
ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ 2.50 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ ಮಹದೇವ್ ಚಾಲನೆ ನೀಡಿದರು. ತಾಲೂಕಿನ ಗುಡಿ ಭದ್ರನ ಹೊಸಹಳ್ಳಿ ಗ್ರಾಮದಲ್ಲಿ 20.50 ರೂ ವೆಚ್ಚದ ಕುಡಿಯುವ ನೀರಿನ ಮೇಲ್ತೊಟ್ಟಿ ಕಾಮಗಾರಿ ಗುದ್ದಲಿ ಪೂಜೆ , ಕೋಟೆಯನ್ನು ಕೊಪ್ಪಲು ಗ್ರಾಮದಲ್ಲಿ 20.50 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಮೇಲ್ದುಟಿ ಕಾಮಗಾರಿ ಗುದ್ದಲಿ ಪೂಜೆ , ಕಣಗಾಲು ಗ್ರಾಮದಲ್ಲಿ 75 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಮೇಲ್ತುಟಿ ಕಾಮಗಾರಿ ಗುದ್ದಲಿ ಪೂಜೆ , ಕಣಗಾಲು ಗ್ರಾಮ ಪರಿಮಿತಿಯಲ್ಲಿ 47.30 ಲಕ್ಷ ರೂ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಯಾನವನ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ, ಚಾಮರಾಯನಕೋಟೆ ಗ್ರಾಮದಲ್ಲಿ 16.50 ರೂ ವೆಚ್ಚದ ಅಂಗನವಾಡಿ ಕೇಂದ್ರದ ಗುದ್ದಲಿಪೂಜೆ, ಚಿಕ್ಕ ಕಮರವಲ್ಲಿ ಗ್ರಾಮದಲ್ಲಿ 12 ಲಕ್ಷ ರೂ ವೆಚ್ಚದ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನ ಕಾಮಗಾರಿ ಗುದ್ದಲಿ ಪೂಜೆ, ಹಾರನಹಳ್ಳಿ ಗ್ರಾಮದಲ್ಲಿ 31.50 ಲಕ್ಷ ರೂ ವೆಚ್ಚದ ಶಾಲೆಯ ನೂತನ ಕೊಠಡಿಗಳಲ್ಲಿ ಪೂಜೆ, ಚಿಕ್ಕನಹಳ್ಳಿ ಗ್ರಾಮದಲ್ಲಿ 10.60 ಲಕ್ಷ ರೂ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಕಾಮಗಾರಿ ಗುದ್ದಲಿ ಪೂಜೆ,ಸಂಗರ ಶೆಟ್ಟಹಳ್ಳಿ ಗ್ರಾಮದಲ್ಲಿ 16.50 ಲಕ್ಷ ರೂ ವೆಚ್ಚದ ಅಂಗನವಾಡಿ ಕೇಂದ್ರ ಕಾಮಗಾರಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು ತಾಲೂಕಿನ ಗಡಿಭಾಗದಲ್ಲಿ ಇರುವಂತಹ ಕಣಗಾಲು ಗ್ರಾಮದಲ್ಲಿ ಈಗಾಗಲೇ ಸುಮಾರು 1 ಕೋಟಿ ರೂ ಕಾಮಗಾರಿ ಪೂರ್ಣಗೊಂಡಿದೆ. ಈ ಬಾರಿಯೂ ಕಾಂಕ್ರೀಟ್ ರಸ್ತೆ ಸಮರ್ಪಕ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಗ್ರಾಮಕ್ಕೆ ಮೂಲಸೌಕರ್ಯದ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ ಗುಣಮಟ್ಟದ ಕಾಮಗಾರಿ ಆಗಿರಬೇಕು ಎಂದು ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣೆ ಶೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಮ್ಮ ಉಪಾಧ್ಯಕ್ಷ ಕುಮಾರ ಶೆಟ್ಟಿ ಸದಸ್ಯರಾದ ಮನುಗನಹಳ್ಳಿ ಹನುಮಂತು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಮಹದೇವ್ ಮುಖಂಡರಾದ ರವಿ ರಘುನಾಥ್ ತಿಮ್ಮೇಗೌಡ ನಾಗಯ್ಯ ಹೇಮಂತ್ ಕುಮಾರ್, ವಿವೋ ವೈದ್ಯ ತಿಮ್ಮೇಗೌಡ ತಾಲೂಕು ಪಂಚಾಯಿತಿ ಯುವ ಕೃಷ್ಣಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.