ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮತ್ತು ರೋಟರಿ ಕ್ಲಬ್‌ವತಿಯಿಂದ 20 ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮ 25/09/2021

ಬೆಟ್ಟದಪುರ: ಸ್ಮರ್ಧಾತ್ಮಕ ಯುಗದಲ್ಲಿ ವಿದ್ಯೆಯೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆಯುವುದು ಪ್ರಮುಖವಾಗಿದೆ ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು. ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮತ್ತು ಮೈಸೂರಿನ ವಿಜಯನಗರದ ರೋಟರಿ ಕ್ಲಬ್‌ವತಿಯಿಂದ ಇಪ್ಪತ್ತು ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾಭ್ಯಾಸ ಮುಗಿಸಿದ ನಂತರ ಆ ವ್ಯಕ್ತಿಯು ಯಾವುದೇ ಕೆಲಸಕ್ಕೆ ಹೋದರೆ ಅಲ್ಲಿ ಕಂಪ್ಯೂಟರ್ ಜ್ಞಾನವನ್ನು ಕೇಳುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಕೂಡ ಇದರ ಬಗ್ಗೆ ಅರಿವು ಮಾಡಿಕೊಂಡು ಕಂಪ್ಯೂಟರ್ ಜ್ಞಾನವನ್ನು ಪಡೆಯಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪಿ.ಎಸ್ ರಘು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಕಲಿಕೆ ಎನ್ನುವುದು ಸದಾ ನಿರಂತರವಾಗಿರುತ್ತದೆ. ಹಾಗಾಗಿ ಕಲಿಯುವ ವಿಚಾರದಲ್ಲಿ ಯಾವುದೇ ತಾತ್ಸಾರ ಮಾಡದೆ ಏಕಾಗ್ರತೆಯಿಂದ ಕಲಿಯಬೇಕಿದೆ. ಭಾರತದ ಯುವಜನತೆಯಲ್ಲಿ ಇರುವಂತ ಶಕ್ತಿ, ಆಸಕ್ತಿ ಪ್ರಪಂಚದಲ್ಲಿ ಬೇರೆ ಯಾವುದೇ ರಾಷ್ಟ್ರದಲ್ಲಿ ಇಲ್ಲಾ. ಹಾಗಾಗಿ ಇರುವಂತ ಸವಲತ್ತುಗಳನ್ನು ಬಳಸಿಕೊಂಡು ಜಾಗತೀಕರಣದಲ್ಲಿ ಯಶಸ್ಸು ಕಾಣಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ವಿಜನಗರದ ರೋಟರಿ ಕ್ಲಬ್‌ವತಿಯಿಂದ ಇಪ್ಪತ್ತು ಕಂಪ್ಯೂಟರ್‌ಗಳನ್ನು ಉಚಿತವಾಗಿ ಶಾಸಕ ಕೆ.ಮಹದೇವ್ ಅವರ ನೇತೃತ್ವದಲ್ಲಿ ಕಾಲೇಜಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬೆಟ್ಟದಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸೌಮ್ಯ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಎ ಮಂಜು, ಪದಾಧಿಕಾರಿಗಳಾದ ರಾಘವೇಂದ್ರ, ರಾಮೇಗೌಡ, ಚಂದ್ರು, ಸುರೇಶ್ ಸೇರಿದಂತೆ ಪ್ರಾಧ್ಯಪಕರು ಹಾಗೂ ಸ್ಥಳೀಯರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top