
ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ 68 ಲಕ್ಷ, ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ 25 ಲಕ್ಷ ಮತ್ತು ಎನ್.ಶೆಟ್ಟಹಳ್ಳಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಎಂಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಜಿ.ಡಿ ಹರೀಶ್ ಗೌಡ , ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಚಾಲನೆ ನೀಡಿದರು.
ಈ ವೇಳೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ ಹರೀಶ್ ಗೌಡ ಮಾತನಾಡಿ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆಸಲು ಆಸ್ಪದ ನೀಡದೆ ಲಾಭದಾಯಕ ಗುರಿಯ ಭದ್ರ ಬುನಾದಿ ಹಾಕಿಕೊಂಡು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗಬಹುದು, ಅವ್ಯವಹಾರ ನಡೆದ ಸಂದರ್ಭ ಸಂಘಗಳನ್ನು ಮುಚ್ಚಿದರೆ ರೈತರಿಗೆ ಅನಾನುಕೂಲವಾಗುತ್ತದೆ, ಪಿರಿಯಾಪಟ್ಟಣ ತಾಲೂಕು ಎಂಡಿಸಿಸಿ ಬ್ಯಾಂಕ್ ನ ಆಧಾರಸ್ತಂಭವಾಗಿ ರೂಪುಗೊಂಡಿದೆ ಇದಕ್ಕೆ ಕಾರಣ ರೈತರು ಸಾಲ ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುವುದು, ತಾಲ್ಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಲ್ಟಿ ಸೆಂಟರ್ ಗಳನ್ನು ನಿರ್ಮಿಸಿ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಗುವಂತೆ ಮಾಡಲಾಗುತ್ತಿದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಹಲವು ಸಹಕಾರ ಸಂಘಗಳು ಪುನರ್ಜನ್ಮ ತಾಳಲು ಆಡಳಿತ ಮಂಡಳಿ ಪರಿಶ್ರಮ ಕಾರಣ, ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಅಭಿವೃದ್ಧಿಗೆ ಶ್ರಮಿಸಬೇಕು, ಷೇರುದಾರರು ಸಂಘದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿಸುವಂತೆ ಕೋರಿದರು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ರೈತರ ಶ್ರೇಯೋಭಿವೃದ್ಧಿಗಾಗಿ ಸಹಕಾರ ಸಂಘಗಳಿಂದ ಹಲವು ಸವಲತ್ತುಗಳು ದೊರೆತಿದ್ದು ಅವುಗಳ ಸದ್ಬಳಕೆ ಆಗಬೇಕಿದೆ, ರೈತರು ಸಬ್ಸಿಡಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದರು.
ಈ ಸಂದರ್ಭ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿ.ಎನ್ ರವಿ, ಮಂಜೇಗೌಡ, ಸಿಇಒ ಜನಾರ್ದನ್, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಕೆ.ಕೆ ಹರೀಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪರಮೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪಂಚವಳ್ಳಿ ಪಿಎಸಿಸಿಎಸ್ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಮಂಗಳಮ್ಮ ಮತ್ತು ನಿರ್ದೇಶಕರು, ಸಿಇಒ ಗಿರೀಶ್ ಮತ್ತು ಸಿಬ್ಬಂದಿ, ಎನ್.ಶೆಟ್ಟಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಸಂಜುಕುಮಾರ, ಉಪಾಧ್ಯಕ್ಷ ಪಾಪಣ್ಣನಾಯಕ ಮತ್ತು ನಿರ್ದೇಶಕರು, ಸಿಇಒ ಚಿಕ್ಕೇಗೌಡ ಮತ್ತು ಸಿಬ್ಬಂದಿ, ಹಿಟ್ನೆಹೆಬ್ಬಾಗಿಲು ಪಿಎಸಿಸಿಎಸ್ ಅಧ್ಯಕ್ಷ ಶಂಕರ್, ಉಪಾಧ್ಯಕ್ಷೆ ಜ್ಯೋತಿ ಪ್ರಕಾಶ್, ನಿರ್ದೇಶಕರಾದ ಮುತ್ತೇಗೌಡ, ಕುಮಾರ, ಅನಿಲ್ ಕುಮಾರ್, ವಿನೋದ್ ಕುಮಾರ್, ರವಿ, ಮಹದೇವ್, ರಾಮನಾಯಕ, ಗಾಯಿತ್ರಮ್ಮ, ಮುಖಂಡರಾದ ಈರಯ್ಯ, ರಘುನಾಥ್, ಪರಮೇಶ್, ಶಿವಣ್ಣ, ತಿಮ್ಮನಾಯಕ, ಅಪೂರ್ವ ಮೋಹನ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.