
ಕೊಣಸೂರು ಗ್ರಾಮದ ಅಂಗನವಾಡಿ ನೂತನ ಕಟ್ಟಡದ ಗುದ್ದಲಿ ಪೂಜೆ ಅಂದಾಜು ವೆಚ್ಚ 16.50 ಲಕ್ಷ , ಆಲನಹಳ್ಳಿ ಗ್ರಾಮದ ಸ.ಹಿ.ಪ್ರ ಶಾಲೆ ನೂತನ ಕಟ್ಟಡದ ಗುದ್ದಲಿ ಪೂಜೆ ಅಂದಾಜು ವೆಚ್ಚ 10.60 ಲಕ್ಷ, ಚೌತಿ ಗ್ರಾಮದ ಸ.ಹಿ.ಪ್ರ ಶಾಲೆ ನೂತನ ಕಟ್ಟಡದ ಗುದ್ದಲಿ ಪೂಜೆ ಅಂದಾಜು ವೆಚ್ಚ 10.60 ಲಕ್ಷ ,ಸತ್ಯೆಗಾಲ ಗ್ರಾಮದ ಅಂಗನವಾಡಿ ನೂತನ ಕಟ್ಟಡದ ಗುದ್ದಲಿ ಪೂಜೆ ಅಂದಾಜು ವೆಚ್ಚ 16.50 ಲಕ್ಷ, ಪಿರಿಯಾಪಟ್ಟಣದ ಸರ್ಕಾರಿ ಪ್ರೌಢ ಶಾಲಾ ನೂತನ ಕಟ್ಟಡದ ಗುದ್ದಲಿ ಪೂಜೆ ಅಂದಾಜು ವೆಚ್ಚ 31.50
ಪಿರಿಯಾಪಟ್ಟಣ : ನಾನು ಶಾಸಕನಾದ ಗಿನಿಂದ ತಾಲೂಕಿನಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ ಪಕ್ಷದವರನ್ನು ಒಮ್ಮತಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿಯನ್ನು ಮಾಡುತ್ತಿದ್ದೇನೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ತಾಲೂಕಿನ ಚೌತಿ ಆಲನಹಳ್ಳಿ ಸತ್ಯಗಾಲ ಗ್ರಾಮಗಳಲ್ಲಿ ಸುಮಾರು 1.07 ಕೋಟಿ ರು ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ನನಗೆ ಮತಗಳನ್ನು ಕೊಟ್ಟು ನನ್ನನ್ನು ಶಾಸಕನಾಗಿ ಮಾಡಿದ್ದಾರೆ ನಾನು ಕೇವಲ ಮತ ನೀಡಿದ ಹಳ್ಳಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿಲ್ಲ ಬದಲಾಗಿ ತಾಲೂಕಿನ ನಾನು ಹಳ್ಳಿಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ತಿಳಿಸಿದರು. ಬಹಳ ಹಿಂದುಳಿದ ಗ್ರಾಮಗಳಿಗೆ ಸುಮಾರು ನಾಲ್ಕು ಕೋಟಿ ರೂ ಅನುದಾನವನ್ನು ಮಂಜೂರು ಮಾಡಿ ಉತ್ತಮ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ಗ್ರಾಮಸ್ಥರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಿಕೊಳ್ಳುತ್ತಿದ್ದೇನೆ. ಪ್ರತಿ ಗ್ರಾಮಕ್ಕೂ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಶಾಲಾ ಕೊಠಡಿಗಳು ಅಂಗನವಾಡಿ ಕೇಂದ್ರಗಳು ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ನನ್ನ ಮನೆಯನ್ನು ಸಾರ್ವಜನಿಕರ ಭೇಟಿಗೆ ಸದಾ ತೆರೆದಿದ್ದು ಯಾರೇ ಕಷ್ಟ ಎಂದು ಬಂದರೂ ಪಕ್ಷತೀತವಾಗಿ ಸಹಾಯ ಮಾಡುತ್ತಿದ್ದೇನೆ ಇದನ್ನು ಎಲ್ಲರೂ ಅರಿಯಬೇಕು ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ ಚಂದ್ರಮೌಳಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರಭುಪ್ರಸಾದ್ ತಿಮ್ಮೇಗೌಡ ಮಂಜುನಾಥ್ ಸಿದ್ದೇಗೌಡ ರಘುನಾಥ್ ಕುಮಾರ್ ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿಚಂದ್ರ ಹಾಗೂ ಸದಸ್ಯರುಗಳು ಮತ್ತು ಗ್ರಾಮಸ್ಥರು ಹಾಜರಿದ್ದರು