
ಪಿರಿಯಾಪಟ್ಟಣ: ತಾಲ್ಲೂಕಿನ ಕೊಪ್ಪ ಹಾಗೂ ಬೈಲಕುಪ್ಪೆ ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ 2.79 ಕೋಟಿ ವೆಚ್ಚದ ಕುಡಿಯುವ ನೀರಿನ ಮೇಲ್ತೊಟ್ಟಿ ನಿರ್ಮಾಣ ಕಾಮಗಾರಿಗೆ ಚಾಲನೆ ಮತ್ತು ತಾಲ್ಲೂಕಿನ ಕೊಪ್ಪ ಹಾಗೂ ಬೈಲಕುಪ್ಪೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಮಿತ್ವ ಯೋಜನೆಯಡಿ ಗ್ರಾಮಠಾಣಾ ಗುರುತಿಸುವ ಕಾರ್ಯಕ್ರಮಕ್ಕೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು
ಈ ವೇಳೆ ಶಾಸಕರು ಮಾತನಾಡಿ ಕುಡಿಯುವ ನೀರು, ಚರಂಡಿ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಸಾರ್ವಜನಿಕರು ತಮ್ಮ ಗ್ರಾ.ಪಂ ಕಚೇರಿಗೆ ಭೇಟಿ ಮಾಡಿ ಅಧಿಕಾರಿ ಮತ್ತು ಆಡಳಿತ ವರ್ಗಕ್ಕೆ ಮನವಿ ಮಾಡುವ ಮೂಲಕ ಬಗೆಹರಿಸಿಕೊಳ್ಳಬೇಕು, ಗ್ರಾ.ಪಂ ವ್ಯಾಪ್ತಿಯಲ್ಲಿನ ವಿವಿಧ ಅಭಿವದ್ಧಿ ಕಾರ್ಯಗಳಿಗೆ ಸರ್ಕಾರದ ವತಿಯಿಂದ ಅನುದಾನ ಮಂಜೂರು ಮಾಡಿಸಲಾಗುವುದು, ತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಸ್ಥಳೀಯ ಗ್ರಾ.ಪಂ ಅಧಿಕಾರಿ ಮತ್ತು ಆಡಳಿತ ವರ್ಗ ಮುಂದಾಗಬೇಕು, ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ, ಪಕ್ಷಾತೀತವಾಗಿ ಎಲ್ಲಾ ಗ್ರಾಮಗಳಿಗೆ ಅನುದಾನ ಮಂಜೂರು ಮಾಡಿದ್ದು ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳು ಚಾಲನೆಯಲ್ಲಿವೆ, ಸ್ಥಳೀಯ ಗ್ರಾ.ಪಂ ಸದಸ್ಯರು ತಮ್ಮ ಹಳ್ಳಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು.
ಹಲವು ವರ್ಷಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ಆಸ್ತಿಯ ಹದ್ದುಬಸ್ತು ಗುರುತಿಸುವಿಕೆ ಸಂಬಂಧ ಎದುರಾಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆ ಮುಖಾಂತರ ಆಧುನಿಕ ತಂತ್ರಜ್ಞಾನದ ಡ್ರೋಣ್ ಕ್ಯಾಮೆರಾ ಬಳಸುವ ಮೂಲಕ ತಮ್ಮ ಆಸ್ತಿಯ ಹದ್ದುಬಸ್ತು ಗುರುತಿಸಲಾಗುವುದು ಈ ಯೋಜನೆ ಸದುಪಯೋಗವಾಗಬೇಕಾಗಿದೆ ಎಂದರು.
ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿನ ಸಾರ್ವಜನಿಕರ ಆಸ್ತಿಯ ಖಚಿತ ಗುರುತಿಗಾಗಿ ಡ್ರೋಣ್ ಸರ್ವೆ ಸಹಾಯವಾಗಲಿದ್ದು ಬಹಳ ವರ್ಷಗಳ ಆಸ್ತಿ ದಾಖಲಾತಿ ಸಮಸ್ಯೆಗೆ ಪರಿಹಾರ ದೊರಕಲಿದೆ, ಈ ಯೋಜನೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಿ ಶೆಟ್ಟಿ ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ, ಉಪಾಧ್ಯಕ್ಷೆ ಸಿಂಧು ಮತ್ತು ಸದಸ್ಯರು, ಪಿಡಿಒ ಸತೀಶ್ ಮತ್ತು ಸಿಬ್ಬಂದಿ, ಬೈಲಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷೆ ಆಯಿಷಾ ಮತ್ತು ಸದಸ್ಯರು, ಪಿಡಿಒ ಬೋರೇಗೌಡ ಮತ್ತು ಸಿಬ್ಬಂದಿ, ತಾ.ಪಂ ಮಾಜಿ ಸದಸ್ಯರಾದ ಸೋಮಶೇಖರ್, ಮಾನು, ಪಿಡಬ್ಲ್ಯುಡಿ ಎಇಇ ಜಯಂತ್, ಜಿ.ಪಂ ಎಇಇ ಮಂಜುನಾಥ್, ಆರ್ ಡಬ್ಲ್ಯುಎಸ್ ಎಇಇ ಪ್ರಭು, ಸರ್ವೆ ಅಧಿಕಾರಿ ಎಂ.ಕೆ ಪ್ರಕಾಶ್, ಮಂಜುನಾಥ್, ಇಸಿಒ ಸತೀಶ್, ಉಪ ತಹಸೀಲ್ದಾರ್ ಪ್ರದೀಪ್, ಗ್ರಾಮಲೆಕ್ಕಿಗ ನವೀನ್, ಮುಖಂಡರಾದ ಸೋಮಶೇಖರ್, ಬಸವೇಗೌಡ, ಚನ್ನಪ್ಪ, ನವೀನ್, ವಸಂತ್, ಶಿಕ್ಷಕ ಯುವರಾಜ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.