ಜೆ.ಡಿ.ಎಸ್ ಕಾರ್ಯಕರ್ತರ ಜನತಾ ಸಂಗಮ ಕಾರ್ಯಕ್ರಮ 20/11/2021

ಪಿರಿಯಾಪಟ್ಟಣದ ಕಣಗಾಲು, ಹಲಗನಹಳ್ಳಿ, ಚಪ್ಪರದಹಳ್ಳಿ ಹಾಗು ಚಿಕ್ಕ ನೇರಳೆ ಗ್ರಾಮದಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಜನತಾ ಸಂಗಮ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಮಾತನಾಡಿದರು.
30ವರ್ಷಗಳ ಕಾಲ ಐಶಾರಾಮಿ ಜೀವನ ನಡೆಸಿದ ಮಾಜಿ ಶಾಸಕ ಕೆ. ವೆಂಕಟೇಶ ತಾಲೂಕಿನ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷೆ. ತಾಳಿದ್ದು ಏಕೆ .ಎಂದು ಹಾಲಿ ಶಾಸಕ ಕೆ.ಮಹದೇವರಿಂದ ಪ್ರಶ್ನೆ.
ಪಿರಿಯಾಪಟ್ಟಣ : ತಾಲ್ಲೂಕನ್ನು ಅಭಿವೃದ್ದಿ ಮಾಡದೆ 30 ವರ್ಷದಿಂದ ನಿದ್ರೆ ಮಾಡುತ್ತಿದ್ದ ಮಾಜಿ ಶಾಸಕ ಕೆ ವೆಂಕಟೇಶ್ ಚುನಾವಣೆಯಲ್ಲಿ ಸೋತ ನಂತರ ಗಾಯವಾದ ಹಾವು ಬಿಲ ಸೇರಿದಂತೆ ಸೋತ ನಂತರ ನಾಲ್ಕು ವರ್ಷಗಳಿಂದ ಕಣ್ಮರೆಯಾಗಿ ಮನೆಯಲ್ಲೇ ಕುಳಿತು. ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿ ಮಾಡದ ಮಾಜಿ ಶಾಸಕ ಇದ್ದಕಿದ್ದಂತೆ ತಮ್ಮ ಕಾರ್ಯಕರ್ತರೊಂದಿಗೆ ಬುಸುಗುಡುಲು ಆರಂಭಿಸುತ್ತಿದ್ದು, ಈಗ ನಿದ್ರೆಯಿಂದ ಎದ್ದು ಹೊರಬಂದಿದ್ದಾರೆ ಅದಕ್ಕೆ ನಮ್ಮ ಜೆಡಿಎಸ್ ಕಾರ್ಯಕರ್ತರು ಭಯಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಕೆ. ಮಹದೇವ್ ಮಾಜಿ ಶಾಸಕ ಕೆ. ವೆಂಕಟೇಶ್ ವಿರುದ್ಧ ವಾಗ್ದಳಿ ನಡೆಸಿದರು. ತಾಲ್ಲೂಕಿನ ಕಣಗಾಲು ಗ್ರಾಮದಲ್ಲಿ ಜೆ.ಡಿಎಸ್. ಕಾರ್ಯಕರ್ತರ ಜನಾಸಂಗಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು. 30 ವರ್ಷದಿಂದಲೂ ಶಾಸಕನಾಗಿ ಮಂತ್ರಿ ಆಗಿದ್ದ. ಮಾಜಿ ಶಾಸಕ ಯಾವುದೇ ಗ್ರಾಮಗಳಿಗೂ ತಿರುಗಿ ನೋಡದೆ ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮಪಂಚಾಯಿತಿಯ ಹಳ್ಳಿಗಳಿಗೆ ತಮ್ಮ ಅನುಯಾಯಿಗಳೊಂದಿಗೆ ಬೇಟಿ ನೀಡುತ್ತಿದ್ದು. ನಮ್ಮ ನಿಷ್ಠಾವಂತ ಕಾರ್ಯಕರ್ತರನ್ನು ದಾರಿತಪ್ಪಿಸಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು. ನಾನು ತಂದ ಅನುದಾನದಿಂದಲೆ ಕೆಲಸ ಮಾಡುತ್ತಿದ್ದಾರೆಂದು