
ಈ ವೇಳೆ ಸಾರ್ವಜನಿಕ ಆಸ್ಪತ್ರೆಯಲ್ಲಿ 330 ಲೀಟರ್ ಪರ್ ಮಿನಿಟ್ ಆಕ್ಸಿಜನ್ ಜೆನರೇಷನ್ ಪ್ಲಾಂಟ್, 94 ಆಕ್ಸಿಜನ್ ಮ್ಯಾನಿಫೋಲ್ಡ್ ಡಿ-ಟೈಪ್ ಜಂಬೋ ಸಿಲಿಂಡರ್ ಲಭ್ಯವಿದ್ದು 250 ಲೀಟರ್ ಪರ್ ಮಿನಿಟ್ ಆಕ್ಸಿಜನ್ ಜೆನರೇಷನ್ ಪ್ಲಾಂಟ್ ಸಿದ್ಧಗೊಳ್ಳುತ್ತಿದೆ, 25 ICU ಬೆಡ್, 10 ಮಕ್ಕಳ ವಾರ್ಡ್, 70 ಆಕ್ಸಿಜನ್ ಬೆಡ್ ಗಳು ಲಭ್ಯವಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ದೇವಿಕಾ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ 24 ಗಂಟೆ ಆಕ್ಸಿಜನ್ ಸಮರ್ಪಕವಾಗಿ ಪೂರೈಸಲು ಮತ್ತು ಅಗತ್ಯಕ್ಕನುಸಾರ ಔಷದಿಗಳನ್ನೂ ಸಿದ್ದ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೂಚಿಸಿದರು.
ನಂತರ ಕಗ್ಗುಂಡಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮುಂಜಾಗ್ರತಾಕ್ರಮವಾಗಿ ಕೋವಿಡ್ ಸೆಂಟರ್ ತೆರೆಯಬೇಕಾದಲ್ಲಿ ಮೂಲಭೂತ ಸೌಕರ್ಯದ ಕೊರತೆ ಇಲ್ಲದಂತೆ ಹಾಗು ಕೋವಿಡ್ ವ್ಯಾಕ್ಸಿನ್ ಪಡೆಯದೇ ಇರುವವರನ್ನು ಆದಷ್ಟು ಬೇಗ ವ್ಯಾಕ್ಸಿನೇಷನ್ ಮಾಡಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಶರತ್ ಬಾಬು ರವರಿಗೆ ಸೂಚಿಸಿದರು.
ಇದೆ ವೇಳೆ ಕೋವಿಡ್ ವಾರ್ ರೂಮ್ ಹಾಗು ಅಬ್ಬಳತಿ ವಸತಿ ಶಾಲೆಗೆ ಭೇಟಿ ನೀಡಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್, ತಹಸೀಲ್ದಾರ್ ಕೆ.ಚಂದ್ರಮೌಳಿ ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್, ಪುರಸಭಾ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ, ಅರೋಗ್ಯ ನಿರೀಕ್ಷಕ ಆದರ್ಶ್, ಹಾಗು ಮತ್ತಿತರರು ಹಾಜರಿದ್ದರು