
ತಾಲ್ಲೂಕಿನ ಆನಂದಗೆರೆ ಹಾಗು ಬಿಳುಗುಂದ ಗ್ರಾಮಗಳಲ್ಲಿ 36 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಕೆ.ಮಹದೇವ್ ಮಾತನಾಡಿದರು, ತಾಲ್ಲೂಕಿನ ಗಡಿಭಾಗ ಹಾಗೂ ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆ ಸಚಿವರು ಹಾಗೂ ಮೇಲಧಿಕಾರಿಗಳಿಗೆ ಮನವಿ ಮಾಡಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಶಾಸಕನಾಗಿ ಆಯ್ಕೆಯಾದ ನಂತರ ಸ್ಥಾನದ ಘನತೆಗೆ ಚ್ಯುತಿ ಬರದಂತೆ ಸಾರ್ವಜನಿಕ ಸಮಸ್ಯೆ ಮತ್ತು ಕೆಲಸ ಗಳಿಗೆ ಮೊದಲ ಆದ್ಯತೆ ನೀಡಿ ನಿರ್ಲಕ್ಷ್ಯವಹಿಸದೆ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ವಿರೋಧಿಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಇದ್ಯಾವುದಕ್ಕೂ ಪ್ರಜ್ಞಾವಂತ ಮತದಾರರು ಕಿವಿಗೊಡದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯು ನನ್ನನ್ನು ಬೆಂಬಲಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವದಿಸಬೇಕು ಎಂದು ಕೋರಿದರು.
ಇದೇ ವೇಳೆ ಬೆಣಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ದೊಡ್ಡನೇರಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೊಠಡಿಗಳನ್ನು ಉದ್ಘಾಟಿಸಿದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಬಿಇಒ ವೈ.ಕೆ ತಿಮ್ಮೇಗೌಡ, ಚನ್ನಕಲ್ ಕಾವಲು ಗ್ರಾ.ಪಂ ಅಧ್ಯಕ್ಷೆ ಮಂದಾರ, ಉಪಾಧ್ಯಕ್ಷ ಧನರಾಜ್, ಸದಸ್ಯ ಗಣೇಶ್, ಪಿಡಿಒ ಮಂಜುನಾಥ್, ಹಾರನಹಳ್ಳಿ ಗ್ರಾ.ಪಂ ಅಧ್ಯಕ್ಷೆ ರವೀಣಾ, ಉಪಾಧ್ಯಕ್ಷ ಶೇಖರ್ ಮತ್ತು ಸದಸ್ಯರು, ಜಿಪಂ ಎಇಇ ಮಂಜುನಾಥ್, ಆರ್ ಡಬ್ಲ್ಯುಎಸ್ ಎಇಇ ಪ್ರಭು, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.