
ಬೆಟ್ಟದಪುರ : 2021-22 ನೇ ಸಾಲಿನ ಆಹಾರ ಭದ್ರತಾ ಯೋಜನೆಯ ರಾಗಿ ಬೆಳೆ ಪ್ರತ್ಯಕ್ಷಿಕೆ ಕಾರ್ಯಕ್ರಮವನ್ನು ಪಿರಿಯಾಪಟ್ಟಣ ತಾಲೂಕಿನ ಸುರಗಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ ಮಹದೇವ್ ಅವರು ಕಳೆದ ಸಾಲಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತಾಲೂಕಿನಲ್ಲಿ 4 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು ಅದರಂತೆ ತಾಲೂಕಿನಲ್ಲಿ ಉತ್ತಮ ರಾಗಿಯನ್ನು ಬೆಳೆದು ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ 3290 ರೂ ನಂತೆ ರಾಗಿಯನ್ನು ಮಾರಾಟ ಮಾಡಿ ರೈತರ ಮುಂದಿನ ವ್ಯವಸಾಯ ಮತ್ತು ಇತರ ಖರ್ಚುವೆಚ್ಚಗಳನ್ನು ಭರಿಸಲು ಅನುಕೂಲವಾಗಿತ್ತು ಈ ಬಾರಿಯೂ ಉತ್ತಮವಾಗಿ ರಾಗಿಯನ್ನು ಬೆಳೆದು ಉತ್ತಮ ಇಳುವರಿ ಎಂದು ಪಡೆದು ಆದಾಯ ಹೆಚ್ಚಿಸಿಕೊಳ್ಳಲು ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಅದರಂತೆ ಬೆಟ್ಟದಪುರ ಹೋಬಳಿ ಯಿಂದ ಸುರಗಹಳ್ಳಿ ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ರೈತರು ರಾಗಿಯನ್ನು ಬೆಳೆದು ಇಳುವರಿಯನ್ನು ಪಡೆಯುವ ನಿಟ್ಟಿನಲ್ಲಿ ಉತ್ತಮ ತಳಿಯನ್ನು ನೀಡಲಾಗುತ್ತಿದೆ ತಂಬಾಕು ಶುಂಠಿಯ ಜೊತೆಗೆ ರಾಗಿಯನ್ನು ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅತ್ತಹರ್ ಮತಿನ್ ಮಾತನಾಡಿ ಸರ್ಕಾರ ರಾಗಿ ಬೆಳೆಯುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಬೆಟ್ಟದಪುರ ಕೃಷಿ ಇಲಾಖೆಯ ಅಧಿಕಾರಿ ವಿಕಾಸ್ ಹಿತೈಷ್ ಮಹೇಶ್ ಸೆಸ್ಕ್ ಎ ಇ ಇ ಕುಮಾರ್ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮುಖಂಡ ವಿದ್ಯಾಶಂಕರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಹಾದೇವ ಉಪಾಧ್ಯಕ್ಷ ಸಮೀರ್ ಅಹಮದ್ ಕಂದಾಯ ನಿರೀಕ್ಷಕ ಆನಂದ್ ಸುಸ್ಮಿತಾ ಸುರಗಹಳ್ಳಿ ಗ್ರಾಮಸ್ಥರು ಗ್ರಾಮದ ಕಾರ್ಯಕ್ರಮದಲ್ಲಿ ಹಾಜರಿದ್ದರು