
ಪಿರಿಯಾಪಟ್ಟಣ: ತಾಲ್ಲೂಕಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದೊರೆಯಬೇಕು ಈ ನಿಟ್ಟಿನಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲ್ಲೂಕಿನ ಗಳಗನ ಕೆರೆ, ನಾರಳಪುರ, ಭುತಾನಹಳ್ಳಿ, ಹುಣಸೇವಾದಿ ಮತ್ತು ಕೆ ಹರಳಹಳ್ಳಿ ಗ್ರಾಮಗಳಲ್ಲಿ ಪಡಿತರ ವಿತರಣಾ ಉಪ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಗ್ರಾಮೀಣ ಪ್ರದೇಶ ಜನರು ಪಡಿತರ ಪಡೆಯಲು ತಮ್ಮ ಗ್ರಾಮಗಳಿಂದ ಬೇರೆಡೆ ಹೋಗಿ ಸಮಯ ಹಾಗೂ ಹಣ ವ್ಯಯ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಆಯಾ ಗ್ರಾಮಗಳಲ್ಲಿಯೆ ಪಡಿತರ ಪಡೆಯಲು ಅವಕಾಶ ಕಲ್ಪಿಸುವಂತೆ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಗೆ ಸೂಚಿಸಿದ್ದೆ ಈ ನಿಟ್ಟಿನಲ್ಲಿ ಅವರು ಆದ್ಯತೆಗನುಗುಣವಾಗಿ ತಾಲ್ಲೂಕಿನಾದ್ಯಂತ ಪಡಿತರ ಉಪಕೇಂದ್ರ ಆರಂಭ ಮಾಡುತ್ತಿದ್ದಾರೆ, ಸ್ವಾತಂತ್ರ ಬಂದು 75 ವರ್ಷವಾದರೂ ಸಹ ನಗರ ಪ್ರದೇಶಗಳ ಜನರಿಗೆ ಸಿಕ್ಕಿರುವ ಮೂಲಭೂತ ಸೌಕರ್ಯಗಳು ಗ್ರಾಮೀಣ ಪ್ರದೇಶಗಳ ಜನರಿಗೆ ದೊರಕುತ್ತಿಲ್ಲ, ಈ ಹಿಂದೆ ಆಡಳಿತ ನಡೆಸಿದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶಗಳು ಇನ್ನೂ ಹಿಂದುಳಿದಿವೆ, ತಾಲ್ಲೂಕಿನಲ್ಲಿ 400ಕ್ಕೂ ಹೆಚ್ಚು ಗ್ರಾಮಗಳಿದ್ದು ಎಲ್ಲವನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ, ಶಾಸಕನಾದಾಗಿನಿಂದ ರಾಜಕೀಯ ಬದ್ಧತೆ ಇಟ್ಟುಕೊಂಡು ಸಾರ್ವಜನಿಕರು ಪ್ರಶ್ನೆ ಮಾಡದ ಹಾಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದರು.
ತಾಲ್ಲೂಕಿನ 34 ಗ್ರಾ.ಪಂ ಗಳಿಗು ಕೋಟಿಗೂ ಹೆಚ್ಚು ಅನುದಾನ ಕೊಡಿಸಿದ್ದೇನೆ, ಸಂಬಂಧಪಟ್ಟ ಗ್ರಾ.ಪಂ ಅಧಿಕಾರಿಗಳು ಅನುದಾನ ಸದ್ಬಳಕೆ ಮಾಡುವಲ್ಲಿ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಮೈಮುಲ್ ನಿರ್ದೇಶಕ ಹಾಗೂ ನಂದಿನಾಥಪುರ ಪಿಎಸಿಸಿಎಸ್ ಅಧ್ಯಕ್ಷ ಎಚ್.ಡಿ ರಾಜೇಂದ್ರ, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್, ಕೋಮಲಾಪುರ ಗ್ರಾ.ಪಂ ಅಧ್ಯಕ್ಷೆ ಸುಗುಣಾ, ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಮಂಜು, ಕೃಷ್ಣ, ರಾಜು, ಗೋವಿಂದೆಗೌಡ, ಅಶೋಕ್, ಸೋಮಾಚಾರಿ, ಶ್ರುತಿ, ರಾಜೇಗೌಡ, ಪಿಡಿಒ ಶಿವನಗೌಡ ಕೋರಿಗೌಡ್ರು, ಪಿಎಸಿಸಿಎಸ್ ಸಿಇಒ ಶಿವಣ್ಣ, ಮುಖಂಡರಾದ ಜಲೇಂದ್ರ, ಶಂಕರ್ ಹಾಗು ಗ್ರಾಮಸ್ಥರು ಹಾಜರಿದ್ದರು.