
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ರೂರಲ್ ಕಂಪ್ಯೂಟರ್ ಟ್ರೈನಿಂಗ್ ಅಕಡೇಮಿ ವತಿಯಿಂದ ಹಮ್ಮಿಕೊಂಡಿದ್ದ ಆಧಾರ್ ಸೇವಾ ಕೇಂದ್ರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಅವಶ್ಯಕತೆ ಬಹಳ ಇದ್ದು ಇದನ್ನು ಕೆಲವು ವ್ಯಕ್ತಿಗಳು ದುರುಪಯೋಗಪಡಿಸಿಕೊಂಡು ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿತ್ತು. ಆದರೆ ಯಾವ ನಾಗರಿಕನು ಕೂಡ ದೂರನ್ನು ನೀಡಲು ಮುಂದೆ ಬರಲಿಲ್ಲ. ಸಾರ್ವಜನಿಕರಿಗೆ ಅವಶ್ಯಕವಾದ ದಾಖಲಾತಿಗಳನ್ನು ಪಡೆಯುವ ತವಕ ಒಂದೆಡೆಯಾದರೆ ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ವ್ಯಕ್ತಿಗಳ ಮೋಸ ಒಂದೆಡೆ ಇರುತ್ತದೆ. ಆದ್ದರಿಂದ ಇಂತಹ ಮೋಸಕ್ಕೆ ಬಲಿಯಾಗದೆ ಸಾರ್ವಜನಿಕರು ನಿಗದಿತ ಬೆಲೆಯನ್ನು ನೀಡಿ ದಾಖಲೆಗಳನ್ನು ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಸೇವಾ ಕೇಂದ್ರಗಳು ಕೂಡ ಕಾರ್ಯ ನಿರ್ವಹಿಸಿದಾಗ ಮಾತ್ರ ಸ್ವಯಂ ಸೇವೆಗೆ ಅರ್ಥ ದೊರೆಯುತ್ತದೆ. ಈ ಸೇವಾ ಕೇಂದ್ರಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರದೆ ಗ್ರಾಮೀಣ ಭಾಗದ ಜನತೆಗೂ ಕೂಡ ದೊರೆಯುವಂತಾಗಬೇಕು ಅಲ್ಲಿಯೂ ಸೇವಾ ಕೇಂದ್ರಗಳನ್ನು ತೆರೆದು ಉಪಯೋಗವಾಗಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎ. ಟಿ.ಪ್ರಸನ್ನ ಮಾತನಾಡಿ ಈ ಸೇವಾ ಕೇಂದ್ರವು ನಾಲ್ಕು ತಿಂಗಳ ಕಾಲ ಇಲ್ಲಿಯೇ ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ನೂತನ ಆಧಾರ್ ಕಾರ್ಡ್ ನೋಂದಣಿ ಮಾಡಿಕೊಳ್ಳಬಹುದಾಗಿದೆ ಇದನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಸಿಂಗ್,ಸದಸ್ಯರಾದ ಪಿ. ಸಿ.ಕೃಷ್ಣ, ರವಿ, ಗ್ರಾಮ ಪಂಚಾಯಿತಿ ಸದಸ್ಯ ಸತ್ಯನಾರಾಯಣ ಮುಖಂಡ ಉಮೇಶ್, ಅರೋಗ್ಯ ನೀರಿಕ್ಷಕ ಆಧರ್ಶ, ಸೇವಾ ಸಂಸ್ಥೆಯ ಶ್ರೀಕಾಂತ್, ಸಾಕ್ಷಿತ್ ಸೇರಿದಂತೆ ಮತ್ತಿತರರು ಹಾಜರಿದ್ದರು.