ಜೆಡಿಎಸ್ ಕಾರ್ಯಕರ್ತರ ಜನತಾ ಸಂಗಮ ಕಾರ್ಯಕ್ರಮ – 27/11/2021

ಪಿರಿಯಾಪಟ್ಟಣ: ನಾನು ಶಾಸಕನಾದ ನಂತರ ತಾಲ್ಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರು ಮತದಾರರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.ತಾಲ್ಲೂಕಿನ ಚಿಟ್ಟೇನಹಳ್ಳಿ ಗ್ರಾಮದಲ್ಲಿ ನಡೆದ ಗ್ರಾ.ಪಂ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಜನತಾ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ನಾನು ಶಾಸಕನಾಗಿ ಆಯ್ಕೆಯಾಗಿ ಮೂರೂವರೆ ವರ್ಷ ಕಳೆದರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟ ಸಂದರ್ಭ ಕಾಂಗ್ರೆಸ್ ಪಕ್ಷದವರು ಇದು ನಮ್ಮ ಶಾಸಕರ ಅವಧಿಯಲ್ಲಿನ ಅನುದಾನ ಎಂದು ಸುಳ್ಳು ಹೇಳುತ್ತಿರುವುದು ಹಾಸ್ಯಾಸ್ಪದ, ಹಿಂದಿನ ಶಾಸಕರ ಅನುದಾನದ ಕೆಲಸಕ್ಕೆ ನಾನು ಚಾಲನೆ ನೀಡಿದ್ದು ಸಾಬೀತು ಮಾಡಿದರೆ ನನ್ನ ಶಾಸಕ ಸ್ಥಾನ ಇನ್ನೂ ಒಂದೂವರೆ ವರ್ಷ ಅವಧಿ ಇದ್ದರು ರಾಜೀನಾಮೆ ನೀಡುವೆ ಇಲ್ಲವಾದಲ್ಲಿ ಅದು ಸುಳ್ಳು ಎಂದು ಸಾಬೀತಾದರೆ ಕೆ.ವೆಂಕಟೇಶ್ ರಾಜಕೀಯ ಸನ್ಯಾಸ ಸ್ವೀಕರಿಸುತ್ತಾರಾ ಎಂದು ತಿರುಗೇಟು ನೀಡಿದರು, ಕೆ.ವೆಂಕಟೇಶ್ ಅವರು ಶಾಸಕರಾಗಿದ್ದ ಸಂದರ್ಭ ನನ್ನ ಪಕ್ಷ ಸಂಘಟನೆ ಹಾಗೂ ಜನಪರ ಮನಸ್ಸು ಅರಿತು ಅವರ ರಾಜಕೀಯ ಹಾದಿ ಸುಗಮಕ್ಕಾಗಿ ಬೆಳೆಸಿದರೆ ಹೊರತು ನಾನೇನು ಅವರ ಆಸರೆ ಪಡೆದು ರಾಜಕೀಯವಾಗಿ ಬೆಳೆಯಲಿಲ್ಲ, ವಿಧಾನಸಭಾ ಚುನಾವಣೆಗಳಲ್ಲಿ ಅವರ ವಿರುದ್ಧ ಸ್ಪರ್ಧಿಸಿದ ಸಂದರ್ಭ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದವರು ಅವರ ಜೊತೆಯಲ್ಲಿ ಇದ್ದಾಗ ಏಕೆ ಆರೋಪ ಮಾಡಲಿಲ್ಲ ಎಂದು ಪ್ರಶ್ನಿಸಿದರು, ತಾಲ್ಲೂಕಿನಾದ್ಯಂತ ಜೆಡಿಎಸ್ ಪಕ್ಷ ಸಂಘಟನೆ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕರ್ತರು ಸಂಘಟಿತರಾಗುವಂತೆ ಕೋರಿದರು.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅನುದಾನ ಮಂಜೂರು ಮಾಡಿಸಲು ಆ ಪಕ್ಷದ ಮುಖ್ಯಮಂತ್ರಿ ಸಚಿವರೊಂದಿಗೆ ಶಾಸಕರು ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದನ್ನು ಬಿಟ್ಟು ಆಂಧ್ರಪ್ರದೇಶ ಅಥವಾ ಕೊಲ್ಕತ್ತಾ ರಾಜ್ಯದ ಮುಖ್ಯಮಂತ್ರಿ ಸಚಿವರುಗಳೊಂದಿಗೆ ಬಾಂಧವ್ಯ ಇಟ್ಟುಕೊಳ್ಳಲಾಗುತ್ತದೆಯೆ ಎಂದು ಪ್ರಶ್ನಿಸಿದರು.ಇದೇ ವೇಳೆ ಹುಣಸವಾಡಿ ಹಾಗೂ ನವಿಲೂರು ಗ್ರಾ.ಪಂ ವ್ಯಾಪ್ತಿ ಕಾರ್ಯಕರ್ತರ ಸಭೆ ನಡೆಯಿತು.ಈ ಸಂದರ್ಭ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮೈಮುಲ್ ನಿರ್ದೇಶಕ ಹೆಚ್.ಡಿ ರಾಜೇಂದ್ರ, ತಾ.ಪಂ ಮಾಜಿ ಸದಸ್ಯರಾದ ಟಿ.ಈರಯ್ಯ, ಎ.ಟಿ ರಂಗಸ್ವಾಮಿ, ರಘುನಾಥ್, ಚಿಟ್ಟೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹದೇವ್, ಪಿಎಸಿಸಿಎಸ್ ನಿರ್ದೇಶಕರಾದ ಸಚ್ಚಿದಾನಂದ್, ಮಲ್ಲಿಕಾರ್ಜುನ್, ಮುಖಂಡರಾದ ಚಂದ್ರಶೇಖರಯ್ಯ, ಕರಿಗೌಡ, ಚಿಕ್ಕವೀರಯ್ಯ, ಸೋಮಣ್ಣ, ರಾಜು, ಕೆಂಪಣ್ಣ, ಗಿರೀಶ್, ನಾಗರಾಜ್, ಯತಿರಾಜೇಗೌಡ ಹಾಗೂ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳು ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top