ಪಿರಿಯಾಪಟ್ಟಣ: ತಾಲ್ಲೂಕಿನ ಸೆಣಬಿನಕುಪ್ಪೆ (ಪೂನಾಡಹಳ್ಳಿಕೊಪ್ಪಲು) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಶಾಸಕ ಕೆ ಮಹದೇವ್ ಉದ್ಘಾಟಿಸಿದರು 11/08/2021

ತಾಲ್ಲೂಕಿನ ಸೆಣಬಿನಕುಪ್ಪೆ (ಪೂನಾಡಹಳ್ಳಿಕೊಪ್ಪಲು) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಶಾಸಕ ಕೆ ಮಹದೇವ್ ಉದ್ಘಾಟಿಸಿದರು
ಸಹಕಾರ ಕ್ಷೇತ್ರಗಳಲ್ಲಿ ರಾಜಕೀಯ ಬೆರೆಸದೆ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸುವಂತೆ ಶಾಸಕ ಕೆ.ಮಹದೇವ್ ಹೇಳಿದರು. ಮಳೆಯ ಆಶ್ರಯದಿಂದ  ತಂಬಾಕು ಮತ್ತು ಇನ್ನಿತರ ಬೆಳೆ ಬೆಳೆಯುವುದು  ಸುಲಭದ ಕೆಲಸವಲ್ಲ, ಅನಿಶ್ಚಿತ ಆದಾಯದಿಂದ ಸಮಸ್ಯೆ ಎದುರಿಸುವ ಬದಲು ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿ ಅವಲಂಬಿಸಿ ಆರ್ಥಿಕ ಅಭಿವೃದ್ಧಿ ಹೊಂದಬೇಕು, ನನ್ನ ಮಗ ಪಿ.ಎಂ ಪ್ರಸನ್ನ ನಿರ್ದೇಶಕನಾಗಿದ್ದಾಗಿನಿಂದಲೂ ಒಕ್ಕೂಟದ ಅಧ್ಯಕ್ಷನಾದವರೆಗೂ ಹೈನುಗಾರರ ಹಿತ ಕಾಪಾಡಲು ಮೊದಲ ಆದ್ಯತೆ ನೀಡಿ ತಾಲ್ಲೂಕಿನಾದ್ಯಂತ ಹೆಚ್ಚುವರಿಯಾಗಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಬಿಎಂಸಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ, ಅಧಿಕ ಹಾಲು ಉತ್ಪಾದನೆಯಲ್ಲಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಆರು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಕೇವಲ 40 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು ಈಗ 1.50 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುವ ಮೂಲಕ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ಒಕ್ಕೂಟದ ಅಧ್ಯಕ್ಷನಾದ ಮೊದಲ ಸಭೆಯಲ್ಲಿಯೇ ಒಕ್ಕೂಟ ನಷ್ಟದಲ್ಲಿದ್ದರೂ 2 ರೂ ಹಾಲಿನ ದರ ಹೆಚ್ಚಳ ಮಾಡಿ ಹೈನುಗಾರರ ಹಿತ ಕಾಪಾಡಲಾಯಿತು, ಒಕ್ಕೂಟದಿಂದ ಹಾಲು ಕರೆಯುವ ಯಂತ್ರ, ಹುಲ್ಲು ಕಟಾವು ಯಂತ್ರ, ಮ್ಯಾಟ್ ಸೇರಿದಂತೆ ಹಲವು ಸವಲತ್ತುಗಳು ಸಬ್ಸಿಡಿ ದರದಲ್ಲಿ ದೊರೆಯುತ್ತಿದ್ದು ಅವುಗಳ ಸದ್ಬಳಕೆ ಆಗಬೇಕಿದೆ, ಪ್ರತಿಯೊಬ್ಬ ಹೈನುಗಾರರು ಕಡ್ಡಾಯವಾಗಿ ರಾಸು ಮತ್ತು ವೈಯಕ್ತಿಕವಾಗಿ ವಿಮೆ ಮಾಡಿಸಿ ಆಪತ್ಕಾಲದಲ್ಲಿ ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ ಮಾತನಾಡಿದರು.

ಈ ಸಂದರ್ಭ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಜಿ.ಪಂ ಮಾಜಿ ಸದಸ್ಯ ಜಯಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮೈಮುಲ್ ವ್ಯವಸ್ಥಾಪಕ ಕುಮಾರ್, ಸಂಘದ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಕರಿಗೌಡ, ನಿರ್ದೇಶಕರಾದ ಪಿ.ವಿ. ಪುರುಷೋತ್ತಮ, ಎಚ್.ಮಂಜುನಾಥ್, ಶ್ರೀನಿವಾಸ್, ಮಂಜುನಾಥ್, ಗಣೇಶ್, ಹನುಮಂತ, ಚಂದ್ರಮ್ಮ, ಸಿಇಓ ವಿರೂಪಾಕ್ಷ ಮತ್ತು ಸಿಬ್ಬಂದಿ, ಮುಖಂಡರಾದ ಹೊನ್ನೇಗೌಡ,  ರಾಮಮೂರ್ತಿ, ಸಿದ್ದೇಗೌಡ, ಜಲೇಂದ್ರ, ವಿಸ್ತರಣಾಧಿಕಾರಿಗಳಾದ ಸಚಿನ್, ಆಕಾಶ್, ನಿಶ್ಚಿತ್, ಗ್ರಾ.ಪಂ ಪಿಡಿಒ ಶಿವನಗೌಡ ಕೋರಿಗೌಡ್ರು, ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top