
ಚೆನ್ನಕೇಶವಪುರ ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ, ವಡ್ಡರಬ್ಯಾಲಕುಪ್ಪೆ ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ, ವಿ ಜಿ ಕೊಪ್ಪಲು ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20ಲಕ್ಷರೂ ಹಾಗೂ ಸುಂಡವಾಳು ಗ್ರಾಮದಲ್ಲಿ ಕನಕ ಸಮುದಾಯ ಭವನ ಕಟ್ಟಡ ನಿರ್ಮಾಣ ಕ್ಕೆ 10 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ಕೆ ಮಹದೇವ್ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ನಾನು ಶಾಸಕನಾದಾಗಿನಿಂದ ತಾಲ್ಲೂಕಿನ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದು ನಾನು ತಂದ ಅನುದಾನದಲ್ಲಿ ಮಾತ್ರ ಬೇರೆಯವರ ಅನುದಾನದಿಂದ ಅಲ್ಲ ಎಂದು ಮಾಜಿ ಶಾಸಕರ ಹಿಂಬಾಲಕರಿಗೆ ಶಾಸಕ ಕೆ.ಮಹದೇವ್ ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಶಾಸಕನಾಗಿ 3 ವರ್ಷ ಅಧಿಕಾರಾವಧಿಯಲ್ಲಿ ಗ್ರಾಮಾಂತರ ಭಾಗದಲ್ಲಿ ಅಭಿವೃದ್ಧಿಯ ಕಾಮಗಾರಿಗೆ ಚಾಲನೆ ನೀಡಿರುವ ಒಂದೇ ಒಂದು ಕೆಲಸ ಬಾಕಿ ಉಳಿದಿಲ್ಲ,ಎಲ್ಲವನ್ನೂ ಸಮರ್ಪಕವಾಗಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿ ಕಾಮಗಾರಿ ಮಾಡಿಸಿದ್ದೇನೆ. ಕಾಮಗಾರಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಯಾರೇ ಆಗಲಿ ಗುದ್ದಲಿ ಪೂಜೆ ಮಾಡಿ ಹೋದ ಕೆಲಸ ಆಗಿಲ್ಲ ಎಂದು ಸಾಬೀತು ಮಾಡಿದರೆ ನಾನು ರಾಜಕೀಯವಾಗಿ ನಿವೃತ್ತಿ ಘೋಷಿಸುತ್ತೇನೆ ಎಂದು ತಿಳಿಸಿದರು.
ನನಗೆ ಎರಡು ಬಾರಿ ಸೋಲಿಗೂ ನನ್ನ ಮೇಲಿರುವ ಸುಳ್ಳಿನ ಆರೋಪವೇ ಕಾರಣ ವಾಗಿದೆ. ನಾನು ಶಾಸಕನಾದರೆ ತಾಲ್ಲೂಕಿನಲ್ಲಿ ಶಾಂತಿ ಭಂಗವಾಗುತ್ತದೆ, ಹೊಡೆದಾಟ ಹೆಚ್ಚಾಗುತ್ತವೆ, ಪ್ರತಿ ಹಳ್ಳಿಗೂ ಪೋಲಿಸ್ ಸ್ಟೇಷನ್ ಬೇಕಾಗುತ್ತದೆ ಎಂದು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ .
ನಾನು ಶಾಸಕನಾದ ಮೇಲೆ ಇದುವರೆಗೂ ಕೂಡ ಯಾವುದೇ ಪಕ್ಷದ ಒಬ್ಬ ಕಾರ್ಯಕರ್ತನ ಮೇಲೆಯೂ ಸಹ ರೌಡಿಶೀಟರ್ ಕೇಸ್ ದಾಖಲಿಸಿಲ್ಲ, 3ವರ್ಷದ ಹಿಂದೆ ಆಡಳಿತ ಮಾಡಿದ ಪುಣ್ಯಾತ್ಮರು ನಮ್ಮ 45 ಕಾರ್ಯಕರ್ತರ ಮೇಲೆ ರೌಡಿಶೀಟರ್ ಕೇಸ್ ದಾಖಲಿಸಿದ್ದಾರೆ. ಅವರು ಮಾಡಿರುವ ಅಪಪ್ರಚಾರದಿಂದ ನನಗೆ 2 ಚುನಾವಣೆಯಲ್ಲಿ ಸೋಲುಂಟಾಗಿದೆ. ಈ ಬಾರಿ ಜನರು ಅರಿತು ನನಗೆ ಆಶೀರ್ವಾದ ಮಾಡಿದ್ದಾರೆ ಅವರ ಋಣ ತೀರಿಸಲು ಸರ್ಕಾರ ಇಲ್ಲದಿದ್ದರೂ ಯಾರೇ ಆಗಿದ್ದರೂ ಅವರ ಕಾಲು ಹಿಡಿದು ಅನುದಾನ ಮಂಜೂರು ಮಾಡಿಸಿದ್ದೇನೆ. ತಾಲ್ಲೂಕಿನಲ್ಲಿರುವ ನಾನ್ನೂರು ಹಳ್ಳಿಗಳನ್ನು ಹಂತ ಹಂತವಾಗಿ ಕೆಲಸ ಮಾಡಿ ಜನರ ಆಶೀರ್ವಾದ ಕಾರ್ಯಕರ್ತರ ಕೊಟ್ಟಿರುವ ಆಶ್ವಾಸನೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭ ಇ ಒ ಸಿಆರ್ ಕೃಷ್ಣ ಕುಮಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ರಘುನಾಥ್, ಮುಖಂಡರಾದ ಸುಂದರೇಗೌಡ ಮೈಲಾರಪ್ಪ ಪುಟ್ಟಸ್ವಾಮಿ ಗಣೇಶ್ ಸೋಮಣ್ಣ ಮಹದೇವ್ ಚಂದ್ರಶೇಖರ್ ಕುಶಾಲ್ ನಟರಾಜ್ ಸುರೇಶ್ ಕುಮಾರ್ ಸ್ವಾಮಿಗೌಡ ಜವರೇಗೌಡ ಸಣ್ಣಸ್ವಾಮಿಗೌಡ ಕೃಷ್ಣೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು .