
ಪಿರಿಯಾಪಟ್ಟಣ: ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುವವರಿಗೆ ಸದಾ ಸ್ವಾಗತ ಎಂದು ಶಾಸಕ ಕೆ.ಮಹದೇವ್ ಹೇಳಿದರು.ತಾಲ್ಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಸರ್ಕಾರದಿಂದ ಅನುದಾನ ಕುಳಿತ ಜಾಗಕ್ಕೆ ಬರುವುದಿಲ್ಲ, ತಾಲ್ಲೂಕಿನ ಅಭಿವೃದ್ಧಿ ಉದ್ದೇಶದಿಂದ ಹೆಚ್ಚು ಅನುದಾನ ತರುವುದಕ್ಕಾಗಿ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಶತಪ್ರಯತ್ನ ಮಾಡಿ ಅನುದಾನ ತಂದು ಕಾಮಗಾರಿಗಳಿಗೆ ಚಾಲನೆ ನೀಡಬೇಕು, ಪ್ರವಾಹ ಹಾಗೂ ಕೊವಿಡ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಮೊದಲ ಬಾರಿಗೆ ಶಾಸಕನಾದರು ಸರ್ಕಾರದ ಗಮನ ಸೆಳೆದು ಅನುದಾನ ತಂದು ತಾಲ್ಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ ನೀಡುತ್ತಿದ್ದೇನೆ ಆದರೂ ಸಹ ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡಿ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಇದಕ್ಕೆಲ್ಲ ಕಿವಿಗೊಡದೆ ಪಕ್ಷದಲ್ಲಿನ ಯುವಕರು ಹಿರಿಯರಿಗೆ ನಾನು ಶಾಸಕನಾದ ನಂತರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮನವರಿಕೆ ಮಾಡಿಕೊಡಬೇಕು, ಸಾರ್ವಜನಿಕ ಸಮಸ್ಯೆಗಳಿಗೆ ನನ್ನ ವ್ಯಾಪ್ತಿಯಲ್ಲಿ ಕೈಲಾದ ಸಹಕಾರ ನೀಡುವ ಅವಕಾಶವಿದ್ದು ಸಮಸ್ಯೆಗಳನ್ನು ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.
ಈ ವೇಳೆ ಗ್ರಾಮದ ಪಟೇಲ್ ತಮ್ಮಣ್ಣೆಗೌಡ್ರು ನೇತೃತ್ವದಲ್ಲಿ ಹಲವರು ಅನ್ಯ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿದರು.ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ತಾ.ಪಂ ಮಾಜಿ ಸದಸ್ಯ ಜವರಪ್ಪ, ಗ್ರಾ.ಪಂ ಸದಸ್ಯ ರಾಜೇಗೌಡ, ಮುಖಂಡರಾದ ರಾಮಯ್ಯ, ಶ್ರೀನಿವಾಸ್, ರೇಣುಕುಮಾರ್, ಶಿವಲಿಂಗು, ಬಸವರಾಜ, ಶಿವರಾಜ್ ಮತ್ತಿತರಿದ್ದರು.