ಮಹಾತ್ಮ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗದೇ ಇರುವುದು ವಿಷಾದನೀಯ ಎಂದು ಶಾಸಕ ಕೆ.ಮಹದೇವ್ ಹೇಳಿದರು. 02/10/2021

ಪಿರಿಯಾಪಟ್ಟಣ: ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಸಕ ಕೆ.ಮಹದೇವ್ ಮಾತನಾಡಿದರು, ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲೇ ನಾವು ಗಾಂಧೀಜಿಯವರನ್ನು ಮರೆಯುತ್ತಿದ್ದೇವೆ ಎಂಬ ಅನುಮಾನ ಕಾಡುತ್ತಿದೆ, ಮಹಾತ್ಮಾ ಗಾಂಧೀಜಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ, ಅಹಿಂಸಾ ತತ್ವದ ಮೂಲಕ ವಿದೇಶಗಳಲ್ಲಿಯೂ ಅವರು ತಮ್ಮ ಪ್ರಭಾವವನ್ನು ಬೀರಿದ್ದರು, ಅತ್ಯಂತ ಸಂಪದ್ಭರಿತವಾಗಿದ್ದ ದೇಶವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ನಮ್ಮವರು ಕಲಿಯಲಿಲ್ಲ, ಆದರೆ ನಿರಂತರ ದಾಳಿಯ ಮೂಲಕ ಬ್ರಿಟಿಷರು ನಮ್ಮ ಸಂಪತ್ತನ್ನು ಯಾವ ರೀತಿಯಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂಬುದನ್ನು ಇತಿಹಾಸದ ಪುಟಗಳಲ್ಲಿ ಗಮನಿಸಬಹುದಾಗಿದೆ, ನೂರರ ಗಡಿ ದಾಟಿರುವ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ಶೋಚನೀಯವಾಗುತ್ತಿದೆ ಮುಂದಿನ ದಿನಗಳಲ್ಲಿ ಇನ್ನೂ ಏನೇನು ದುರಂತಗಳನ್ನು ಕಾಣಬೇಕಾದ ಅನಿವಾರ್ಯತೆ ಇದೆಯೋ ಎಂದು ಆತಂಕ ವ್ಯಕ್ತಪಡಿಸಿ ದೇಶದ ಸುಧಾರಣೆಗಾಗಿ ಮತ್ತೊಮ್ಮೆ ಗಾಂಧೀಜಿ ಹುಟ್ಟಿ ಬರಬೇಕು ಎಂದರು.

ತಹಸೀಲ್ದಾರ್ ಚಂದ್ರ ಮೌಳಿ ಮಾತನಾಡಿ ಭಾರತೀಯರಲ್ಲಿ ಹೋರಾಟದ ಜಾಗೃತಿಯನ್ನು ಮೂಡಿಸುವಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಅಪಾರವಾಗಿದೆ.ನಾಗರೀಕರಲ್ಲಿ ಒಗ್ಗಟ್ಟಿನ ಮನೋಭಾವ,ದೇಶಪ್ರೇಮವನ್ನು ತುಂಬಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತ್ತೆ ಪ್ರೇರೆಪಿಸಿದರು.ಇವರ ಹೋರಾಟದ ಹಾದಿಯು ಬಹಳ ಕಷ್ಟವಾಗಿದ್ದರು ಕೂಡ ಎದೆ ಗುಂದದೆ ಮುನ್ನುಗಿ ಭಾರತ ಸ್ವಾತಂತ್ರö್ಯ ಹೊಂದುವಲ್ಲಿ ಯಶಸ್ವಿಯಾದರು.ಆದರೆ ಸಮಾಜದಲ್ಲಿ ಭಯೋತ್ಪಾಧಕತೆಯು ನಿರಂತರವಾಗಿ ನಡೆಯುತ್ತಿರುವುದನ್ನು ಕಂಡರೆ ಗಾಂಧಿಜೀಯವರ ರಾಮ ರಾಜ್ಯದ ಕನಸ್ಸು ಎತ್ತ ಸಾಗುತ್ತಿದೆ ಎಂದು ಬೇಸರವಾಗುತ್ತಿದೆ.ಆದರಿಂದ್ದ ನಾಗರೀಕ ಸಮಾಜ ದೇಶ ಪ್ರೇಮದ ಜೊತೆಗೆ ದೇಶಕ್ಕಾಗಿ ಹೋರಾಡಿದ ನೇತಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಬಿಇಒ ವೈ.ಕೆ.ತಿಮ್ಮೆಗೌಡ ರವರು ಮಾತನಾಡಿ ಸ್ವ ಸಾಮರ್ಥ್ಯದ ಮೇಲೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದು ಗಾಂಧೀಜಿಯವರ ಪ್ರತಿಪಾದನೆಯಾಗಿತ್ತು, ಈ ಜಗತ್ತಿಗೆ ಅಹಿಂಸಾ ರಂಗವನ್ನು ಬೋಧಿಸಿದ ಮಹಾನ್ ಚೇತನ ಮಹಾತ್ಮ ಗಾಂಧಿಯಾಗಿದ್ದಾರೆ, ಕೇವಲ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಹೋರಾಟ ನಡೆಸಲಿಲ್ಲ ನಮಗೆ ಆರ್ಥಿಕ ಸ್ವಾತಂತ್ರ ಕಲ್ಪಿಸಬೇಕು ಎಂಬುದು ಅವರ ನೈಜ ಹೋರಾಟವಾಗಿತ್ತು, ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ರವರು ಮಾತನಾಡಿ ಬಾಲ್ಯ ವಿವಾಹ ಪದ್ದತಿಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ತಮ್ಮ ವೈಯಕ್ತಿಕ ಅನುಭವದಿಂದ ಮನಗಂಡಿದ್ದ ಗಾಂಧೀಜಿಯವರು ಬಾಲ್ಯ ವಿವಾಹ ನಿಷೇಧದ ಬಗ್ಗೆ ದೊಡ್ಡ ಹೋರಾಟವನ್ನೇ ನೀಡಿದ್ದಾರೆ, ನಾಗರಿಕ ಹಕ್ಕನ್ನು ಪ್ರತಿಪಾದಿಸುವ ಧೀಮಂತ ವ್ಯಕ್ತಿ ಮಹಾತ್ಮ ಗಾಂಧೀಜಿ ಯಾಗಿದ್ದು ವಿಶ್ವದಾದ್ಯಂತ ಹಲವು ರಾಷ್ಟ್ರಗಳ 48 ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಿಗೆ ಮಹಾತ್ಮ ಗಾಂಧೀಜಿಯವರ ಹೆಸರನ್ನು ಇಟ್ಟಿರುವುದು ಭಾರತೀಯರ ಹೆಮ್ಮೆ ಎಂದರು.

ಈ ಸಂದರ್ಭ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪ್ರಭಾರ ಬಿಸಿಎಂ ಅಧಿಕಾರಿ ಆರತಿ, ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್ ಕಾಂತರಾಜು, ಶಿರಸ್ತೆದಾರ್ ನಂದಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತ ಕಚೇರಿ ಸಿಬ್ಬಂದಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕನ್ನು ಸನ್ಮಾನಿಸಲಾಯಿತು.

Leave a Comment

Your email address will not be published. Required fields are marked *

error: Content is protected !!
Scroll to Top