
ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹೊಸೂರು ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳ ರಸ್ತೆ ಅಭಿವೃದ್ದಿ ಮತ್ತು ಚರಂಡಿ ಕಾಮಗಾರಿಗೆ ೫೦ ಲಕ್ಷ ರೂ, ಕೋಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕ ಹೊಸೂರು ಗ್ರಾಮದಲ್ಲಿ ೬೫.೧೨ ಲಕ್ಷ ರೂ, ಜವರಿಕೊಪ್ಪಲು ಗ್ರಾಮದಲ್ಲಿ ೨೦.೭೭ ಲಕ್ಷ ರೂ ಹಾಗು ಕೀರನ ಹಳ್ಳಿ ಗ್ರಾಮದಲ್ಲಿ ೯.೬೦ ರೂ ವೆಚ್ಚದ ಮಾದರಿ ಗ್ರಾಮ ಪರಿಕಲ್ಪನೆಯಡಿ NAREGA ಕ್ರಿಯಾ ಯೋಜನೆ ಕಾಮಗಾರಿ ಅನುಷ್ಟಾನ & ರೈತ ಬಂಧು ಅಭಿಯಾನ ಕಾರ್ಯಾಕ್ರಮಕ್ಕೆ ಚಾಲನೆ ನೀಡಿದರು
ನಂತರ ಶಾಸಕರು ಮಾತನಾಡಿ ಸರ್ವೋದಯ ಗ್ರಾಮ ಪರಿಕಲ್ಪನೆಯಡಿ ತಾಲ್ಲೂಕಿನ ಎಲ್ಲಾ ಗ್ರಾ.ಪಂ ಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮ ಈಗಾಗಲೇ ಚಾಲನೆಯಲ್ಲಿದೆ, ಗ್ರಾ.ಪಂ ಸದಸ್ಯರು ಅಭಿವೃದ್ಧಿಗೆ ಒತ್ತು ನೀಡಿ ಗ್ರಾ.ಪಂ ಮೂಲಕ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಶಾಸಕನಾದಾಗಿನಿಂದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಶ್ರಮಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಅಣ್ಣಯ್ಯಶೆಟ್ಟಿ, ಕೊಪ್ಪ ಗ್ರಾ.ಪಂ ಉಪಾಧ್ಯಕ್ಷೆ ಸಿಂಧು, ಸದಸ್ಯರಾದ ರಾಮಚಂದ್ರು, ನಾರಾಯಣ, ರಾಜಪ್ಪ, ಶೀಲಾ, ಸುಮಾ, ಸುರೇಶ್, ಸೈಯದ್ ರಿಯಾಜ್, ಜಾಫರ್ ಸಾದಿಕ್, ಮಲ್ಲಮ್ಮ, ದ್ರಾಕ್ಷಾಯಿಣಿ, ಪಿಡಿಒ ಸತೀಶ್ ಮತ್ತು ಸಿಬ್ಬಂದಿ, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್ ಜಿ.ಪಂ ಎಇಇ ಮಂಜುನಾಥ್, ಆರ್ ಡಬ್ಲ್ಯುಎಸ್ ಎಇಇ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಉಪ ತಹಸೀಲ್ದಾರ್ ಎನ್.ಕೆ ಪ್ರದೀಪ್, ಗ್ರಾಮ ಲೆಕ್ಕಿಗ ನವೀನ್, ಆವರ್ತಿ ಗ್ರಾ.ಪಂ ಸದಸ್ಯರಾದ ಮಂಜುನಾಥ್, ಮೋಹನ್, ತಾ.ಪಂ ಮಾಜಿ ಸದಸ್ಯ ಸೋಮಶೇಖರ್, ಉದ್ಯಮಿ ಚಂದ್ರಶೇಖರ್, ಮುಖಂಡ ರಫೀಕ್, ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.