ಪಿರಿಯಾಪಟ್ಟಣದಲ್ಲಿ ನಡೆದ ಜೆಡಿಎಸ್ ಪಕ್ಷದ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯನ್ನು ಶಾಸಕ ಕೆ.ಮಹದೇವ್ ಮತ್ತು ಗಣ್ಯರು ಉದ್ಘಾಟಿಸಿದರು. 03/12/2021

ಪಿರಿಯಾಪಟ್ಟಣ: ಜನಪರ ಆಡಳಿತ ಪ್ರಾದೇಶಿಕ ಪಕ್ಷ ಜೆಡಿಎಸ್ ಸ್ವತಂತ್ರ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ನೆಡೆದ ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸಿ.ಎನ್ ಮಂಜೇಗೌಡ ಪರ ಮತಯಾಚಿಸಿ ಅವರು ಮಾತನಾಡಿದರು, ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿರುವ ನಮ್ಮ ಪಕ್ಷದ ಕಾರ್ಯಕರ್ತರು ಆತ್ಮಗೌರವದಿಂದ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಜೊತೆಗೆ ಇತರ ಸದಸ್ಯರ ಮನವೊಲಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ನೋಡಿಕೊಳ್ಳುವ ಜವಾಬ್ದಾರಿಯಿದೆ, ವಿಧಾನಪರಿಷತ್ ಸದಸ್ಯರಾಗಿ ಬಂದಾಗ ಎಲ್ಲರೂ ಜನರಿಗೆ ಸ್ಪಂದಿಸುವ ಮನೋಭಾವ ಹೊಂದಿರುವುದಿಲ್ಲ ಆದರೆ ನಮ್ಮ ಪಕ್ಷದಿಂದ ಆಯ್ಕೆಯಾದವರನ್ನು ನಾವು ಗಟ್ಟಿ ದನಿಯಲ್ಲಿ ಕೆಲಸ ಮಾಡುವಂತೆ ಕೇಳಬಹುದು ನಮ್ಮ ಪಕ್ಷ ಸಹ ಗ್ರಾಮೀಣ ಪ್ರದೇಶದಲ್ಲಿ ಬಹಳ ಸದೃಢವಾಗಿದ್ದು ಈ ಬಾರಿ ಗೆಲುವು ಖಚಿತ, ತಾಲ್ಲೂಕಿನ ಅಭಿವೃದ್ಧಿಗಾಗಿ 10 ಕೋಟಿ ರೂ ಅನುದಾನ ತಂದಿದ್ದು ಚುನಾವಣೆ ಮುಗಿದ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗುವುದು, ಈ ಹಿಂದೆ ಇದ್ದ ಶಾಸಕರು ಅನುದಾನ ತರದಿದ್ದರೂ ಒಂದೇ ಕಾಮಗಾರಿಯನ್ನು ಮೂರು ಬಾರಿ ಉದ್ಘಾಟಿಸಿ ಜನರ ಕಿವಿಗೆ ಹೂ ಮುಡಿಸಿ ಹೋಗಿದ್ದಾರೆ, ನರೇಗಾ ಯೋಜನೆಯಲ್ಲಿ ಗ್ರಾ.ಪಂ ಗಳಿಗೆ ಒಂದರಿಂದ ಎರಡು ಕೋಟಿ ರೂ ಅನುದಾನ ಮಂಜೂರು ಮಾಡಿಸಿ ಕೊಟ್ಟಿದ್ದೇನೆ ಮುಂದೆ ಇನ್ನೂ ಹೆಚ್ಚಿನ ಅನುದಾನ ಅಗತ್ಯವಿದ್ದರೆ ಬಿಡುಗಡೆ ಮಾಡಿಸಿಕೊಳ್ಳಲು ಸಿದ್ಧವಿರುವುದಾಗಿ ಭರವಸೆ ನೀಡಿದರು.ಅಭ್ಯರ್ಥಿ ಸಿ.ಎನ್ ಮಂಜೇಗೌಡ ಮಾತನಾಡಿ ಈ ಬಾರಿಯ ಚುನಾವಣೆ ಮಹತ್ವದ್ದಾಗಿದ್ದು ಪ್ರಜಾಪ್ರತಿನಿಧಿಗಳು ಮತಚಲಾಯಿಸಿ ನಮ್ಮನ್ನು ಆಯ್ಕೆ ಮಾಡಿ ನಮ್ಮಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಳ್ಳುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು, ನಾನು ಸೈನಿಕನಾಗಿ ದೇಶಸೇವೆಯನ್ನು ಪ್ರಮಾಣಿಕವಾಗಿ ಮಾಡಿದ್ದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರೆ ನನ್ನ ಕೆಲಸವನ್ನು ಇಲ್ಲಿ ಸಹ ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇನೆ, ವಿದ್ಯಾ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ಸೇವೆ ನೀಡುವ ಜೊತೆಗೆ ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಜನಸೇವೆ ಮಾಡುತ್ತಿದ್ದೇನೆ ಎಂದರು. ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ತಕ್ಷಣ ನಮ್ಮ ಕೈಗೆ ಸಿಗುವ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷದ ಅಭ್ಯರ್ಥಿ ಸಿ.ಎನ್ ಮಂಜೇಗೌಡ ಅವರನ್ನು  ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸಲಾಗುವುದು, ಶಾಸಕರ ಬಗ್ಗೆ ಕ್ಷೇತ್ರದಲ್ಲಿ ಅಪಪ್ರಚಾರ ನಡೆಯುತ್ತಿದೆ ಅದಕ್ಕೆ ತಕ್ಕ ಉತ್ತರವನ್ನು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ನೀಡಲಾಗುತ್ತಿದೆ ಎಂದರು. ಈ ಸಂದರ್ಭ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ ಮತ್ತು ಜೆಡಿಎಸ್ ಪಕ್ಷದ ಸದಸ್ಯರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಕೆ.ಎಸ್ ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ, ತಾ.ಪಂ ಮಾಜಿ ಸದಸ್ಯರಾದ ಟಿ.ಈರಯ್ಯ, ಎ.ಟಿ ರಂಗಸ್ವಾಮಿ, ಮಾನು ಇನಾಯತ್, ಮಲ್ಲಿಕಾರ್ಜುನ್, ಮೋಹನ್ ಕುಮಾರ್,  ರಘುನಾಥ್, ಅತ್ತರ್ ಮತೀನ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಪ್ರೀತಿ ಅರಸ್, ವಿದ್ಯಾಶಂಕರ್, ರಫೀಕ್, ಹೇಮಂತ್ ಕುಮಾರ್, ಗ್ರಾ.ಪಂ ಅಧ್ಯಕ್ಷರುಗಳಾದ ರೇಣುಕಾಸ್ವಾಮಿ, ಮಹದೇವ್, ಮಂಜುಳಾ,  ಚಂದ್ರೇಗೌಡ, ಗಿರಿಜಾ, ಚಂದ್ರಮ್ಮ, ವೆಂಕಟೇಶ್, ಮಂದಾರ ಮುಖಂಡರಾದ ದೇವರಾಜ್, ನಾಗೇಗೌಡ, ಧನರಾಜ್, ಬಿ.ವಿ ಗಿರೀಶ್, ಚಿನ್ನಸ್ವಾಮಿ, ರಾಜೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top