
ಬೋರೆಹೊಸಹಳ್ಳಿ ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, ಮಾಕನಹಳ್ಳಿ ಪಾಳ್ಯ ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, ಹೆಚ್ ಮಠದಕೊಪ್ಪಲು ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, ಹೆಚ್ ಬೊರೇ ಕೊಪ್ಪಲು ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, ಚಿಕ್ಕ ಮಳಲಿ ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, ಅರೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕೊಠಡಿ ಉದ್ಘಾಟನೆ ಹಾಗೂ ಹೆಚ್ ಮಠದಕೊಪ್ಪಲು ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕೊಠಡಿ ಉದ್ಘಾಟನೆಯನ್ನು ಶಾಸಕ ಕೆ ಮಹದೇವ್ ನೆರವೇರಿಸಿದರು.
ನಂತರ ಮಾತನಾಡಿದ ಅವರು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಗ್ರಾಮದ ಮುಖಂಡರು ಶಾಸಕರ ಗಮನಕ್ಕೆ ತಂದರು ಇದರಿಂದ ಗರಂ ಆದ ಶಾಸಕ ಕೆ ಮಹದೇವ್, ಸ್ವಾತಂತ್ರ್ಯನಂತರ ಬಸ್ ಕಾಣದ ಊರಿಗೆ ಸಾರಿಗೆ ಬಸ್ ಹಾಕಿಸಿದ್ದೇನೆ, 40 ವರ್ಷಗಳಿಂದ ಶಾಸಕರಾಗಿ ಆಯ್ಕೆಯಾದವರು ಕ್ಷೇತ್ರವನ್ನು ಕಡೆಗಣಿಸಿದ್ದು ಅವರನ್ನು ಪ್ರಶ್ನಿಸಬೇಕು ಸರ್ಕಾರದಿಂದ ಅನುದಾನ ತರುವುದು ಎಂದರೆ ಹೊತ್ತು ತಂದಂತೆ ಅಂದುಕೊಂಡಿದ್ದೀರಾ ? ಜಿಲ್ಲೆಯಲ್ಲಿರುವ ಘಟಾನುಘಟಿ ಶಾಸಕರ ಕ್ಷೇತ್ರಗಳಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ ನಮ್ಮ ತಾಲ್ಲೂಕಿನಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸ ಆಗುತ್ತಿವೆ ಎಂದು ತಿಳಿಸಿದರು. ಈ ತಾಲೂಕಿನಲ್ಲಿ ಈ ಹಿಂದೆ ಮತ ಪಡೆದು ಅಧಿಕಾರದಲ್ಲಿದ್ದವರು ಗ್ರಾಮಗಳ ಬಗ್ಗೆ ನಿರ್ಲಕ್ಷ ವಹಿಸಿದ್ದು ನಾನು ಚುನಾವಣೆ ಸಂದರ್ಭದಲ್ಲಿ ಈ ಗ್ರಾಮಗಳನ್ನು ನೋಡಿ ಆಶ್ಚರ್ಯಗೊಂಡು ಶಾಸಕನಾದ ಮೇಲೆ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಕೋಟಿಗಟ್ಟಲೆ ಅನುದಾನವನ್ನು ನೀಡಲಾಗಿದ್ದು ಇದನ್ನು ಗ್ರಾಮಸ್ಥರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದವರ ಬಗ್ಗೆ ಅವರ ಕೆಲಸವನ್ನು ಸ್ಮರಿಸಿ ಅವರನ್ನು ಬೆಂಬಲಿಸಿದರೆ ಮಾತ್ರ ಅವರ ಕೆಲಸಕ್ಕೆ ಪ್ರತಿಫಲ ದೊರೆತಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಈರಯ್ಯ ಮಲ್ಲಿಕಾರ್ಜುನ್ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮುಖಂಡರಾದ ರಾಮಚಂದ್ರ ಹಾಗೂ ಮತ್ತಿತರರು ಹಾಜರಿದ್ದರು.