ನೀರು ಗಂಟಿಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದರ ಮೂಲಕ ಯೋಗಕ್ಷೇಮ ಕಾಪಾಡುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 14/01/2022

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ  2022ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಾರ್ವಜನಿಕ ಸೇವಾ ಕಾರ್ಯದಲ್ಲಿ ಪ್ರತಿಯೊಬ್ಬ ನೌಕರರ ಶ್ರಮ ಅತ್ಯಮೂಲ್ಯವಾದದ್ದು. ಇವರು ಮಾಡುವ ಕರ್ತವ್ಯದಿಂದ ಇಲಾಖೆಗೆ ಹಾಗೂ ಚುನಾಯಿತ ಪ್ರತಿನಿದಿಗಳಿಗೆ ಮತ್ತಷ್ಟು ಮೌಲ್ಯ ಹೆಚ್ಚಾಗುತ್ತದೆ.ಆದ್ದರಿಂದ ನೌಕರರು ತಮ್ಮಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು.ಈ ಸಂದರ್ಭದಲ್ಲಿ ಇವರುಗಳ ಯೋಗಕ್ಷೇಮ ಕೂಡ ಮುಖ್ಯವಾಗಿದ್ದು, ಇಲಾಖೆಯು ಇವರುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು. 

ತಾಲ್ಲೂಕು ಪಂಚಾಯತಿ ಕಾರ್ಯನಿವಾಹಕಾಧಿಕಾರಿ ಕೃಷ್ಣ ಕುಮಾರ್ ಮಾತನಾಡಿ ನೀರು ಗಂಟಿಗಳ ಅನುಮೋದನೆಗೆ ಕ್ರಮ ಕೈಗೊಳ್ಳಲಾಗಿದೆ. ಇವರುಗಳಿಗೆ ಸಮವಸ್ತ್ರ, ವೇತನ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಇಲಾಖೆ ನೀಡುತ್ತಿದೆ.ಇವರುಗಳ ಸಂಬಂಧಿಕರುಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೆ ಚಾಪು ಮೂಡಿಸುತ್ತಾ ಸಾಮಾಜಿಕ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಇದರ ಜೊತೆಗೆ ಈ ನೌಕರರು ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ಧನರಾಜ್, ಸದಸ್ಯ ದಿನೇಶ್ ಕಿತ್ತೂರು, ವ್ಯವಸ್ಥಾಪಕ ಗಜೇಂದ್ರ, ಸಂಘದ ಅಧ್ಯಕ್ಷ ಸುಬ್ಬಣ್ಣ, ಗೌರವಾಧ್ಯಕ್ಷ ಪುಟಸ್ವಾಮಿ ಗೌಡ, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಸೋಮೇಗೌಡ, ಸ್ವಾಮಿ, ಖಜಾಂಚಿ ಪ್ರಶಾಂತ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top