ರಾಜಕಾರಣವನ್ನು ಮಾಡದೆ ಪ್ರಾಮಾಣಿಕವಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 10/01/2022

ಶಾಸಕ ಕೆ.ಮಹದೇವ್ ತಾಲೂಕಿನ ಭೂತನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಮತ್ತು ನನ್ನ ಮಗ ಅಧಿಕಾರಕ್ಕೆ ಬರಬಾರದು ಎಂದು ವಿರೋಧಿಗಳು ಇಲ್ಲಸಲ್ಲದ ಆರೋಪಗಳನ್ನು ಜನಸಾಮಾನ್ಯರ ಮುಂದೆ ಹೇಳುತ್ತಾ ತಿರುಗುತ್ತಿದ್ದರು. ಆದರೆ ಜನಸಾಮಾನ್ಯರು ಇದ್ಯಾವುದಕ್ಕೂ ಕಿವಿಗೋಡದೆ ನನಗೆ ಮತ ನೀಡಿ ಶಾಸಕನಾಗಿ ತಾಲೂಕಿನ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ ಅಲ್ಲದೆ ನನ್ನ ಮಗ ಪಿ.ಎಂ. ಪ್ರಸನ್ನ ಕೂಡ ಮೈಮುಲ್ಅ ಧ್ಯಕ್ಷನಾಗಲು ಜನತೆಯು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಅದಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ನಾನು ಶಾಸಕರಾದರೆ ತಾಲೂಕಿನಲ್ಲಿ ಹೆಚ್ಚಿನ ಪೊಲೀಸ್ ಠಾಣೆಗಳು ನಿರ್ಮಾಣವಾಗುತ್ತದೆ ಎಂದು ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ಆದರೆ ಇಂದು ತಾಲೂಕಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಪ್ರತಿ ಗ್ರಾಮಕ್ಕೂ ಕಲ್ಪಿಸುವುದರ ಮೂಲಕ ಶಾಂತಿಯುತ ರಾಜಕಾರಣ ಮಾಡುತ್ತಿದ್ದು ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಈ ಹಿಂದೆ ಇದ್ದ ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪ್ರತಿನಿತ್ಯ ಕಿರುಕುಳ ನೀಡುತ್ತಾ ಸುಳ್ಳು ಮೊಕದ್ದಮೆಗಳನ್ನು ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ.
ನಾನು ಶಾಸಕನಾಗಿ ಆಯ್ಕೆಯಾದ ನಂತರ ಎಂದಿಗೂ ಜಾತಿಯ ದ್ವೇಷದ ರಾಜಕಾರಣ ಮಾಡಿಲ್ಲ. ಶ್ರಮ ಮತ್ತು ಬದ್ಧತೆಯ ಮೂಲಕ ರಾಜಕೀಯ ಮಾಡುತ್ತಿದ್ದೇನೆ. ಈ ಮೂಲಕ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ಹಾಗೂ ಸವಲತ್ತುಗಗನ್ನು ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿದ್ದೇನೆ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ನನ್ನ ಅಭಿವೃದ್ಧಿಯ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಪಿ. ಎಂ. ಪ್ರಸನ್ನ ಮಾತನಾಡಿ ತಾಲೂಕಿನಲ್ಲಿ ಹಾಲು ಉತ್ಪಾದಕರ 180 ಸಹಕಾರ ಸಂಘಗಳಿದ್ದು, ನೂರು ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ಇದ್ದು ಇನ್ನುಳಿದ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದೇನೆ. ಪ್ರಸ್ತುತ 1 ಕೋಟಿ 15 ಲಕ್ಷ ನೂತನ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ದೇಶದಲ್ಲಿಯೇ ಮೈಸೂರು ಹಾಲಿಗೆ ಬಹಳಷ್ಟು ಬೇಡಿಕೆ ಇದ್ದು ಇಂದು 1 ಲಕ್ಷ 40 ಸಾವಿರ ಗುಣಮಟ್ಟದ ಹಾಲು ತಾಲೂಕಿನಿಂದ ರವಾನೆಯಾಗುತ್ತಿದೆ. ಒಕ್ಕೂಟದ ವತಿಯಿಂದ ವ್ಯವಸಾಯದ ಪರಿಕರಗಳಿಗೆ ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಉತ್ಪಾದಕರಿಗೆ ಮತ್ತು ಜಾನುವಾರುಗಳಿಗೆ ಕೂಡ ವಿಮಾ ಯೋಜನೆಯೂ ಇದೆ. ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಸೇರಿದಂತೆ ಇತರೆ ಕಾಯಿಲೆಗಳ ನಿವಾರಣೆಗಾಗಿ ಪಶುಸಂಗೋಪನ ಇಲಾಖೆಗೆ 40 ಲಕ್ಷ ರೂಗಳನ್ನು ಜಿಲ್ಲಾ ಒಕ್ಕೂಟದ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕೂಟದ ಸದಸ್ಯ ಎಚ್. ಡಿ.ರಾಜೇಂದ್ರ, ಭೂತನಹಳ್ಳಿ ಮಹಿಳಾ ಅಧ್ಯಕ್ಷೆ ರಾಧಮ್ಮ, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ,ಸದಸ್ಯ ರವಿ, ಮಂಜುಳಾ, ಮಹದೇವಮ್ಮ, ತಾಪಂ ಮಾಜಿ ಸದಸ್ಯ ರಂಗಸ್ವಾಮಿ, ರಘುನಾಥ್, ಮಾಜಿ ಸದಸ್ಯ ರವಿ, ಮುಖಂಡರಾದ ಜವರಪ್ಪ, ರಾಜೇಗೌಡ, ಕರಿಗೌಡ, ಶಿವಣ್ಣ, ತಿಮ್ಮಯ್ಯ, ಸಹಕಾರ ಸಂಘದ ವಿಸ್ತರಣಾ ಅಧಿಕಾರಿ ನಿಶ್ಚಿತ್, ವೀಣಾ, ಸಚಿನ್, ಮುಖ್ಯ ಕಾರ್ಯನಿರ್ವಾಹಕರಾದ ಸುನಿತಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top