
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಡಿ.ದೇವರಾಜ ಅರಸುರವರ 106ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ದಲಿತರು ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ವಿಶೇಷ ಕಾನೂನುಗಳನ್ನು ಜಾರಿಗೆ ತರುವ ಮೂಲಕ 20 ಅಂಶಗಳ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅರಸುರವದ್ದಾಗಿದೆ, ಉಳುವವನೇ ಭೂಮಿಯ ಒಡೆಯ ಎಂಬ ಗೇಣಿ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಬಡ ಜನರ ಆಶಾಕಿರಣವಾಗಿದ್ದರು, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಗ್ರಾಮದಲ್ಲಿ ಜನಿಸಿ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ತಮ್ಮ ಬಾಲ್ಯ ಜೀವನವನ್ನು ನಡೆಸಿದ ಅರಸುರವರು ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿ ಎನಿಸಿಕೊಳ್ಳುವ ಮೂಲಕ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಖ್ಯಾತಿ ತಂದಿದ್ದಾರೆ ಎಂದರು.
ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ಪುಟ್ಟಮಾದಯ್ಯ ಅವರು ಮಾತನಾಡಿದ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅಸಮಾನತೆಗಳನ್ನು ಹೋಗಲಾಡಿಸಲು ಡಿ.ದೇವರಾಜ ಅರಸು ರವರ ಪಾತ್ರ ಮಹತ್ವದ್ದಾಗಿತ್ತು, ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರಿಗೆ ಶೇ.50 ರಷ್ಟು ಅವಕಾಶವನ್ನು ಕಲ್ಪಿಸಿದರು, ಉತ್ತಮ ಆಡಳಿತದ ನೆಲಗಟ್ಟಿನ ಮೇಲೆ ಒಂದೊಂದು ಸಮಾಜದ ಅಭಿವೃದ್ಧಿಗಾಗಿ ಒಂದೊಂದು ಇಲಾಖೆಗಳನ್ನು ನೀಡಿದ ಮಹಾನ್ ಚೇತನ ಅರಸುರವರು ಎಂದರೆ ತಪ್ಪಾಗಲಾರದು, ಹಿಂದುಳಿದ ಸಮಾಜದ ಬೆನ್ನೆಲುಬಾಗಿದ್ದ ಅರಸುರವರು ಕೇವಲ ವ್ಯಕ್ತಿಯಾಗಿರಲಿಲ್ಲ ಬೃಹತ್ ಶಕ್ತಿಯಾಗಿದ್ದರು ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎನ್.ಆರ್ ಕಾಂತರಾಜು ಮಾತನಾಡಿ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳಲ್ಲಿ ಸುಭದ್ರ ಆಡಳಿತ ನೀಡಿ ಸಾಮಾಜಿಕ ನ್ಯಾಯದ ಮೂಲಕ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಡಿ.ದೇವರಾಜು ಅರಸು ಅವರ ಪಾತ್ರ ಮಹತ್ವದ್ದಾಗಿತ್ತು ಎಂದರು.
ಈ ಸಂದರ್ಭ ಪ್ರಭಾರ ತಹಸೀಲ್ದಾರ್ ಯದುಗಿರೀಶ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಆರತಿ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಉಪ ತಹಸೀಲ್ದಾರ್ ಟ್ರಿಜಾ, ಮುಖಂಡರಾದ ನಾಗರಾಜು, ಕೃಷ್ಣೇಅರಸ್, ವಿನಯ್ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.