
ನವಿಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿ ಬೊಕ್ಕೆ ಗ್ರಾಮದಲ್ಲಿ ಅಂಗನವಾಡಿ ಕೊಠಡಿಯನ್ನು ಶಾಸಕ ಕೆ ಮಹದೇವ್ ಉದ್ಘಾಟಿಸಿದರು.
ಈ ವೇಳೆ ಕಾಡಂಚಿನ ನವಿಲ್ ಊರಿನಿಂದ ಕರಡಿ ಬಗ್ಗೆ ಗ್ರಾಮಕ್ಕೆ ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡಲಾಗಿದ್ದು ಈಗ ಅದು ಹಾಳಾಗಿದೆ ಆದ್ದರಿಂದ ರಸ್ತೆ ಕಾಮಗಾರಿ ಮಾಡಿಕೊಡಬೇಕೆಂದು ಸ್ಥಳೀಯ ಸಾರ್ವಜನಿಕರು ಹಾಗೂ ಒಂಬತ್ತನೆಯ ಕಡೆಯಿಂದ ಬರುವ ಟಿಬೆಟಿಯನ್ ಜನರು ಮನವಿ ಮಾಡಿದರು.
ಜನರ ಪತ್ರ ಪಡೆದು ಶಾಸಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಸರ್ವೆ ಮಾಡಿಸಿ ಕಾಮಗಾರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟರು
ಈಗಾಗಲೇ ಮೈಸೂರು ಜಿಲ್ಲಾ ಮೈಮುಲ್ ಅಧ್ಯಕ್ಷ ಪ್ರಸನ್ನ ಅವರ ಜೊತೆ ಮಾತುಕತೆ ನಡೆಸಲಾಗಿದೆ ಇಲ್ಲಿಗೆ ಹಾಲಿನ ಡೈರಿ ಮಂಜೂರು ಮಾಡಿಸಿ ಕೊಡುತ್ತೇನೆ ಎಂದು ಭರವಸೆ ಕೊಟ್ಟರು
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಟಿ ರಂಗಸ್ವಾಮಿ ಮತ್ತು ಈರಯ್ಯ ಮಾತನಾಡಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಘುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಚೆಲುವರಾಜ್ ಶಾಂತಮ್ಮ ಸರೋಜಮ್ಮ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಪಿಡಿಓ ರವಿ ಸಿಡಿಪಿಓ ಕುಮಾರ್ ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ ಎಂಜಿನಿಯರ್ ಗಳಾದ ಪ್ರಭು ಮಂಜುನಾಥ್ ಮುಖಂಡರುಗಳಾದ ಸ್ವಾಮಿಗೌಡ ರಘುರಾಜ್ ಅಶ್ವಿನಿ ಕುಮಾರ್ ಶಿವರಾಜು ಗಣೇಶ್ ಮತ್ತಿತರರು ಹಾಜರಿದ್ದರು