3.18 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗು ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ರವರು ಹಾಗು ಸಂಸದ ಪ್ರತಾಪ್ ಸಿಂಹ ರವರು ಚಾಲನೆ ನೀಡಿದರು. 08/10/2021

ಈ ವೇಳೆ ಈಚೂರು ಗ್ರಾಮದಲ್ಲಿ ಸರ್ವೋದಯ ಗ್ರಾಮ ಪರಿಕಲ್ಪನೆಯಡಿ 62 ಲಕ್ಷ ವೆಚ್ಚದ ಕಾಮಗಾರಿ ಚಾಲನೆ, 11.50 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, 10 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ, ಬೆಟ್ಟದಪುರ ಗ್ರಾಮದಲ್ಲಿ 11 ಲಕ್ಷ ವೆಚ್ಚದ ಶಾಲಾ ಕೊಠಡಿ ಹಾಗೂ 35 ಲಕ್ಷ ವೆಚ್ಚದ ಪಶು ಆಸ್ಪತ್ರೆ ಉದ್ಘಾಟನೆ, ಭುವನಹಳ್ಳಿ ಗ್ರಾಮದಲ್ಲಿ 22 ಲಕ್ಷ ವೆಚ್ಚದ ಶಾಲಾ ಕೊಠಡಿ ಉದ್ಘಾಟನೆ, ನೇರಳಕುಪ್ಪೆ ಗ್ರಾಮದಲ್ಲಿ ಸರ್ವೋದಯ ಗ್ರಾಮ ಪರಿಕಲ್ಪನೆಯಡಿ 43 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ಹಾಗೂ 20 ಲಕ್ಷ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಆವರ್ತಿ ಗ್ರಾಮದಲ್ಲಿ 35 ಲಕ್ಷ ವೆಚ್ಚದ ಪಶು ಚಿಕಿತ್ಸಾ ಕೇಂದ್ರ ಉದ್ಘಾಟನೆಯನ್ನು ಶಾಸಕ ಕೆ.ಮಹದೇವ್ ರವರು ಹಾಗು ಸಂಸದ ಪ್ರತಾಪ್ ಸಿಂಹ ರವರು ಒಟ್ಟಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಮಹದೇವ್ ರವರು ಯಾವುದೇ ಜನಪ್ರತಿನಿಧಿಗಳಿಗೆ ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಗತ್ಯ ವಸ್ತುಗಳ ದರ ಏರಿಕೆ ಸಮಸ್ಯೆ ಮುಂದಿನ ದಿನಗಳಲ್ಲಿ ಸರಿಯಾಗುವ ವಿಶ್ವಾಸವಿದೆ, ಈ ಹಿಂದೆ ನರೇಗಾ ಯೋಜನೆ ಮೂಲಕ ಅಭಿವೃದ್ಧಿ ಅಸಾಧ್ಯ ಎನ್ನುತ್ತಿದ್ದ ಪಿಡಿಒ ಗಳು 14 ಮತ್ತು 15 ನೇ ಹಣಕಾಸು ಅನುದಾನ ಬಳಸಿ ತಮ್ಮ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ, ಗ್ರಾ.ಪಂ ಸದಸ್ಯರು ಸಹ ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕು, ಸಂಸದ ಪ್ರತಾಪ್ ಸಿಂಹ ಅವರ ಸಹಕಾರದಿಂದ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ನಂತರ ಪ್ರತಾಪ್ ಸಿಂಹ ರವರು ಮಾತನಾಡಿ ಕಳೆದ 20 ವರ್ಷದಿಂದ ಸಂಸದರಾಗಿ ಆಯ್ಕೆಯಾದವರು ಕೇವಲ ಸಮುದಾಯ ಭವನಗಳಿಗೆ ಅನುದಾನ ನೀಡುವುದಕ್ಕೆ ಮಾತ್ರ ಸೀಮಿತರಾಗಿದ್ದರು, ತಾಲೂಕಿನ 34 ಗ್ರಾ.ಪಂ ಗಳಲ್ಲಿ 29 ಗ್ರಾ.ಪಂ ಗಳು, ಗ್ರಾಮ ಪರಿಮಿತಿ ಹಾಗು ಜಮೀನಿಗೆ ತೆರಳುವ ರಸ್ತೆ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳು ಕೇಂದ್ರ ಸರ್ಕಾರದ ಅನುದಾನದಡಿ ನಡೆದಿವೆ, ಸರ್ಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸ್ಥಳೀಯ ಶಾಸಕ ಕೆ.ಮಹದೇವ್ ಅವರ ಕ್ರಿಯಾಶೀಲತೆ ಮತ್ತು ಪರಿಶ್ರಮ ಸಹ ಕಾರಣವಾಗಿದೆ, ಈ ಹಿಂದೆ ಅಧಿಕಾರ ನಡೆಸಿದವರು ದರ್ಪದ ಮನಸ್ಥಿತಿಯಲ್ಲಿದ್ದರಿಂದ ಅಭಿವೃದ್ಧಿ ಕುಂಠಿತವಾಗಿತ್ತು, ತಾಲ್ಲೂಕಿನ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಅಭಾವ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸಹಾಯಕ ನಿರ್ದೇಶಕ ರಘುನಾಥ್, BEO ವೈ.ಕೆ ತಿಮ್ಮೇಗೌಡ, THO ಡಾ.ಶರತ್ ಬಾಬು, ವಿವಿಧ ಇಲಾಖೆ ಮುಖ್ಯಸ್ಥರಾದ ಪ್ರಭು, ಜಯಂತ್, ಮಂಜುನಾಥ್, ಡಾ.ಸೋಮಯ್ಯ, ಪ್ರಸಾದ್, ಕುಮಾರ್, ಸಿದ್ದೇಗೌಡ, ಕುಮಾರ್, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಬಿಜೆಪಿ ಅಧ್ಯಕ್ಷ ಎಂ.ಎಂ ರಾಜೇಗೌಡ, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಶೆಟ್ಟಿ, ವಿವಿಧ ಪಂಚಾಯಿತಿಯ ಅಭಿವೃದ್ಧಿ ಅಧಿಹಕಾರಿಗಳು ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರು

Leave a Comment

Your email address will not be published. Required fields are marked *

error: Content is protected !!
Scroll to Top