ಶ್ರೀ ಚನ್ನಕೇಶವ ದೇವಾಲಯದ ಜಿರ್ಣೋಧಾರಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು. 29/12/2021

ಪಿರಿಯಾಪಟ್ಟಣ : ಪಟ್ಟಣದ ಒಳ ಕೋಟೆಯಲ್ಲಿರುವ ಶ್ರೀ ಚನ್ನಕೇಶವ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ಪುರಾತತ್ವ ಇಲಾಖೆಯ ಡಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಾಲಯಕ್ಕೆ 1.50 ಕೋಟಿ ರೂ ವೆಚ್ಚದ ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇವಾಲಯದ ಸುತ್ತಲಿನ ಜಾಗದ ತೆರವಿನ ಬಗ್ಗೆ ನಿವಾಸಿಗಳಿಗೆ ಯಾವುದೇ ಆತಂಕ ಬೇಡ,ನಾನು ನಿಮ್ಮೊಂದಿಗೆ ಇದ್ದೇನೆ. ಕಮಗರಿ ನಡೆಸಲು ಅನುವು ಮಾಡಿಕೊಡಿ ಪುರಾತತ್ವ ಇಲಾಖೆಗೆ ಹಣದ ಕೊರತೆ ಇದ್ದರೂ ದೇವಾಲಯದ ಜೀರ್ಣೋದ್ಧಾರಕ್ಕೆ ಬರುವ ಅನುದಾನವನ್ನು ಜಾಣ್ಮೆಯಿಂದ ಬಳಸಿಕೊಳ್ಳೋಣ. ಯಾವುದಕ್ಕೂ ಯಾರೂ ಆತಂಕಪಡುವ ಅಗತ್ಯವಿಲ್ಲ ಸಮಸ್ಯೆಯನ್ನು ಚರ್ಚಿಸಿ ಬಗೆಹರಿಸಿಕೊಳ್ಳೋಣ. ಅಧಿಕಾರಿಗಳು ಅಷ್ಟೇ ಜನರ ವಿರುದ್ಧ ಕಾನೂನು ಚಲಾವಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಶ್ರೀ ಚನ್ನಕೇಶವ ಜೀರ್ಣೋದ್ದಾರ ಹೋರಾಟ ಸಮಿತಿ ಅಧ್ಯಕ್ಷ ಪಿಟಿ ವೇಣುಗೋಪಾಲ್ ಮಾತನಾಡಿ ದೇವಾಲಯದ ಸುತ್ತಮುತ್ತ 1500 ಕುಟುಂಬಗಳು ವಾಸವಾಗಿವೆ ಆದರೆ ಪುರಾತತ್ವ ಇಲಾಖೆಗೆ ಸೇರಿಸಿ ದೇವಾಲಯವನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಸಲುವಾಗಿ 2010 ರಲ್ಲಿ ಪುರಾತತ್ವ ಇಲಾಖೆಗೆ ವಹಿಸಬೇಕು ಎಂದು ಆದೇಶ ಮಾಡಿದಾಗ ಇದನ್ನು ಧಿಕ್ಕರಿಸಿ 10000ಕ್ಕೂ ಹೆಚ್ಚು ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಿ ಪುರಾತತ್ವ ಇಲಾಖೆಯ ನಿರ್ದೇಶಕ ಆರ್ ಕೆ ಗೋಪಾಲ್ ರವರಿಗೆ ಮನವರಿಕೆ ಮಾಡಿಕೊಡಲಾಗಿದೆ ಈಗ ಶಾಸಕರು ನಿಮ್ಮ ಜೊತೆ ಇರಲಿದ್ದು ಜನರು ಕಾಮಗಾರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಃಸಿಲ್ದರ್ ಕೆ ಚಂದ್ರಮೌಳಿ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಸದಸ್ಯರಾದ ಪಿ ವಿ ರವಿ ಪ್ರಕಾಶ್ ಸಿಂಗ್ ಮಾಜಿ ಉಪಾಧ್ಯಕ್ಷ ಪಿ ಕೆ ಸುರೇಶ್ ಪುರತತ್ವ ಇಲಾಖೆಯ ನಿವೃತ್ತ ಇಂಜಿನಿಯರ್ ಪಾರ್ಶ್ವನಾಥ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮುಖಂಡರಾದ ಪಿಕೆ ಕುಮಾರ್ ಪಿ. ಜೆ ರವಿ ಹಾಗೂ ಗ್ರಾಮಸ್ಥರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top