
ಪಿರಿಯಾಪಟ್ಟಣ: ಮಾನವನ ಆಧುನಿಕ ಜೀವನಕ್ಕೆ ವಾಹನವು ಅತ್ಯವಶ್ಯಕ ಸಂಪರ್ಕ ಸೇತುವೆ ಆಗಿದೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ಪಟ್ಟಣದ ಟಿವಿಎಸ್ ಶೋರೂಮ್ ನಲ್ಲಿ ಟಿವಿಎಸ್ ಕಂಪನಿಯ ವತಿಯಿಂದ ನಿರ್ಮಾಣಗೊಂಡಿದ್ದ ನೂತನ ವಿನ್ಯಾಸದ tvs-NTORC 125 ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಆಧುನಿಕ ಜೀವನ ವ್ಯವಸ್ಥೆಗೆ ನಾಗರಿಕ ಸಮುದಾಯವು ಹೊಂದಿಕೊಳ್ಳುತ್ತಿದೆ ಇದಕ್ಕೆ ಪೂರಕವಾಗಿ ಅವಶ್ಯಕವಾಗಿರುವ ಮೂಲಭೂತ ಮೂಲಭೂತ ಸೌಲಭ್ಯಗಳನ್ನು ಬಯಸುತ್ತಿದ್ದಾನೆ.ಅದರಲ್ಲಿ ವಾಹನದ ಅನಿವಾರ್ಯತೆ ಕೂಡ ಇದ್ದು, ಅನೇಕ ಕಂಪನಿಗಳು ತಮ್ಮ ತಮ್ಮ ಆಲೋಚನೆಗೆ ತಕ್ಕಂತೆ ವಿನ್ಯಾಸಗೊಳಿಸಿ ವಾಹನಗಳನ್ನು ಜನಸಾಮಾನ್ಯರಿಗೆ ಮಾರಾಟ ಮಾಡುತ್ತಿದೆ. ಅದರಲ್ಲಿ ಟಿವಿಎಸ್ ಕಂಪನಿಯು ಕೂಡ ಪ್ರಮುಖವಾಗಿದ್ದು ಉತ್ತಮ ಗುಣಮಟ್ಟದ ಮತ್ತು ಜನಸಾಮಾನ್ಯರಿಗೆ ದೊರಕುವ ರೀತಿಯಲ್ಲಿ ದ್ವಿಚಕ್ರವಾಹನದ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡುತಿದೆ. ಇದಲ್ಲದೆ ನಿರುದ್ಯೋಗಿಗಳಿಗೆ ತಮ್ಮ ಕಂಪನಿಗಳ ಮೂಲಕ ಉದ್ಯೋಗಗಳನ್ನು ನೀಡಿ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸುವ ಪ್ರಮುಖ ಪಾತ್ರ ವಹಿಸಿದೆ ಎಂದರು.
ಟಿವಿಎಸ್ ಕಂಪನಿಯ ಮೈಸೂರು ಶಾಖಾ ವ್ಯವಸ್ಥಾಪಕ ಲೋಕೇಶ್ ಮಾತನಾಡಿ ನೂತನ ವಿನ್ಯಾಸದ ಟಿವಿಎಸ್ 125 ದ್ವಿಚಕ್ರ ವಾಹನವೂ ಆಧುನಿಕ ಯಂತ್ರೋಪಕರಣಗಳ ಮೂಲಕ ತಯಾರಿಸಿದ್ದು, ಜನಸಾಮಾನ್ಯರಿಗೆ ಅತ್ಯವಶ್ಯಕವಾದ ಬ್ಲೂಟೂತ್, ಎಂಜಿನ್, ವಾಯ್ಸ್ ಅಸಿಸ್ಟ್, ಸ್ತ್ರೀಟ್ ಅಂಡ್ ರೇಸ್ ಮೊಡ್ ಸೇರಿದಂತೆ 10hp ಪವರ್ ಸಾಮರ್ಥ್ಯವನ್ನು ಈ ವಾಹನವು ಹೊಂದಿದೆ ಎಂದು ತಿಳಿಸಿದರು.
ಅದಲ್ಲಿ ಟಿವಿಎಸ್ ಶೋರೂಮ್ ಮಾಲಿಕ ಅನ್ಸರ್, ಮಾಜಿ ಪುರಸಭಾ ಸದಸ್ಯ ಅಮ್ಜದ್ ಹಾಗೂ ನಸಿಂ ಸೇರಿದಂತೆ ಮತ್ತಿತರರು ಹಾಜರಿದ್ದರು.