
ಪಿರಿಯಾಪಟ್ಟಣ: ಶಾಸಕನಾದ ನಂತರ ತಾಲ್ಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಮತದಾರರಿಗೆ ಅರಿವು ಮೂಡಿಸುವಂತೆ ಶಾಸಕ ಕೆ.ಮಹದೇವ್ ಹೇಳಿದರು.ತಾಲ್ಲೂಕಿನ ರಾವಂದೂರು ಗ್ರಾಮದ ಜೆಡಿಎಸ್ ಪಕ್ಷದ ಮುಖಂಡರಾದ ಶಿವಾರಾಧ್ಯಾ ಅವರ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು, ಕಳೆದ 2 ವಿಧಾನಸಭಾ ಚುನಾವಣೆಗಳಲ್ಲಿ ಪರಾಭವಗೊಂಡರೂ ನನ್ನ ಪರ ನಿಂತ ನಿಷ್ಠಾವಂತ ಕಾರ್ಯಕರ್ತರು 3 ನೇ ಚುನಾವಣೆಯಲ್ಲಿ ಗೆಲುವಿಗೆ ಸಾಕಷ್ಟು ಶ್ರಮವಹಿಸಿ ಪ್ರಚಾರ ಕೈಗೊಂಡಿದ್ದರು, ನಂತರ ನಮ್ಮ ಕೆಲಸ ಮುಗಿಯಿತು ಎಂಬಂತೆ ನಮ್ಮ ಪಕ್ಷದ ಕಾರ್ಯಕರ್ತರು ಇರುವುದರಿಂದ ವಿರೋಧಿಗಳು ನಮ್ಮ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಅವರ ಆರೋಪಗಳಿಗೆ ಅಭಿವೃದ್ಧಿಯ ಮೂಲಕ ತಕ್ಕ ಉತ್ತರ ನೀಡುತ್ತಿದ್ದು ಕಾರ್ಯಕರ್ತರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಿ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿ ಕಾರ್ಯಕರ್ತರು ನನ್ನ ಮೇಲೆ ಇಟ್ಟ ನಂಬಿಕೆಗೆ ಚ್ಯುತಿ ಬರದ ಹಾಗೆ ಕರ್ತವ್ಯ ನಿರ್ವಹಿಸುತ್ತ ತಾಲ್ಲೂಕಿನಾದ್ಯಂತ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಹಣ ಮಂಜೂರು ಮಾಡಿಸಲಾಗುತ್ತಿದೆ ಎಂದರು.ಮುಖಂಡರಾದ ರಘುನಾಥ್, ಆರ್.ಎಲ್ ಮಣಿ, ದೊರೆಕೆರೆ ನಾಗೇಂದ್ರ ಅವರು ಪಕ್ಷ ಸಂಘಟನೆ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿದರು, ಶಿವಾರಾಧ್ಯಾ ಅವರ ಕುಟುಂಬ ವತಿಯಿಂದ ಶಾಸಕ ಕೆ.ಮಹದೇವ್ ಸೇರಿದಂತೆ ಪಕ್ಷದ ಮುಖಂಡರುಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಶ್ರೀಕಂಠಾರಾಧ್ಯ, ಕುಮಾರ್, ಪಿಎಸಿಸಿಎಸ್ ಮಾಜಿ ಅಧ್ಯಕ್ಷ ವಿಜಯ್, ಮುಖಂಡರುಗಳಾದ ಮಾಕೋಡು ಜವರಪ್ಪ, ರಾಮಚಂದ್ರ, ನಂದೀಶ್, ಮಹದೇವ್, ಬಸವಣ್ಣ, ಧಾರಕರಾಧ್ಯ, ಶಿವಣ್ಣ, ರವಿ, ಮಹೇಶ್, ಬಸವರಾಜ್, ಗಣೇಶ್ ಸೇರಿದಂತೆ ರಾವಂದೂರು ಹೋಬಳಿ ವ್ಯಾಪ್ತಿಯ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.