ರೈತರು ದೃತಿಗೇಡದೆ ಧ್ಯರ್ಯದಿಂದಿರಬೇಕು – ಶಾಸಕ ಕೆ.ಮಹದೇವ್ 02/10/2021

ಪಿರಿಯಾಪಟ್ಟಣ : ಕರ್ನಾಟಕ ದಲಿತ ನವನಿರ್ಮಾಣ ವೇದಿಕೆ ವತಿಯಿಂದ ನಮ್ಮ ಭೂಮಿ ನಮ್ಮದು ಭೂಮಿ ಹಕ್ಕಿಗಾಗಿ ಭೂ ಹೋರಾಟ ಎಂಬ ಘೋಷವಾಕ್ಯದೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು ಪಟ್ಟಣದ ಬಿ.ಎಂ ರಸ್ತೆ ಸಮೀಪ ಜಮಾಯಿಸಿದ ನೂರಾರು ಕಾರ್ಯಕರ್ತರು ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಅಕ್ರೋಶವ್ಯಕ್ತಪಡಿಸಿದರು.

ಕರ್ನಾಟಕ ದಲಿತ ನವನಿರ್ಮಾಣ ವೇದಿಕೆ ವತಿಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಶಾಸಕ ಕೆ.ಮಹದೇವ್ ಆಗಮಿಸಿ ಪ್ರತಿಭಟನಾ ನಿರತರಲ್ಲಿ ಸಮಸ್ಯೆಗಳನ್ನು ಆಲಿಸಿದರು.ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲ್ಲೂ ರೈತರ ಮತ್ತು ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಇವರುಗಳಿಗೆ ಯಾವುದೇ ರೀತಿಯ ತೊಂದರೆಯಾಗಲು ಬಿಡುವುದಿಲ್ಲ.ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದರು ಆದರಿಂದ್ದ ನಾನು ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ ಸಂದರ್ಭ ರೈತರಿಗೆ ಯಾವುದೇ ತೊಂದರೆಯನ್ನು ಇಲಾಖೆಯು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.ಆದರಿಂದ್ದ ರೈತರು ದೃತಿಗೇಡದೆ ಧ್ಯರ್ಯದಿಂದಿರಬೇಕು ಎಂದು ತಿಳಿಸಿದರು.

ಕೆ.ಚಂದ್ರಮೌಳಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿ ತಮ್ಮ ಹಕ್ಕೋತ್ತಾಯಗಳನ್ನೂ ತಿಳಿಸಿದರು

ಮೈಮುಲ್ ಅಧ್ಯಕ್ಷರಾದ ಪಿ.ಎಂ ಪ್ರಸನ್ನ ರವರು ಮಾತನಾಡಿ ಮುಂದಿನ ದಿನಗಳಲ್ಲಿ ರೈತರಿಗೆ ಅನ್ಯಾಯವಾದರೆ ಹೋರಾಟ ಮಾಡುವುದಾಗಿ ಹಾಗು ನೈತಿಕ ಬೆಂಬಲ ನೀಡುವದಾಗಿ ತಿಳಿಸಿದರು ಅವರ ಉಪಸ್ಥಿತಿಯಲ್ಲಿ ಸಂಜೆ ವೇಳೆಗೆ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಾಯಿತು

ಈ ಸಂದರ್ಭದಲ್ಲಿ ಮುಖಂಡರಾದ ಪ್ರೋ.ಗೋವಿಂದಯ್ಯ,ಕೃಷ್ಣಯ್ಯ, ಟಿ.ಈರಯ್ಯ,ಸೀಗೂರು ವಿಜಯ್ ಕುಮಾರ್,ಎಚ್.ಡಿ.ರಮೇಶ್,ಪಿ.ಪಿ.ಮಹದೇವ್,ಜಯಪ್ಪ,ಮಾದೇಶ ಕುಮಾರ,ಧರ್ಮ ಕೊಪ್ಪ,ಪಿ.ಪಿ.ಪುಟ್ಟಯ್ಯ,ಶಿವಣ್ಣ,ರಂಗಸ್ವಮಿ,ನಾಗೇAದ್ರ ದೊರೆಕೆರೆ,ಸಿ.ಜಿ.ರವಿ,ಕೆ.ಬಿ.ಮೂರ್ತಿ,ಕರಡಿಪುರ ಕುಮಾರ್,ನೇರಳಕುಪ್ಪೆ ನವೀನ್,ಚಿಕ್ಕೆಗೌಡ,ಮಹಮ್ಮದ್ ಮುನಾವರ್,ಉತ್ತೆನಳ್ಳಿ ವೆಂಕಟೇಶ್,ಆರ್.ಡಿ.ಚAದ್ರು ಸೇರಿದಂತ್ತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top