
ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿದೆ ನವೀನ ಪ್ರಯೋಗಗಳು ಇಲ್ಲಿ ನಡೆಯುತ್ತಿವೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು ಈಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಬೋಧನಾ ವ್ಯವಸ್ಥೆ ಜ್ಞಾನ ಹೆಚ್ಚಿಸಿಕೊಳ್ಳಲು ಬೇಕಾದಷ್ಟು ಇಂಗ್ಲೀಷ್ ಕಲಿಕೆ ನಡೆದಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.
60 ವರ್ಷ ಹಳೆಯದಾದ ಮೂರು ಕೊಠಡಿ ಕೆಡವಿ ಅದೇ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸಿ ಕೊಡುವಂತೆ ಆಟದ ಮೈದಾನಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು
ಈ ಸಂದರ್ಭ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ರಾಜೇಗೌಡ, ಬಿ ಇ ಒ ವ್ಯ್ ಕೆ ತಿಮ್ಮೇಗೌಡ, ತಹಸೀಲ್ದಾರ್ ಕೆ ಚಂದ್ರಮೌಳಿ, ಇ ಒ ಕೃಷ್ಣಕುಮಾರ್, ಮುಖ್ಯೋಪಾಧ್ಯಾಯರಾದ ಮಹಾದೇವಿ, ಶಿಕ್ಷಕರಾದ ಮನೋಹರ್, ಚಂದ್ರೇಗೌಡ, ವಿರೂಪಾಕ್ಷ , ಪುಷ್ಪಮೇರಿ, ಮುಖಂಡರಾದ ರಮೇಶ್, ಶ್ರೀನಿವಾಸ್, ವಸಂತ್, ರೂಪ, ಅಕ್ಕಯ್ಯಮ್ಮ, ಶೇಖರಗೌಡ ,ರಾಮೇಗೌಡ, ಈರೇಗೌಡ,ಸೋಮಶೇಖರ್ ಮತ್ತಿತರಿದ್ದರು