
ಎರಡು ವ್ಯಾಕ್ಸಿನ್ ಪಡೆದ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಈಗ ಮೂರನೇ ಬೂಸ್ಟರ್ ವ್ಯಾಕ್ಸಿನ್ ನೀಡುತ್ತಿದ್ದು ಯಾವುದೇ ಭಯವಿಲ್ಲದೆ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ಕೆ ಮಹದೇವ್ ಕರೆನೀಡಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಸ್ವತಃ ಲಸಿಕೆ ಹಾಕಿಸಿ ಕೊಳ್ಳುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯಾದ್ಯಂತ ಇಂದು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಹಾಕಲಾಗುತ್ತಿದ್ದು 2 ಡೋಸ್ ಪಡೆದು 9 ತಿಂಗಳು ಸಂಪೂರ್ಣಗೊಂಡ 60 ವರ್ಷ ಮೇಲ್ಪಟ್ಟವರಿಗೆ ಈಗ ಬೂಸ್ಟರ್ ಡೋಸ್ ಹಾಕಿಸಲಾಗುತ್ತದೆ ಇಲ್ಲಿಯತನಕ ವ್ಯಾಕ್ಸಿನ್ ತೆಗೆದುಕೊಳ್ಳುವವರು ಈಗ ವ್ಯಾಕ್ಸಿನ್ ಪಡೆದುಕೊಂಡು ಕೊರೋನ ಅಪಾಯದಿಂದ ಪಾರಾಗಬೇಕೆಂದು ಶಾಸಕರು ಮನವಿ ಮಾಡಿದರು.
15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಅವರು ಒದುವ ಶಾಲೆಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು ಈಗ ಶೇಕಡ ಎಂಬತ್ತರಷ್ಟು ಮುಗಿದಿದ್ದು, ಮಕ್ಕಳು ಶಾಲೆಗೆ ಬಾರದೇ ಇರುವುದರಿಂದ ಅಂತಹ ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ನೀಡುವ ಮೂಲಕ ಶೇಕಡ ನೂರರಷ್ಟು ಆಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಶರತ್ ಬಾಬು ತಿಳಿಸಿದರು.
ಸ್ವತಃ ನಾನೇ ಲಸಿಕೆ ಪಡೆದುಕೊಂಡಿದ್ದು ಸಾರ್ವಜನಿಕರು ಯಾವುದೇ ಭಯಪಡದೆ ಲಸಿಕೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೋರೊನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಬಂದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಯಾರು ನಿರ್ಲಕ್ಷ ಮಾಡಬಾರದು ಬೆಂಗಳೂರು ಸೇರಿದಂತೆ ಇತರ ಕಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಸಾಕಷ್ಟು ಜನ ತೊಂದರೆ ಅನುಭವಿಸುತ್ತಿರುವುದನ್ನು ನೋಡುತ್ತಿದ್ದು ನಮ್ಮ ತಾಲೂಕಿನಲ್ಲಿ ಆ ರೀತಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಎಲ್ಲರೂ ಮಾಸ್ಕ್ ಗಳನ್ನು ಧರಿಸಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು ಎಂದರು .
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದೇವಿಕ, ವೈದ್ಯರಾದ ಡಾ. ಶಿವಪ್ರಕಾಶ್, ಡಾ. ಅನಿಲ್ ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಪಿ ಪಿ ಲತಾ, ತಾಲೂಕು ಜಾ. ದಳ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಪುರಸಭಾ ಸದಸ್ಯ ನಿರಂಜನ್, ಮುಖಂಡರಾದ ರಘುನಾಥ್, ಇಲಿಯಾಸ್ ಮತ್ತಿತರರು ಉಪಸ್ಥಿತರಿದ್ದರು