ಪಿರಿಯಾಪಟ್ಟಣ ತಾಲ್ಲೂಕಿನ ಚನ್ನಕೇಶವಪುರ ಬಳಿಯ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯಿಂದ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ MLA K.Mahadev ಚಾಲನೆ ನೀಡಿದರು. 28/07/2021

ಪಿರಿಯಾಪಟ್ಟಣ ತಾಲ್ಲೂಕಿನ ಚನ್ನಕೇಶವಪುರ ಗ್ರಾಮದ ಬಳಿಯ ಕರಡಿಲಕ್ಕನಕೆರೆ ಏತ ನೀರಾವರಿ ಯೋಜನೆಯಿಂದ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು.
ನಂತರ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ 27 ಸಾವಿರ ಎಕರೆ ರೈತರ ವ್ಯವಸಾಯದ ಭೂಮಿಗೆ ನೀರು ಹರಿಸಲು ಸಹಾಯವಾಗಲಿದ್ದು ಇದರಿಂದ ನಾಲೆಯ ಅಚ್ಚುಕಟ್ಟಿನ ರೈತರು ಭತ್ತದ ಬೆಳೆ ಬೆಳೆಯಬಹುದು ಮತ್ತು ಆ ಭಾಗಗಳಲ್ಲಿನ ಕೆರೆ ಕಟ್ಟೆಗಳನ್ನು ತುಂಬಿಸಲು ಸಹಾಯವಾಗಲಿದೆ, ನಾಲೆಯ ಏರಿ ಹಾಗೂ ರೈತರು ತಮ್ಮ ಜಮೀನಿಗೆ ಓಡಾಡಲು ಇರುವ ದಾರಿಯನ್ನು ಅಭಿವೃದ್ಧಿಗೊಳಿಸಲು ನಮ್ಮ ಹೊಲ-ನಮ್ಮ ರಸ್ತೆ ಎಂಬ ಸರ್ಕಾರದ ಯೋಜನೆಯಡಿ ಅವಕಾಶವಿದ್ದು ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು,
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಳೆದ ಬಾರಿ ತಾಲ್ಲೂಕಿನಲ್ಲಿ ರೈತರಿಂದ ಖರೀದಿಸಿದ ರಾಗಿ ಹಣ ಪಾವತಿ ಆಗಿಲ್ಲ ಎಂದು ರೈತರು ಮನವಿ ಮಾಡಿದ್ದರು, ಈ ವಿಷಯವನ್ನು ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚಿಸಿ ರೈತರಿಗೆ ಹಣ ಬಿಡುಗಡೆ ಮಾಡಿಸಲಾಗಿದೆ, ಕೆಲವೊಂದು ಕಡೆ ರೈತರು ರಶೀದಿ ನೀಡಿಲ್ಲ ಅನ್ಯಾಯವಾಗಿದೆ ಎಂದು ದೂರು ನೀಡಿದ್ದು ಅಂತಹವರು ದಾಖಲಾತಿ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದಾಗಿ ತಿಳಿಸಿದರು.

ಈ ಸಂದರ್ಭ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಹಾರಂಗಿ ಉಪ ವಿಭಾಗ ಎಇಇ ನವೀನ್, ಎಇ ಗಳಾದ ಶಿವಕುಮಾರ್, ಗೌತಮ್, ಲೋಹಿತ್, ಸುರೇಂದ್ರ, ಕಲೀಂ, ಜಿ.ಪಂ ಎಇಇ ಮಂಜುನಾಥ್, ಪಿಡಬ್ಲ್ಯುಡಿ ಎಇಇ ಜಯಂತ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ದೊಡ್ಡಕಮರವಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರೇಗೌಡ, ಚನ್ನಕಲ್ ಕಾವಲು ಗ್ರಾ.ಪಂ ಅಧ್ಯಕ್ಷೆ ಮಂದಾರ, ಉಪಾಧ್ಯಕ್ಷ ಧನರಾಜ್, ಮಾಜಿ ಅಧ್ಯಕ್ಷ ಸುಂದರೆಗೌಡ, ಸದಸ್ಯರಾದ ಮಂಜುನಾಥ್, ಗಣೇಶ್, ಚಂದ್ರಶೇಖರ್, ಪ್ರಭಾಕರ್, ಪಿಡಿಒ ಮಂಜುನಾಥ್, ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾನಜೀರ್ ಚಿಕ್ಕನೇರಳೆ, ತಾ.ಪಂ ಮಾಜಿ ಸದಸ್ಯ ಮೋಹನ್ ರಾಜ್, ಮುಖಂಡರಾದ ಚಂದ್ರಶೇಖರ್, ಮೈಲಾರಪ್ಪ ಮತ್ತಿತರರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top