
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಗ್ರಾಮಗಳಲ್ಲಿ ಈಗಾಗಲೇ ಮಂಜೂರಾಗಿರುವ ಕಾಮಗಾರಿ ಆರಂಭಿಸಿ ಮುಂದುವರಿಸಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ಪಿರಿಯಾಪಟ್ಟಣದ ಸುಳುಗೋಡು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಶಾಸಕರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸರಕಾರಿ ಕಾರ್ಯಕ್ರಮಗಳು ನಡೆಸುವಂತಿಲ್ಲ ಹಾಗಾಗಿ ಗುದ್ದಲಿ ಪೂಜೆ ರದ್ದು ಮಾಡಲಾಗಿದೆ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದೇನೆ ಯಾವುದೇ ಭರವಸೆ ನೀಡುವಂತಿಲ್ಲ ಹಾಗಾಗಿ ಜನರು ಹಾಗೂ ಕಾರ್ಯಕರ್ತರು ಕಷ್ಟ-ಸುಖ ವಿಚಾರಿಸಿ ಕಾರ್ಯಕ್ರಮ ಪೂರ್ವನಿಗದಿ ಆದ್ದರಿಂದ ಗ್ರಾಮಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದೇನೆ. ನಿಗದಿತ ಕಾಮಗಾರಿ ಆರಂಭಿಸಿ ಸೂಕ್ತ ಸಮಯದಲ್ಲಿ ಅವುಗಳ ಗುಣಮಟ್ಟದಲ್ಲಿ ನಿರ್ವಹಿಸುವಂತೆ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಗ್ರಾಮದ ಜನರು ಅನೇಕ ಮನವಿಗಳನ್ನು ಶಾಸಕರಿಗೆ ಮಾಡಿದರು ಮುಖಂಡರಾದ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ , ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಉಪಾಧ್ಯಕ್ಷರು ಹಾಗೂ ಮುಖಂಡರುಗಳು ಹಾಜರಿದ್ದರು