ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ 23/08/2021

ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಅವರು ಮಾತನಾಡಿದರು. ಬ್ರಹ್ಮಶ್ರೀ ನಾರಾಯಣರವರು ಸರ್ವ ಧರ್ಮದ ಏಳಿಗೆಗೆ ಶ್ರಮಿಸಿದ ಗುರುಗಳಾಗಿದ್ದರು, ಒಂದು ವರ್ಗಕ್ಕೆ ಸೀಮಿತವಾಗದೇ ಸಮಾಜದಲ್ಲಿನ ಎಲ್ಲಾ ವರ್ಗದ ಸಂಘಟನೆಗೆ ಒತ್ತು ನೀಡಿದ್ದರು, ಸಾಹಿತ್ಯ ರಚನೆ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾ ನಾಯಕರು ಎಂದರು.

ಪಿರಿಯಾಪಟ್ಟಣ: ಬಾಲ್ಯದಿಂದಲೇ ಆಧ್ಯಾತ್ಮ, ಯೋಗ ಹಾಗೂ ಸನಾತನ ಧರ್ಮದ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದ ಪರಿವರ್ತನೆಗೆ ಶ್ರಮಿಸಿದ ಮಹಾ ಗುರು ಶ್ರೀ ಬ್ರಹ್ಮಶ್ರೀ ನಾರಾಯಣ ಅವರು ಎಂದು ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ತಿಳಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಕೇರಳದಲ್ಲಿ ಜನಿಸಿದರು ದೇಶದ ಎಲ್ಲೆಡೆ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ಹಾಗೂ ಬಾಲ್ಯ ವಿವಾಹ ವಿರುದ್ಧ ಹೋರಾಡಿದರು ಶ್ರೀ ನಾರಾಯಣ ಧರ್ಮ ಪರಿಪಾಲನಾ ಎಂಬ ಸಂಸ್ಥೆ ಸ್ಥಾಪಿಸಿ ಸಮಾಜದಲ್ಲಿ ಶೋಷಣೆಗೊಳಗಾದವರಿಗೆ ಸಾಮಾಜಿಕ ನ್ಯಾಯ ನೀಡಿದರು, ಮಿಶ್ರ ಭೋಜನ ಪರಿಕಲ್ಪನೆ ಹಾಗೂ ಸರ್ವಧರ್ಮ ಸಮ್ಮೇಳನ ಆಯೋಜಿಸುವ ಮೂಲಕ ರಾಷ್ಟ್ರಕ್ಕೆ ಮಾದರಿ ವ್ಯಕ್ತಿಯಾದರು, ನಾವುಗಳು ಸಮಾಜ ಬದಲಾವಣೆಗೆ ಶ್ರಮಿಸಿದವರ ಸಂದೇಶ ಹಾಗೂ ಆದರ್ಶ ಜೀವನವನ್ನು ಮೈಗೂಡಿಸಿಕೊಳ್ಳುವುದು ಅವರಿಗೆ ನಾವು ನೀಡುವ ದೊಡ್ಡ ಗೌರವವಾಗಿದೆ ಎಂದರು.

ತಹಸೀಲ್ದಾರ್ ಯದು ಗಿರೀಶ್ ಮಾತನಾಡಿ ಸಮಾಜದಲ್ಲಿ ಹಿಂದುಳಿದ ವರ್ಗಗಳು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದುವರಿದಾಗ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂದರು

ಈ ಸಂದರ್ಭ ಆರ್ಯ ಈಡಿಗರ ಸಮಾಜದ ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಪುರಸಭಾ ಸದಸ್ಯ ಮಹೇಶ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ರಾಮು, ಬಿಇಒ ವೈ.ಕೆ ತಿಮ್ಮೆಗೌಡ, ಟಿಎಚ್ಓ ಡಾ.ಶರತ್ ಬಾಬು, ಜಿ.ಪಂ ಎಇಇ ಮಂಜುನಾಥ್, ಎಡಿಎಲ್ಆರ್  ಚಿಕ್ಕಣ್ಣ, ಆರ್ ಡಬ್ಲ್ಯುಎಸ್ ಎಇಇ ಶಿವಕುಮಾರ್, ಸಿಡಿಪಿಒ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಪ್ರಸನ್ನ, ಸರ್ವೆ ಅಧಿಕಾರಿ ಎಂ.ಕೆ ಪ್ರಕಾಶ್, ಶಿರಸ್ತೇದಾರ್ ಗಳಾದ ನಂದಕುಮಾರ್, ಟ್ರಿಜಾ,  ಉಪ ತಹಸೀಲ್ದಾರ್ ಗಳಾದ ಶುಭ, ಶಶಿಧರ,  ಮುಖಂಡರಾದ ಸೈಯದ್ ಇಲಿಯಾಸ್, ರವಿ, ಉಮೇಶ್, ಕಾಂತರಾಜ್, ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಈಡಿಗ ಸಮಾಜದ ಮುಖಂಡರು ಹಾಜರಿದ್ದರು.  

Leave a Comment

Your email address will not be published. Required fields are marked *

error: Content is protected !!
Scroll to Top