ಕೋವಿಡ್ ನಿಂದ ಮೃತಪಟ್ಟ ಕುಟುಂಬದವರು ಮೂಲ ದಾಖಲೆಗಳನ್ನು ನೀಡಿ ಪರಿಹಾರಧನವನ್ನು ಪಡೆದುಕೊಳ್ಳಿ – ಶಾಸಕ ಕೆ ಮಹದೇವ್ 04/11/2021

ಪಿರಿಯಾಪಟ್ಟಣ : ಕೋವಿಡ್ ನಿಂದ ಮೃತಪಟ್ಟ ಕುಟುಂಬದವರು ಮೃತಪಟ್ಟ ವ್ಯಕ್ತಿಯ ಮೂಲ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಿ ಸರ್ಕಾರದಿಂದ ನೀಡುತ್ತಿರುವ ಹಣವನ್ನು ಪಡೆಯುವಂತೆ ಶಾಸಕ ಕೆ ಮಹದೇವ್ ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ತಿಳಿಸಿದರು

ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಅಧಿಕಾರಿಗಳು ಹಾಗೂ ಕೊರೊನಾದಿಂದ ಮೃತಪಟ್ಟ ಕುಟುಂಬದವರ ಉದ್ದೇಶಿಸಿ ಮಾತನಾಡಿದ ಅವರು ,ತಾಲೂಕಿನಲ್ಲಿ ಮಹಾಮಾರಿ ಯಿಂದ ನೂರಕ್ಕೂ ಅಧಿಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದು ಇದರಿಂದ ಅನೇಕ ಕುಟುಂಬದವರು ತಮ್ಮ ಮನೆ ಆಧಾರ ಸ್ತಂಭಗಳನ್ನು ಕಳೆದುಕೊಂಡು ಜೀವನ ನಿರ್ವಹಣೆಗೆ ಹಾಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪರದಾಡುತ್ತಿರುವ ಸಂದರ್ಭದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಸಮಸ್ಯೆಗಳನ್ನು ಅರಿತು ಸತ್ತಂತಹ ಮೃತರ ಕುಟುಂಬದವರಿಗೆ ತಲ 1,50.000 ರೂ ಹಣವನ್ನು ಪರಿಹಾರ ರೂಪದಲ್ಲಿ ನೀಡಲು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಅನೇಕ ಮಂದಿಯ ದಾಖಲೆಗಳಲ್ಲಿ ವ್ಯತ್ಯಾಸವಾಗಿದೆ ಇದರ ಕಾರಣವಾಗಿ ಅನೇಕ ಕಚೇರಿಗಳಿಗೆ ದಾಖಲೆಗೋಸ್ಕರ ಅಲೆದಾಡುತ್ತಿದ್ದು ಇದನ್ನು ಮನಗಂಡು ,ಅವರ ಸಮಸ್ಯೆಗಳನ್ನು ಮತ್ತು ದಾಖಲೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ಮತ್ತು ಮೃತರ ಸಂಬಂಧಿಕರ ಸಭೆ ನಡೆಸುತ್ತಿದ್ದು, ಅಧಿಕಾರಿಗಳು ಕೇಳುವ ದಾಖಲೆಗಳನ್ನು ನೀಡಿ ಪರಿಹಾರ ಹಣವನ್ನು ಪಡೆದುಕೊಳ್ಳಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ ಮಹದೇವ್ ತಾಲೂಕಿನ ಅನೇಕ ಅಧಿಕಾರಿವರ್ಗದವರು ಸಂಬಂಧಪಟ್ಟಂತಹ ಮೃತರ ಕುಟುಂಬದವರಿಗೆ ಸರಿಯಾದ ದಾಖಲೆ ನೀಡದೆ ಮತ್ತು ಮಾಹಿತಿಗಳನ್ನು ನೀಡಲು ಪ್ರತಿನಿತ್ಯ ಅಲೆದಾಡಿ ಸುತ್ತಿದ್ದು ನಿರ್ಲಕ್ಷ ತೋರದೆ ಶೀಘ್ರದಲ್ಲೇ ಸಂಬಂಧಪಟ್ಟವರಿಗೆ ದಾಖಲೆಗಳನ್ನು ಒದಗಿಸಿ ನೊಂದ ಕುಟುಂಬಗಳಿಗೆ ಸಹಕರಿಸಬೇಕೆಂದು ತಿಳಿಸಿದರು, ಹಾಗೂ ಯಾವುದೇ ಅಧಿಕಾರಿಗಳಿಗೆ ನೊಂದವರು ಲಂಚ ಅಥವಾ ಹಣವನ್ನು ನೀಡದೆ ಶೀಘ್ರದಲ್ಲಿ ಕೆಲಸ ಮಾಡಿಸಿಕೊಂಡು ತಮ್ಮ ದಾಖಲೆಗಳನ್ನು ಪಡೆದುಕೊಂಡು ಹಾಗೂ ವ್ಯಕ್ತಿಯ ಮೂಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲು ತಿಳಿಸಿದರು, ಹಾಗೂ ಮುಂದಿನ ಸಭೆಯ ವೇಳೆಗೆ ಎಲ್ಲಾ ಮೃತರ ಮೂಲ ದಾಖಲೆಗಳನ್ನ ಸರಿಪಡಿಸಿ ಜಿಲ್ಲಾಧಿಕಾರಿಗಳಿಗೆ ರವಾನಿಸಬೇಕು ಎಂದು ತಿಳಿಸಿದರು ಇಲ್ಲದಿದ್ದರೆ ಅಧಿಕಾರಿಗಳನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಚಂದ್ರಮೌಳಿ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಶರತ್ ಬಾಬು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ದೇವಿಕ ,ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸಣ್ಣಸ್ವಾಮಿ. ಪುರಸಭೆ ಮುಖ್ಯಾಧಿಕಾರಿ ಪ್ರಸನ್ನ. ಅಧಿಕಾರಿಗಳಾದ ಟ್ರೀಜ .ಪಾಂಡುರಂಗ, ಪ್ರದೀಪ್, ಶ್ರೀಧರ್, ಮತ್ತು ಮೃತರ ಸಂಬಂಧಿಕರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top