ಪಟ್ಟಣದ ಮಂಜುನಾಥ ಸಮುಧಾಯಭವನದಲ್ಲಿ ನಡೆದ ಗಾಂಧಿಸ್ಮೃತಿ ಮತ್ತು ನವಜೀವನೋತ್ಸವ ಕಾರ್ಯಕ್ರಮ 02/10/2021

ಪಿರಿಯಪಟ್ಟಣ ಸಾರ್ವಜನಿಕರು ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನನೆಯ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯ ವ್ಯಕ್ತ ಪಡಿಸಿದರು
ಪಟ್ಟಣದ ಮಂಜುನಾಥ ಸಮುದಾಯಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೇ , ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೇ ಹಮ್ಮಿಕೊಂಡಿದ್ದ ೧೫೨ ನೇ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶವನ್ನು ಮಾತನಾಡಿದ ಅವರು ದೇಶದ ಅಭಿವೃದ್ದಿಗಾಗಿ ಹಾಗು ಸ್ವಾತಂತ್ರಕ್ಕಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗು ಪ್ರಧಾನಿ ಮಂತ್ರಿಗಳಾಗಿದ್ದ ದಿವಂಗತ ಲಾಲ್ ಬಹಾದ್ದೂರ್ ಶಾಸ್ತ್ರೀ ರವರು ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ ಇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಅದರಂತೆ ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ವಿಶೇಷ ಸ್ಥಾನ ಮಾನ ಪಡೆದುಕೊಳ್ಳುತ್ತಿದೆ, ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮವಾದ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಯು ಮಧ್ಯ ವೆಸನಿಗಳನ್ನು ದುಶ್ಚಟಗಳಿಂದ ದೂರವಿರಿಸುವ ಕಾರ್ಯ ಮಾಡುತ್ತಿದೆ, ಆದರೆ ಇತ್ತೀಚಿಗೆ ಮಧ್ಯ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ ಇದು ಬೇಸರದ ಸಂಗತಿ. ಈ ದುಶ್ಚಟಗಳಿಗೆ ಒಳಗಾದ ವ್ಯಕ್ತಿಗಳು ಒಂದು ಕ್ಷಣ ತಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮದ ಬಗ್ಗೆ ಆಲೋಚಿಸಬೇಕು, ದುಷ್ಚ್ಚಾಟಗಳಿಂದಾಗಿ ಸಾಂಸಾರಿಕ ಅನ್ಯೋನ್ಯತಾಗೆ ಧಕ್ಕೆ ಆಗುತ್ತಿದೆ ಇದನ್ನು ಮನಗಂಡ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೇ ಸಂಸ್ಥೆಯು ಮಧ್ಯ ವ್ಯಸನಿಗಳನ್ನು ಮದ್ಯಪಾನದಿಂದ ಬಿಡುಗಡೆ ಗೊಳಿಸುವ ಮಹದ್ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ ಇದಕ್ಕೆ ನನ್ನ ಸಹಕಾರವಿದ್ದು ಈಗಾಗಲೇ ಹೊಸದಾಗಿ ಬಾರ್ ಲೈಸೆನ್ಸ್ ಗಳನ್ನೂ ನೀಡದಂತೆ ಸಂಸ್ಥೆ ಮನವಿ ಮಾಡಿದೆ ಇದರ ಪರವಾಗಿ ಸರ್ಕಾರದ ಗಮನ ಸೆಳೆಯುತ್ತೇನೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಕೂಡ ದುಷ್ಟಗಳಿಂದ ದೂರವಾಗಿ ಉತ್ತಮ ಸಾಮಾಜಿಕ ಜೀವನವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ.ದೇವರಾಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್ ಕೊಡಗು ಜಿಲ್ಲೆ ನಿರ್ದೇಶಕ ಡಾ.ವಿ.ಯೋಗೀಶ್, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್ ಕೃಷ್ಣಕುಮಾರ್, ಮಾಜಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಕೃಷಿ ಅಧಿಕಾರಿ ಉಮೇಶ್ ಬಿ.ಕೆ  ಹಾಗು ಮತ್ತಿತರರು ಹಾಜರಿದ್ದರು.

 

Leave a Comment

Your email address will not be published. Required fields are marked *

error: Content is protected !!
Scroll to Top