ಷ ಅವಕಾಶ ದೊರೆತಿದೆ.ಪ್ರಾರಂಭದಲ್ಲಿಯೇ ಒಕ್ಕೂಟದಿಂದ ಉತ್ಪಾದಕರಿಗೆ ನೀಡುವ ಪ್ರೋತ್ಸಹ ಧನವನ್ನು ಹೆಚ್ಚಿಸುವಂತ್ತೆ ಹೇಳಲಾಗಿ ಇತ್ತಿಚಿಗೆ ನೂತನ ಆಡಳಿತ ಮಂಡಳಿಯು ೨ರೂ ಪ್ರೋತ್ಸಾಹ ಧನವನ್ನು ಹೆಚ್ಚಿಸಿದ್ದಾರೆ ಇದನ್ನು ಹಾಲು ಉತ್ಪಾದಕರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು ಎಂದರು.

ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ಮೈಮುಲ್ ೫೦ ಕೋಟಿ ನಷ್ಟದಲಿದ್ದ ಸಂದರ್ಭದಲ್ಲಿಯೂ ಹಾಲು ಉತ್ಪಾದಕರಿಗೆ ಉತ್ತಮ ಯೋಜನೆಗಳನ್ನು ನೀಡಲಾಗಿದೆ.ಪ್ರಸ್ತುತವಾಗಿಯು ನಷ್ಟದಲ್ಲಿರುವ ಮೈಮುಲ್ ನಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದ ರೀತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.ಈಗಾಗಲೆ ತಾಲ್ಲುಕಿನಲ್ಲಿ ೧೮೦ ಸಹಕಾರ ಸಂಘಗಳಿದ್ದು,೨೦೦ಕ್ಕೂ ಹೆಚ್ಚಿನ ಸಂಘಗಳನ್ನು ಸ್ಥಾಪಿಸುವುದರ ಮೂಲಕ ಪ್ರತಿ ಗ್ರಾಮದಲ್ಲಿಯೂ ಕಟ್ಟಡಗಳನ್ನು ನಿರ್ಮಿಸಲಾಗುವುದು.ಇದಲ್ಲದೆ ಶೇ.೫೦ ರಲ್ಲಿ ಉತ್ಪಾದಕರಿಗೆ ಪರಿಕರಗಳನ್ನು ನೀಡುವ ಯೋಜನೆಯಿದ್ದು,ತಾಲ್ಲೂಕಿನಲ್ಲಿ ಪ್ರಥಮವಾಗಿ ಫೀಡ್ಸ್ ಕಾರ್ಖಾನೆಯನ್ನು ಸ್ಥಾಪಿಸಲು ಮುಂದಾಗಿದ್ದೇನೆ.ಇದರಿAದಾಗಿ ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.ಇದಲ್ಲದೆ ಉತ್ಪಾದಕರಿಗೆ ಮತ್ತು ಜಾನುವಾರುಗಳಿಗೆ ವಿಮಾ ಯೋಜನೆಯನ್ನು ಜಾರಿಗೊಲಿಸಲಾಗಿದ್ದು,ಈಗಾಗಲೆ ಜಿಲ್ಲೆಯಲ್ಲಿ ೩೬ ಸಾವಿರ ಮತ್ತು ತಾಲ್ಲೂಕಿನಲ್ಲಿ ೮ ಸಾವಿರ ವಿಮೆಗಳನ್ನು ಮಾಡಿಸಲಾಗಿದೆ.ಆದರಿಂದ್ದ ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದರ ಮೂಲಕ ಸಂಸ್ಥೆಯನ್ನು ಉಳಿಸಿ ಜೊತೆಗೆ ನೀವು ಕೂಡ ಆರ್ಥಿಕವಾಗಿ ಸದೃಡರಾಗಬೇಕು ಎಂದರು.

ಈ ಸಂದರ್ಭದಲ್ಲಿ ಮೈಮುಲ್ ಜಿಲ್ಲಾ ನಿರ್ದೇಶಕ ಸೋಮಶೇಖರ್,ರಾಜೇಂದ್ರ,ದಾಕ್ಷಾಯಣಿ,ಜಿಲ್ಲಾ ಉಪ ವ್ಯವಸ್ಥಾಪಕ ಡಾ.ಎನ್.ಕುಮಾರ್,ಸಂಘದ ಅಧ್ಯಕ್ಷೆ ದೀಪಿಕಾ ಮಂಜುನಾಥ್,ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್,ಉಪಾಧ್ಯಕ್ಷೆ ನಾಗರತ್ನ,ಸದಸ್ಯ ಪಿ.ಸಿ.ಕೃಷ್ಣ,ಪ್ರಕಾಶ್ ಸಿಂಗ್,ನಿರಂಜನ್ ,ವಿಸ್ತರಂಧಿಕಾರಿ ನಿಶ್ಚಿತ್,ಸಚ್ಚಿನ್,ಆಕಾಶ್,ವೀಣ,ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ,ಮುಖಂಡ ಶಿವಶಂಕರ್,ಟಿ.ರಾಜು ಸೇರಿದಂತ್ತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top