ತಮ್ಮ ಅನುಯಾಯಿಗಳ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದು ತಾಲ್ಲೂಕಿನ ಜನತೆ ಕಿವಿ ಕೊಡಬಾರದು ಎಂದು ತಿಳಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ತಾಲ್ಲೂಕಿನಲ್ಲಿ ನಾನು ತಂದ ಅನುದಾನದ ಮಾಹಿತಿಯನ್ನು ನೀಡುತ್ತೇನೆ, ಮಾಜಿ ಶಾಸಕ 30 ವರ್ಷಗಳಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ ಕುರಿತಂತೆ ಮುಕ್ತ ಚರ್ಚೆಗೆ ಮಾಜಿ ಶಾಸಕರನ್ನು ಆಹ್ವಾನಿಸದ್ದರು, ಅದೇ ರೀತಿ ಮಾಜಿ ಶಾಸಕ ಕೆ. ವೆಂಕಟೇಶ್ ತಮ್ಮ ಅನುಯಾಯಿಗಳೊಂದಿಗೆ ಜೆ.ಡಿಎಸ್. ಕಾರ್ಯಕರ್ತರ ಮನೆಗೆ ತೆರಳಿ . ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಮನಒಲಿಸುತ್ತಿದ್ದು ಆದರೆ ನಮ್ಮ ಪಕ್ಷದ ನಿಷ್ಠಾವಂತೆ ಜೆ.ಡಿಎಸ್ ಕಾರ್ಯಕರ್ತರು ಇವರ ಆಸೆ ಆಮೀಷಗಳಿಗೆ ಬಲಿಯಾಗುವುದಿಲ್ಲ, ತಾಲ್ಲೂಕಿನಲ್ಲಿ ಯಾವುದೇ ಜಾತಿಬೇದ ಪಕ್ಷಪಾತ ಮಾಡದೇ ಎಲ್ಲಾಗ್ರಾಮಗಳಿಗೂ ಅಭಿವೃಧಿ ಕೇಲಸಗಳನ್ನು ಮಾಡುತ್ತಿದ್ದು, ಆದರೆ ಮಾಜಿ ಶಾಸಕ ತಮ್ಮ ಹಿಂಬಾಲಕರಿಗೆ ಮಣೆಹಾಕಿ ಮತ್ತು ತಮಗೆ ಮತ ನೀಡದ ಗ್ರಾಮಗಳನ್ನು ನಿರ್ಲಕ್ಷಿಸಿದ್ದರು. ತಾಲ್ಲೂಕು ಅಭಿವೃದ್ಧಿ ಕಾರ್ಯಗಳಿಂದ ಮೂಲೆ ಗುಂಪಾಗಲು ತಮ್ಮ 30 ವರ್ಷಗಳ ಕಾಲ, ಐಶಾರಾಮಿ ಜೀವನ ನಡೆಸಿದ್ದೆ ಕಾರಣ ನನ್ನ ಅವಧಿಯಲ್ಲಿ ಯಾವುದೇ ಒಬ್ಬರನ್ನು ಜೈಲಿಗೆ ಕಳಿಸಿಲ್ಲ, ಆದರೆ ಈ ಹಿಂದೆ ಅಧಿಕಾರ ಅನುಭವಿಸಿದ ಮಾಜಿ ಶಾಸಕ ಜೆ.ಡಿ.ಎಸ್ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿವು ಕೆಲಸದಲ್ಲಿ ನಿರತರಾಗಿ ತಾಲ್ಲೂಕಿನ ಶಾಂತಿ ಹಾಳು ಮಾಡಿದ್ದರು.
ಈ ಸಂದರ್ಭದಲ್ಲಿ ತಾ|| ಜೆ.ಡಿ.ಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಿದ್ಯಾಶಂಕರ್, ರಘುನಾಥ್, ಮೋಹನ್‍ರಾಜ್ ಮಾತನಾಡಿದರು, ಈ ಸಂದರ್ಭದಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ರವಿ, ಟಿ. ಈರಯ್ಯ, ಚಂದ್ರು, ಗ್ರಾಮದ ಮುಖಂಡರು ಹಾಗೂ ನೂರಾರು ಜೆ.ಡಿ.ಎಸ್ ಕಾರ್ಯಕರ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top