
ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಸರ್ಕಾರದಿಂದ ಬಂದಿರುವ ಸುತ್ತೋಲೆಗಳನ್ನು ಓದಿ ಅಂಗೀಕರಿಸುವ ವಿಚಾರವಾಗಿ ಪ್ರಸ್ತಾಪಿಸಲಾಯಿತು.
ಪಿರಿಯಾಪಟ್ಟಣ ಪುರಸಭೆಯ ನೂತನ ಮಳಿಗೆಗಳನ್ನು ಬಹಿರಂಗ ಹರಾಜು ಮಾಡುವ ಬಗ್ಗೆ ಪ್ರಸ್ತಾಪಿಸಲಾಯಿತು.
ಪಿರಿಯಾಪಟ್ಟಣ ಪುರಸಭೆಯ ಸಂತೆ ಮಾಳದ 26 ಮಳಿಗೆಗಳ ವಿಚಾರವಾಗಿ ಪ್ರಸ್ತಾಪಿಸಲಾಯಿತು.
ಪಿರಿಯಾಪಟ್ಟಣ ಪುರಸಭೆಯ ಹಳೆ ಕಟ್ಟಡವನ್ನು ತೆರವುಗೊಳಿಸಿ ನೂತನ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು.
ಪಿರಿಯಾಪಟ್ಟಣ ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನನ್ನು ಪುರಸಭೆಗೆ ಹಸ್ತಾಂತರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಲ್ಲಿಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಚರ್ಚಿಸಲಾಯಿತು
ವಿವಿಧ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕರೆದಿರುವ ಟೆಂಡರ್ ಗಳನ್ನು ದರಪಟ್ಟಿ ಅಂಗೀಕರಿಸುವ ವಿಚಾರವಾಗಿ ಪ್ರಸ್ತಾಪಿಸಲಾಯಿತು
ಪಿರಿಯಾಪಟ್ಟಣ ಪುರಸಭೆ ಸಭಾಭವನಕ್ಕೆ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಕುಶನ್ ಕುರ್ಚಿ ಖರೀದಿಸುವ ಬಗ್ಗೆ ಪ್ರಸ್ತಾಪಿಸಲಾಯಿತು
ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯ ಬಿಎಂ ರಸ್ತೆಯಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆ ವಿಚಾರವಾಗಿ ಚರ್ಚಿಸಲಾಯಿತು
ವಿವಿಧ ಕರಡು ನಕ್ಷೆಯನ್ನು ಅನುಮೋದಿಸುವ ಬಗ್ಗೆ ಚರ್ಚಿಸಲಾಯಿತು
2021 – 22 ನೇ ಸಾಲಿನಲ್ಲಿ ನೀಡಿರುವ ಸಂದೇಶ ವಿಕ ಮತ್ತು ಸಂತೆ ಮಾಳದ ಕುರಿ-ಕೋಳಿ ಮಾಂಸದ ಅಂಗಡಿ ನೀಡಿರುವ ಬಹಿರಂಗ ಹರಾಜು ಮಾಡಿರುವ ಹರಾಜನ್ನು ಅಂಗೀಕರಿಸುವ ಬಗ್ಗೆ ಚರ್ಚಿಸಲಾಯಿತು
ಹಂದಿ ಗೊಲ್ಲರಿಗಾಗಿ ನಿರ್ಮಿಸುತ್ತಿರುವ ಜಿ+2 ಮಾದರಿಯ ಗುಂಪು ಮನೆಗಳ ಡಿ ಪಿ ಆರ್ ನನ್ನು ಅಂಗೀಕರಿಸುವ ವಿಚಾರ ಪ್ರಸ್ತಾಪಿಸಲಾಯಿತು
ಗಿರಗೂರಿನಲ್ಲಿರುವ ಜಾರ ವಾಲ್ ನ ಮತ್ತು ಹುಣಸವಾಡಿ ಶುದ್ಧೀಕರಣ ಘಟಕದಲ್ಲಿರುವ ವಸತಿಗೃಹಗಳನ್ನು ದುರಸ್ತಿ ಮಾಡಿಸುವುದು ಹಾಗೂ ಶುದ್ಧೀಕರಣ ಘಟಕದಲ್ಲಿ ಸಂಬಂಧಿಸಿದ ನಿರ್ವಹಣೆ ಕೆಲಸಕ್ಕೆ ಸಾಮಗ್ರಿ ಹೋಗಿದ್ದು ಇವುಗಳಿಗೆ ದುರಸ್ತಿ ಮಾಡಲು ಮತ್ತು ಕಟ್ಟಡ ಬಾಗಿಲು ಹೊಸದಾಗಿ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು
ವಿವಿಧ ವಾರ್ಷಿಕ ಟೆಂಡರ್ ಕರೆಯುವ ಬಗ್ಗೆ ಪ್ರಸ್ತಾಪಿಸಲಾಯಿತು
ವಾರ್ಡ್ ನಂಬರ್ 01 ರಲ್ಲಿ ಹೊಂದಿಕೊಂಡಂತೆ ಇರುವ ಸ್ಟೇಡಿಯಂ ಹತ್ತಿರದ ಮನೆಗಳನ್ನು ಪುರಸಭೆಗೆ ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಪುರಸಭೆ ಕಾರ್ಯಾಲಯಕ್ಕೆ ಇಬ್ಬರು ವಾಚ್ಮ್ಯಾನ್ ಮತ್ತು ಕ್ಲೀನಿಂಗ್ ಗಾಗಿ ಒಬ್ಬರನ್ನು ಹೊರಗುತ್ತಿಗೆ ಮೇಲೆ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಶಾಸಕರು ಹಾಗೂ ಅಧ್ಯಕ್ಷರು ಗಳಿಗೆ ತರಬಹುದಾದ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು